Daily Horoscope: ದಿನಭವಿಷ್ಯ 25-02-2021 Today astrology

ಶ್ರೀ ಗುರು ರಾಘವೇಂದ್ರ ಸ್ವಾಮಿ ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ..

Written by - ZH Kannada Desk | Last Updated : Feb 25, 2021, 07:56 AM IST
  • ಮಿಥುನ ರಾಶಿಯವರು ಬಹುಕಾಲದಿಂದ ಎದುರಿಸುತ್ತಿದ್ದ ಸಮಸ್ಯೆಗೆ ಈ ದಿನ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳುವಿರಿ
  • ಕನ್ಯಾ ರಾಶಿಯವರು ಆರೋಗ್ಯದ ಕಡೆ ಗಮನ ಕೊಡುವುದು ಒಳಿತು.
  • ಮಕರ ರಾಶಿಯವರು ವ್ಯವಹಾರದ ಕೌಶಲ್ಯತೆಯನ್ನು ಸಂಪೂರ್ಣ ಮನದಟ್ಟು ಮಾಡಿಕೊಳ್ಳಿರಿ ಅದು ನಿಮ್ಮ ಅಭಿವೃದ್ಧಿಗೆ ಅನುಕೂಲವಾಗಲಿದೆ
Daily Horoscope: ದಿನಭವಿಷ್ಯ 25-02-2021 Today astrology

Daily horoscope (ದಿನಭವಿಷ್ಯ 25-02-2021) : ಶ್ರೀ ಗುರು ರಾಘವೇಂದ್ರ ಸ್ವಾಮಿ ಕೃಪೆಯಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೀಗಿದೆ.. 

ಮೇಷ ರಾಶಿ :
ಖರೀದಿ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಿ, ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ವ್ಯಾಪಾರ ಪ್ರಕ್ರಿಯೆಗಳು ಉತ್ತಮವಾಗಿರಲಿವೆ. ಸಹೋದರ ವರ್ಗದಿಂದ ಅನಗತ್ಯವಾಗಿ ವಿವಾದಗಳು ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರದ ಪ್ರಾರಂಭವು ಅತ್ಯುತ್ತಮವಾಗಿ ಹೊರಹೊಮ್ಮಲಿದೆ ಹಾಗೂ ಗುಣಮಟ್ಟದ ಆರ್ಥಿಕತೆಯನ್ನು ನಿಮಗೆ ದಯಪಾಲಿಸಲಿದೆ. 

ವೃಷಭ ರಾಶಿ :
ಪ್ರಿಯಕರನನ್ನು ನಿಮ್ಮ ಚುಚ್ಚುಮಾತುಗಳಿಂದ ದೂರ ತಳ್ಳಬೇಡಿ ಮುಂದೆ ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಬರಬಹುದು. ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ. ಇದರಲ್ಲಿ ನಿಮ್ಮ ಬದ್ಧತೆ ಪ್ರದರ್ಶಿಸಿ ಉತ್ತಮ ಹೆಸರು ಹಾಗೂ ಅವಕಾಶಗಳು ಮುಂದೆ ಕಾಣಬಹುದು.  

ಮಿಥುನ ರಾಶಿ :
ಬಹುಕಾಲದಿಂದ ಎದುರಿಸುತ್ತಿದ್ದ ಸಮಸ್ಯೆಗೆ ಈ ದಿನ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಜೀವನ ಮಟ್ಟ ಸುಧಾರಣೆಗೆ ವಿಶೇಷ ಚಟುವಟಿಕೆಗಳನ್ನು ಪ್ರಾರಂಭ ಮಾಡಲು ಸಿದ್ಧರಾಗಬಹುದು. ಅನುಮಾನಸ್ಪದ ಆರ್ಥಿಕ ಯೋಜನೆಗಳನ್ನು ಆದಷ್ಟು ದೂರವಿಡಿ. ಪ್ರಣಯದ ಆಸಕ್ತಿಯೂ ನಿಮ್ಮಲ್ಲಿ ಹೆಚ್ಚಾಗಿ ಕಂಡು ಬರಲಿದೆ.  

ಕರ್ಕಾಟಕ ರಾಶಿ :
ಪ್ರಣಯದಲ್ಲಿ ನೆಮ್ಮದಿ ಹಾಳಾಗುತ್ತದೆ. ಸ್ನೇಹಿತರಿಂದ ನಿರಾಳವಾಗುವಿರಿ. ದೂರದ ಪ್ರಯಾಣ ಬೇಡ. ಹೊಸ ವಾಹನ ಖರೀದಿ ವಿಚಾರ ಮುಂದೂಡುವುದು ಒಳಿತು. ಜಮೀನು ವಿಚಾರದಲ್ಲಿ ಹೊಸ ಆವಿಷ್ಕಾರಕ್ಕೆ ಕೈ ಹಾಕುವುದು ಒಳಿತು. ದಿನಸಿ ವ್ಯಾಪಾರಸ್ಥರು, ಕಬ್ಬಿಣ ವ್ಯಾಪಾರಸ್ಥರು, ಕಲ್ಲು ಸಿಮೆಂಟ್ ವ್ಯಾಪಾರಸ್ಥರು, ಮರದ ವ್ಯಾಪಾರಸ್ಥರಿಗೆ, ಒಳ್ಳೆಯ ಲಾಭವಾಗಲಿದೆ. ಹಣ ಉಳಿತಾಯದ ಬಗ್ಗೆ ವಿಚಾರ ಮಾಡುವಿರಿ.  

