Horoscope: ದಿನಭವಿಷ್ಯ 27-11-2021 Today Astrology

Horoscope November 27, 2021: ಶನಿವಾರದಂದು ಮೇಷ ಮತ್ತು ವೃಷಭ ರಾಶಿಯ ಜನರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಕುಂಭ ರಾಶಿಯ ಜನರ ಕಳಪೆ ಆರೋಗ್ಯವು ಅವರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ.

Written by - ZH Kannada Desk | Last Updated : Nov 27, 2021, 05:54 AM IST
  • ಮೀನ ರಾಶಿಯ ಜನರು ಶನಿವಾರ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ
  • ಕನ್ಯಾ ರಾಶಿಯವರು ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ
  • ಮೇಷ ರಾಶಿಯ ಜನರ ಆರ್ಥಿಕ ಸ್ಥಿತಿಗತಿಯು ಉತ್ತಮವಾಗಿರುತ್ತದೆ
Horoscope: ದಿನಭವಿಷ್ಯ 27-11-2021 Today Astrology

Daily Horoscope (ದಿನಭವಿಷ್ಯ 27-11-2021) : ಶನಿವಾರದಂದು ಮೇಷ ಮತ್ತು ವೃಷಭ ರಾಶಿಯ ಜನರು ಆರ್ಥಿಕವಾಗಿ ಲಾಭ ಪಡೆಯುತ್ತಾರೆ. ಕುಂಬ ರಾಶಿಯ ಜನರ ಅನಾರೋಗ್ಯವು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.  

ಮೇಷ ರಾಶಿ: ಮೇಷ ರಾಶಿಯವರಿಗೆ ಶನಿವಾರ ಉತ್ಸಾಹ ತುಂಬಿರಲಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಕೆಲಸದಲ್ಲಿ ಉತ್ತಮ ಹಣವನ್ನು ಗಳಿಸುವಿರಿ. ಅಲ್ಲದೆ ಈ ದಿನ ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಸರಳವಾಗಿ ಹೇಳುವುದಾದರೆ ಸೋಮವಾರ ನಿಮಗೆ ಉತ್ತಮ ದಿನವಾಗಿರುತ್ತದೆ.

ವೃಷಭ ರಾಶಿ: ಶನಿವಾರದಂದು ವೃಷಭ ರಾಶಿಯ ಜನರು ತಮ್ಮ ಕೆಲಸದ ಸ್ಥಳದಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ. ನೀವು ಕಾಲಕಾಲಕ್ಕೆ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ನೀವು ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಅಲ್ಲದೆ ಕುಟುಂಬ ಸಂತೋಷವು ಉತ್ತಮವಾಗಿರುತ್ತದೆ. ಈ ದಿನ ಮಕ್ಕಳ ಬಗ್ಗೆ ವಿಶೇಷ ಗಮನ ಕೊಡಿ.

ಮಿಥುನ ರಾಶಿ: ಶನಿವಾರದಂದು ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳುತ್ತೀರಿ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತೀರಿ. ಕುಟುಂಬದ ಸದಸ್ಯರಿಗಾಗಿ ನಿಮ್ಮ ಬಿಡುವಿಲ್ಲದೆ ಸಮಯವನ್ನು ವ್ಯಯಿಸುತ್ತೀರಿ. ಶನಿವಾರ ನಿಮ್ಮ ಅದೃಷ್ಟವು ಉತ್ತಮವಾಗಿರುತ್ತದೆ.

ಕರ್ಕ ರಾಶಿ: ಈ ದಿನವು ನಿಮಗೆ ಸಂತೋಷದಿಂದ ಪ್ರಾರಂಭವಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ನೌಕರಿಯಲ್ಲಿ ಉತ್ತಮ ಹಣ ದೊರೆಯಲಿದ್ದು, ಬಡ್ತಿಯ ಸೂಚನೆಗಳಿವೆ. ಉದ್ಯಮಿಗಳಿಗೆ ಲಾಭದ ಪರಿಸ್ಥಿತಿ ಇದೆ.

ಇದನ್ನೂ ಓದಿ: ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ

ಸಿಂಹ ರಾಶಿ: ಶನಿವಾರದಂದು ಅದೃಷ್ಟವು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವವಿದ್ದು, ಕಾರ್ಯಕ್ಷೇತ್ರದಲ್ಲಿ ಲಾಭದ ಸನ್ನಿವೇಶವಿರುತ್ತದೆ. ಕುಟುಂಬದಲ್ಲಿ ಕೆಲವು ರೀತಿಯ ಮಂಗಳಕರ ಕಾರ್ಯಕ್ರಮವಿರುತ್ತದೆ, ನೀವು ಅದರಲ್ಲಿ ಭಾಗವಹಿಸುವಿರಿ. ಇಡೀ ದಿನ ಸಂಭ್ರಮದಲ್ಲಿಯೇ ಕಳೆಯಲಿದೆ.

