Daily Horoscope: ದಿನಭವಿಷ್ಯ 27-02-2021 Today astrology

ಶ್ರೀ ಕ್ಷೇತ್ರ  ತಿರುಮಲೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ  ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Written by - ZH Kannada Desk | Last Updated : Feb 27, 2021, 07:10 AM IST
  • ವೃಷಭ ರಾಶಿಯವರು ಇಂದು ಶಿವ ದೇವಾಲಯದಲ್ಲಿ ತುಪ್ಪದ ದೀಪ ಹಚ್ಚುವುದರಿಂದ ಒಳ್ಳೆಯದಾಗಲಿದೆ
  • ತುಲಾ ರಾಶಿಯವರಿಗೆ ಭಗವಂತನ ಕೃಪೆಯಿಂದ ಮನದಲ್ಲಿ ಧನ್ಯತಾಭಾವ ಮೂಡುವುದು
  • ಕುಂಭ ರಾಶಿಯವರಿಗೆ ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು
Daily Horoscope: ದಿನಭವಿಷ್ಯ 27-02-2021 Today astrology

Daily horoscope (ದಿನಭವಿಷ್ಯ 27-02-2021) :  ಶ್ರೀ ಕ್ಷೇತ್ರ  ತಿರುಮಲೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ  ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ :- ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಗಳು ಪೂರ್ಣಗೊಳ್ಳುವವು. ಹಣಕಾಸಿನ ಸಮಸ್ಯೆ ಕಡಿಮೆ ಆಗುವುದು. ದೊಡ್ಡ ಜನರ ಸಂಪರ್ಕ ಏರ್ಪಡುವುದರಿಂದ ನಿಮ್ಮ ಉದ್ಯೋಗಕ್ಕೆ ಹೆಚ್ಚಿನ ಲಾಭ ಕಂಡು ಬರುವುದು.

ವೃಷಭ ರಾಶಿ :- ಮನಸ್ಸು ಖಿನ್ನತೆಯಿಂದ ಕುಗ್ಗುವುದು. ಯಾವುದೇ ಕೆಲಸ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಶಿವ ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ. ದೂರ ಪ್ರವಾಸದ ವಿಚಾರ ಮುಂದೂಡುವುದು ಒಳಿತು. ಆರೋಗ್ಯದ ಕಡೆ ಗಮನ ಹರಿಸಿ.

ಮಿಥುನ ರಾಶಿ :- ನಿಮ್ಮ ಕಾರ್ಯಗಳು ಹಿರಿಯರ ಆಶೀರ್ವಾದದಿಂದ ನೆರವೇರುವವು. ಹಣಕಾಸಿನ ವಿಚಾರದಲ್ಲಿ ಪಕ್ಕಾ ಲೆಕ್ಕ ಇಡುವುದು ಒಳ್ಳೆಯದು. ಸಂಗಾತಿ ಸಲಹೆ ಸ್ವೀಕರಿಸಿದಲ್ಲಿ ಉತ್ತಮ ಸಮಯ ಕಳೆಯಬಹುದು.

ಕಟಕ ರಾಶಿ :- ಕಚೇರಿ ಕೆಲಸಗಳಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಬರಬೇಕಾಗಿದ್ದ ಹಣ ಬರುವುದು. ಅಂತೆಯೇ ಮನೆಯಲ್ಲಿ ಮದುವೆ ವಿಚಾರವಾಗಿ ಚರ್ಚೆ ನಡೆಯುವ ಸಂಭವ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಇದನ್ನೂ ಓದಿ - ವರ್ಷದ ಮೊದಲ Lunar Eclipse, ಎಲ್ಲಿ ಗೋಚರ, ಅದರ ಪರಿಣಾಮ ಏನೆಂದು ತಿಳಿಯಿರಿ

ಸಿಂಹ ರಾಶಿ :- ಬಿಗುವಿನ ವಾತಾವರಣ ತಿಳಿಯಾಗುವುದು. ಮನೆಯಲ್ಲಿ ಮನದಲ್ಲಿ ಸಂತಸದ ಕ್ಷಣಗಳು ಮೂಡುವವು. ಬಂಧುಗಳು, ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವರು. ಕೆಲಸಗಳು ಸರಾಗವಾಗಿ ನಡೆಯುವವು.