ಇದನ್ನೂ ಓದಿ - ಪೂಜೆ, ಆರತಿ ವೇಳೆ ಗಂಟೆ ಬಾರಿಸುವ ಹಿಂದಿನ ಉದ್ದೇಶ ತಿಳಿದಿದೆಯಾ?

ಸಿಂಹ ರಾಶಿ : 
ನಿಮ್ಮ ಏಕಾಂಗಿತನ ಸ್ವಭಾವವನ್ನು ಕಡಿಮೆ ಮಾಡಿಕೊಂಡು ಆದಷ್ಟು ಜನರೊಂದಿಗೆ ಬೆರೆಯಲು ಮುಂದಾಗಿ. ನಿಮ್ಮ ದಾಂಪತ್ಯ ಜೀವನವನ್ನು ಉತ್ತಮಪಡಿಸಿಕೊಳ್ಳಲು ಇದು ಶುಭ ಸಮಯ. ಸಭಾ ಗೋಷ್ಠಿಗಳು, ವೈಜ್ಞಾನಿಕ ಪ್ರದರ್ಶನಗಳು ನಿಮ್ಮ ಜ್ಞಾನವನ್ನು ಹೆಚ್ಚುಮಾಡಲು ಸಹಾಯವಾಗುತ್ತದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ನೆಮ್ಮದಿ ಹಾಳಾಗಲಿದೆ. ಪೂಜೆ ಪುನಸ್ಕಾರಕ್ಕೆ ಸಹಾಯ ಮಾಡುವಿರಿ. ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮಾಡುವಿರಿ. 

ಕನ್ಯಾ ರಾಶಿ: 
ಗುರುಹಿರಿಯರ ಕಡೆಯಿಂದ ಮನಸ್ತಾಪವಾಗಲಿದೆ. ಪತಿ-ಪತ್ನಿ ನೆಮ್ಮದಿ ಹಾಳಾಗುತ್ತದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಮನಸ್ತಾಪವಾಗಲಿದೆ. ಸಹೋದರ ಸಹೋದರಿಯರ ಕಡೆಯಿಂದ ಬೇಸರದ, ಸನ್ನಿವೇಶಗಳು ಕಾಣುವವು. ಶಾಂತಿಗಿಂತ ಅಶಾಂತಿ ಹೆಚ್ಚು ಅನುಭವಿಸುವಿರಿ. ಯಾರಿಂದ ನಿಮಗೆ ಸಹಾಯ ಸಿಗಲಾರದು. ಏಕಾಂಗಿಯಾಗಿ ಹೋರಾಡಬೇಕಾಗುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು.  

ತುಲಾ ರಾಶಿ :
ನಿಮ್ಮ ಆಸಕ್ತಿದಾಯಕ ಕಾರ್ಯಗಳನ್ನು ಮುಂದುವರಿಸುವ ಹಾಗೂ ನಿಮ್ಮ ಮನಸ್ಸಿಗೆ ಹೆಚ್ಚು ಆನಂದ ನೀಡುವ ಕಾರ್ಯಗಳನ್ನು ಮಾಡಲು ಬಯಸುವಿರಿ. ಸೃಜನಾತ್ಮಕ ಚಟುವಟಿಕೆಯಿಂದ ಆರ್ಥಿಕ ಸ್ಥಿತಿಯನ್ನು ಅಥವಾ ಸಣ್ಣಮಟ್ಟದ ಯೋಜನೆಯನ್ನು ಲಾಭದಾಯಕವಾಗಿ ಮಾರ್ಪಡಿಸಬಹುದಾಗಿದೆ. ನಿಮ್ಮ ಸಂಗಾತಿಯು ಸಂತೋಷಗೊಳ್ಳಲು ನಿಮ್ಮಿಂದ ಪ್ರಯತ್ನ ನಡೆಸುವಿರಿ.  

ವೃಶ್ಚಿಕ ರಾಶಿ : 
ಕುಟುಂಬದಲ್ಲಿ ಶುಭ ಸೂಚಕಗಳು ಕಾಣಲಿವೆ. ಹಿರಿಯರ ಜೊತೆ ಹೊಂದಿಕೊಂಡು ಹೋದರೆ ಸಮಸ್ಯೆಗಳು ಬಗೆಹರಿಯಲಿವೆ. ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ. ನಿಮ್ಮನ್ನು ವಿರೋಧಿಸುವವರು ಇಂದು ನಿಮಗೆ ಗೌರವ ನೀಡುತ್ತಾರೆ. ವಿರೋಧಿಗಳು ನಿಮಗೆ ಶರಣಾಗುವರು. ಮದುವೆ ಯೋಗ ಕೂಡಿ ಬರಲಿದೆ. ಹಣ ಕಾಸಿನಿಂದ, ಕೊಂಚ ನೆಮ್ಮದಿ ಸಿಗಲಿದೆ. ಕೆಲಸ ಹುಡುಕುವವರಿಗೆ ಕೆಲಸ ಸಿಗಲಿದೆ.  