ಕನ್ಯಾ ರಾಶಿ: ನೀವು ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹಣವನ್ನು ಸರಿಯಾದ ಕೆಲಸಗಳಲ್ಲಿ ಖರ್ಚು ಮಾಡಲಾಗುವುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ, ಆದರೆ ಅವರ ಮನಸ್ಸಿನಲ್ಲಿ ಭಯ ಉಳಿಯುತ್ತದೆ. ಇಂದು ವ್ಯಾಪಾರ ವರ್ಗವು ವಿಶೇಷವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತದೆ, ಇದರಿಂದಾಗಿ ಹಣ ಮತ್ತು ಲಾಭವನ್ನು ಕಾಣಬಹುದು.  

ತುಲಾ ರಾಶಿ: ತುಲಾ ರಾಶಿಯವರಿಗೆ ಶನಿವಾರ ಹಣಕ್ಕೆ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತವೆ. ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು, ಇದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ಶನಿವಾರದಂದು ನೀವು ಉತ್ಸಾಹದಿಂದ ಕಾಣುವಿರಿ, ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸದಲ್ಲಿಯೂ ಉತ್ಸಾಹ ಇರುತ್ತದೆ.

ವೃಶ್ಚಿಕ ರಾಶಿ: ನಿಮ್ಮ ಆರೋಗ್ಯವು ಹದಗೆಡಬಹುದು, ಇದರಿಂದಾಗಿ ನೀವು ನಿಮ್ಮ ಇಡೀ ದಿನವನ್ನು ಚಡಪಡಿಕೆಯಲ್ಲಿ ಕಳೆಯುತ್ತೀರಿ. ಕೆಲಸದಲ್ಲಿ ಸಿಗುವ ಪ್ರತಿಯೊಬ್ಬರ ಬೆಂಬಲವು ನಿಮಗೆ ಲಾಭವನ್ನು ನೀಡುತ್ತದೆ. ಶನಿವಾರದಂದು ನಿಮಗೆ ಅದೃಷ್ಟದ ಬೆಂಬಲವಿರುತ್ತದೆ.

ಇದನ್ನೂ ಓದಿ: ಡಿಸೆಂಬರ್ ನಲ್ಲಿ ಆರಕ್ಕಿಂತ ಹೆಚ್ಚು ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ, ಈ ರಾಶಿಯವರ ಪಾಲಿಗೆ ಎಲ್ಲವೂ ಶುಭ

ಧನು ರಾಶಿ: ಶನಿವಾರದಂದು ಧನು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುವುದಿಲ್ಲ. ಯಾವುದೇ ರೀತಿಯ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಿದ್ದರೆ, ಅವುಗಳಲ್ಲಿ ಪರಿಹಾರ ಪಡೆಯಬಹುದು. ನೀವು ಚಾತುರ್ಯದಿಂದ ಕೆಲಸ ಮಾಡುತ್ತೀರಿ ಮತ್ತು ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

ಮಕರ ರಾಶಿ: ಶನಿವಾರವು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ನೀವು ಎಲ್ಲರೊಂದಿಗೆ ಸಿಹಿ ಸತ್ಕಾರ ಮಾಡುತ್ತೀರಿ. ವ್ಯಾಪಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ. ಜನರಿಗೆ ಗೌರವ ಸಿಗಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಯೂ ಸಿಗಲಿದೆ.

ಕುಂಭ ರಾಶಿ: ನೀವು ಚಂಚಲತೆಯನ್ನು ಅನುಭವಿಸುವಿರಿ, ನಿಮ್ಮ ಕಳಪೆ ಆರೋಗ್ಯವು ನಿಮ್ಮ ಚಡಪಡಿಕೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗುವುದಿಲ್ಲ. ಕೆಲಸ ಮಾಡುವವರು ಕೆಲಸದಲ್ಲಿನ ಅಡೆತಡೆಗಳಿಂದ ತೊಂದರೆಗೊಳಗಾಗುತ್ತಾರೆ. ವ್ಯಾಪಾರ ವರ್ಗದ ಆರ್ಥಿಕ ಸ್ಥಿತಿಗತಿ ಸಾಮಾನ್ಯವಾಗಿರುತ್ತವೆ.

ಮೀನ ರಾಶಿ: ಶನಿವಾರವು ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ವ್ಯವಹಾರಕ್ಕೆ ಈ ದಿನವು ಉತ್ತಮವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಹೊಸ ಉತ್ಸಾಹವನ್ನು ನೀವು ನೋಡುತ್ತೀರಿ. ಶನಿವಾರದಂದು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಆಧಾರದ ಮೇಲೆ ಯಶಸ್ಸನ್ನು ಸಾಧಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News