ಕನ್ಯಾ ರಾಶಿ :- ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗುವುದರಿಂದ ಮಾನಸಿಕ ಉದಾಸೀನತೆ ಕಾರ್ಯದಲ್ಲಿ ಹಿನ್ನಡೆ ಉಂಟು ಮಾಡಲಿದೆ ಹಾಗೂ ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳಾಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ತುಲಾ ರಾಶಿ :- ಭಗವಂತನ ಕೃಪೆಯಿಂದ ಧನ್ಯತಾಭಾವ ಮನದಲ್ಲಿ ಮೂಡುವುದು. ಮಹತ್ವದ ಪತ್ರಾಗಮನವಾಗುವುದು. ಬಂಧು ಬಳಗದವರ ಭೇಟಿ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಹಿರಿಯರ ಗುರುಗಳ ಮಾರ್ಗದರ್ಶನದಂತೆ ನಡೆಯುವುದು ಒಳ್ಳೆಯದು.

ವೃಶ್ಚಿಕ ರಾಶಿ :- ವಿವಿಧ ಮೂಲಗಳಿಂದ ಹಣ ಬರುವುದು. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷಣಗಳನ್ನು ಕಳೆಯುವಿರಿ. ಮನಸ್ಸಿನ ಕಾಮನೆಗಳು ಪೂರ್ತಿಗೊಳ್ಳುವವು. ಬಂಧು ಬಳಗದವರ ಭೇಟಿಯಾಗಲಿದೆ. ದೈವಾನುಕೂಲತೆಯಿಂದ ಅನುಕೂಲವಾಗಲಿದೆ.

ಇದನ್ನೂ ಓದಿ - Mercury Planet And Skin Problems: ಬುಧ ಅಶುಭನಾದರೆ ತ್ವಚೆಗೆ ಸಂಬಂಧಿಸಿದ ವ್ಯಾಧಿಗಳು ಬರುತ್ತವೆ

ಧನಸ್ಸು ರಾಶಿ :- ಚಂಚಲ ಮನಸ್ಸಿನ ಕಾರಣದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಕಂಡು ಬರಲಿದೆ. ತಾಯಿ ಸಂಬಂಧದವರಿಂದ ಸಹಾಯ ದೊರೆಯಲಿದೆ. ಸ್ಥಿರಾಸ್ಥಿ ಖರೀದಿಗೆ ಚಿಂತನೆ ನಡೆಸುವಿರಿ. ಅಲ್ಪ ಪ್ರವಾಸ ಹಾಗೂ ಬೆಲೆಬಾಳು ವಸ್ತುಗಳ ಖರೀದಿ ಸಾಧ್ಯತೆ ಇದೆ.

ಮಕರ ರಾಶಿ :- ಮನೆಯಿಂದ ದೂರವಿದ್ದು ವಾಸಮಾಡುವ ಸಂದರ್ಭವಿದೆ. ಹೊಸ ಪರಿಸರದಲ್ಲಿ ಆಹಾರ-ವಿಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಪರಿಣಾಮ ಬೀರುವುದು. ಹಣಕಾಸಿನ ತೊಂದರೆ ಎದುರಿಸುವಿರಿ. ಕುಲದೇವತಾ ಸ್ತೋತ್ರ ಮಾಡಿ. ಆದಷ್ಟು ಪರರಿಗೆ ದಾನ ಮಾಡಿ.

ಕುಂಭ ರಾಶಿ :- ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ಒಂದು ಬೃಹತ್‌ ಕೆಲಸವನ್ನು ಸಕಾಲದಲ್ಲಿ ಮುಗಿಸಿದ ಆತ್ಮತೃಪ್ತಿಯೂ ನಿಮ್ಮದಾಗುವುದು. ವಿವಿಧ ಮೂಲಗಳಿಂದ ಬರುವ ಹಣದ ಮಾರ್ಗ ತಿಳಿಯುವುದು.

ಮೀನ ರಾಶಿ :- ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ. ನಿಮಗೆ ಆತ್ಮೀಯ ಹಿತೈಷಿಗಳಿಂದ ನಿಮ್ಮ ವ್ಯವಹಾರದಲ್ಲಿ ಪಾಲುದಾರಿಕೆಯು ಉಂಟಾಗುವ ಸಾಧ್ಯತೆ ಇರುತ್ತದೆ. ಅಮೂಲ್ಯ ವಸ್ತುಗಳ ಖರೀದಿ-ವಿಕ್ರಿಯಿಂದ ಲಾಭವಾಗುವುದು. ಕೆಲವು ಸಂದರ್ಭಗಳಲ್ಲಿ ಸಂಗಾತಿ ಸಲಹೆ ಪಡೆಯಿರಿ.

ಇದನ್ನೂ ಓದಿ - Mahashivratri 2021 : ಮಹಾ ಶಿವರಾತ್ರಿ ಉಪವಾಸದ ಮಹತ್ವ ಏನು

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News