ಇದನ್ನೂ ಓದಿ - Vastu Tips - ಸುಖ ದಾಂಪತ್ಯ ಜೀವನಕ್ಕೆ ಮನೆಯ ಈ ದಿಕ್ಕಿನಲ್ಲಿರಲಿ ರಾಧಾ-ಕೃಷ್ಣರ ಭಾವಚಿತ್ರ

ಧನಸ್ಸು ರಾಶಿ :
ನಿಮ್ಮ ಉತ್ತಮ ರೀತಿಯ ಆಲೋಚನೆಗಳನ್ನು ಅಳವಡಿಸಿಕೊಂಡು ನಕಾರಾತ್ಮಕ ಭಾವನೆಯನ್ನು ತೆಗೆದುಹಾಕಿ. ಕೆಲವು ಆಸೆಆಕಾಂಕ್ಷೆಗಳು ವಿರುದ್ಧತೆಗಳಿಂದ ಕೂಡಿರುತ್ತದೆ, ಆದಷ್ಟು ಆಗುವ ಕೆಲಸದ ಬಗ್ಗೆ ಯೋಚಿಸಿ. ಕೆಲಸದಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಿ. ಆರ್ಥಿಕ ಲಾಭಗಳು ನಿಮ್ಮ ನಿರೀಕ್ಷೆಯಂತೆ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.  

ಮಕರ ರಾಶಿ :
ಯಾವಾಗಲೂ ಕಲ್ಪನಾಲೋಕದಲ್ಲಿ ಕಾಲಕಳೆಯುವುದು ಅದೇ ನಿಜವಾದ ಭಾವನೆ ಆವರಿಸಬಹುದು, ವಾಸ್ತವಾಂಶ ಪರಿಗಣನೆ ಮಾಡುವುದು ಜೀವನದ ಬೆಳವಣಿಗೆ ಸಹಕಾರ ಆಗಲಿದೆ. ವ್ಯವಹಾರದ ಕೌಶಲ್ಯತೆಯನ್ನು ಸಂಪೂರ್ಣ ಮನದಟ್ಟು ಮಾಡಿಕೊಳ್ಳಿರಿ ಅದು ನಿಮ್ಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ ಜಾಗೃತೆ ವಹಿಸಿ. ನಂಬಿದವರ ಕಡೆಯಿಂದ ಮನಸ್ತಾಪ ಆಗಲಿದೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ದೂರವಾಗಲಿದೆ.

ಕುಂಭ ರಾಶಿ : 
ನಿವೇಶನ ಖರೀದಿ ವಿಚಾರ ಮಾಡುವಿರಿ. ಹಳೆಯ ನಿವೇಶನದಲ್ಲಿ ಗೃಹ ಕಟ್ಟಡ ವಿಚಾರ ಮಾಡುವಿರಿ. ಆಸ್ತಿ ವಿಕ್ರಯ ಮಾಡುವ ವಿಚಾರ ಮಾಡುವಿರಿ. ಹೊಸ ಉದ್ಯೋಗ ಪ್ರಾರಂಭಿಸುವ ವಿಚಾರ ಮಾಡುವಿರಿ. ಹೋಟೆಲ್ ವ್ಯಾಪಾರ ನಡೆಸುವವರಿಗೆ, ಲಾಭದಾಯಕವಾಗಲಿದೆ. ದವಸ ಧಾನ್ಯ ವ್ಯಾಪಾರ ಮಾಡುವವರಿಗೆ ಲಾಭದಾಯಕವಾಗಲಿದೆ. ಕಲಾವಿದರಿಗೆ ಪುರಸ್ಕಾರ ಸಿಗಲಿದೆ.  

ಮೀನ ರಾಶಿ : 
ನಿಮ್ಮ ಹೊಸದಾದ ಆಲೋಚನೆಗಳಿಗೆ ಯೋಗ್ಯ ಕೇಳುಗರು ಇಲ್ಲದೆ ಅದು ನಶಿಸಿ ಹೋಗಬಹುದು. ಹೊಸ ಸಂಶೋಧನೆ ಅಥವಾ ಕುತೂಹಲಕಾರಿ ವಿಷಯಗಳು ಅಧ್ಯಯನ ಮಾಡುವ ದೃಷ್ಟಿಕೋನ ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ಯಾರೋ ಹೇಳಿದ ವಿಷಯವನ್ನು ನಂಬಿ ಕೂರಬೇಡಿ ಅದರ ಸತ್ಯಾಸತ್ಯತೆ ಪರಾಮರ್ಶಿಸಿ. 

ಇದನ್ನೂ ಓದಿ - Money: ನೀವು ಆರ್ಥಿಕವಾಗಿ ಬಲಿಷ್ಠರಾಗಬೇಕೆ ಹಾಗಿದ್ರೆ ಈ 7 ನಿಯಮಗಳನ್ನು ಪಾಲಿಸಿ..!

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News