ಉತ್ತಮ ಸಂಸಾರಕ್ಕೆ ಗಂಡ-ಹೆಂಡತಿಯ ವಯಸ್ಸು ಮುಖ್ಯವೇ..? ಮದುವೆಗೆ ಮುನ್ನ ಮಾಡುವ ಈ ತಪ್ಪು ಡಿವೋರ್ಸ್‌ಗೆ ಕಾರಣ 

Relationship tips : ಕೆಲವೊಮ್ಮೆ ಹುಡುಗ ಮತ್ತು ಹುಡುಗಿಯ ನಡುವೆ ದೊಡ್ಡ ವಯಸ್ಸಿನ ಅಂತರವಿರುತ್ತದೆ. ಇನ್ನೂ ಕೆಲವೊಮ್ಮೆ ಹುಡುಗಿ ಹುಡುಗನಿಗಿಂತ ದೊಡ್ಡವಳಾಗಿರುತ್ತಾಳೆ. ಮದುವೆಗೆ ವಯಸ್ಸು ನಿಜವಾಗಿಯೂ ಮುಖ್ಯವೇ ಎಂಬ ಪ್ರಶ್ನೆ ಇನ್ನೂ ಕಾಡುತ್ತಿದೆ.. ಸುಖ ಸಂಸಾರದ ವಿಚಾರದಲ್ಲಿ ಇದು ನಿಜವಾಗಿಯೂ ದೊಡ್ಡ ಪಾತ್ರವನ್ನು ವಹಿಸುತ್ತದೆಯೇ? ಬನ್ನಿ ತಿಳಿಯೋಣ..

Written by - Krishna N K | Last Updated : Mar 4, 2025, 09:12 PM IST
    • ಕೆಲವೊಮ್ಮೆ ಹುಡುಗ ಮತ್ತು ಹುಡುಗಿಯ ನಡುವೆ ದೊಡ್ಡ ವಯಸ್ಸಿನ ಅಂತರವಿರುತ್ತದೆ.
    • ಇನ್ನೂ ಕೆಲವೊಮ್ಮೆ ಹುಡುಗಿ ಹುಡುಗನಿಗಿಂತ ದೊಡ್ಡವಳಾಗಿರುತ್ತಾಳೆ.
    • ಸುಖ ಸಂಸಾರದ ವಿಚಾರದಲ್ಲಿ ಇದು ನಿಜವಾಗಿಯೂ ದೊಡ್ಡ ಪಾತ್ರವನ್ನು ವಹಿಸುತ್ತದೆಯೇ?
ಉತ್ತಮ ಸಂಸಾರಕ್ಕೆ ಗಂಡ-ಹೆಂಡತಿಯ ವಯಸ್ಸು ಮುಖ್ಯವೇ..? ಮದುವೆಗೆ ಮುನ್ನ ಮಾಡುವ ಈ ತಪ್ಪು ಡಿವೋರ್ಸ್‌ಗೆ ಕಾರಣ 

Marriage age gap : ಮದುವೆಗೆ ಹುಡುಗನಿಗಾಗಿ ಹುಡುಗಿಯನ್ನು ಅಥವಾ ಹುಡುಗಿಗೆ ಹುಡುಗನನ್ನು ಹುಡುಕುವಾಗ ಬಹುತೇಕ ಪೋಷರು.. ಆಸ್ತಿ, ಜಾತಿ, ಎತ್ತರ, ಬಣ್ಣ, ಶಿಕ್ಷಣ, ಸ್ವಭಾವ ಮತ್ತು ವಯಸ್ಸಿನ ಬಗ್ಗೆ ವಿಚಾರ ಮಾಡ್ತಾರೆ.. ಇವುಗಳ ನಂತರವೇ ಈ ಕೆಳಗಿನ ವಿಷಯಗಳನ್ನು ನಿರ್ಧರಿಸಲಾಗುತ್ತದೆ.

Add Zee News as a Preferred Source

ಆದರೆ ಪ್ರೇಮ ವಿವಾಹದಲ್ಲಿ ಇವೆಲ್ಲಾ ಸಾಮಾನ್ಯವಾಗಿ ಮುಖ್ಯವಾಗುವುದಿಲ್ಲ. ಇದರಲ್ಲಿ, ಹುಡುಗ ಅಥವಾ ಹುಡುಗಿ ಮೊದಲು ಪ್ರೀತಿಯಲ್ಲಿ ಬೀಳುತ್ತಾರೆ.. ನಂತರ ಮದುವೆಯಾಗಲು ನಿರ್ಧರಿಸುತ್ತಾರೆ. ಹಾಗಾಗಿ ಕೆಲವೊಮ್ಮೆ ಇವರ ನಡುವೆ ವಯಸ್ಸಿನ ವಿಚಾರ ಬರಲ್ಲ. ಕೆಲವೊಮ್ಮೆ ಹುಡುಗಿ ಹುಡುಗನಿಗಿಂತ ದೊಡ್ಡವಳಾಗಿರುತ್ತಾಳೆ.

ಇದನ್ನೂ ಓದಿ:ಬಿಸಿಲಿಗೆ ಹೊಟ್ಟೆ ತಂಪಾಗುತ್ತೆ ಅಂತ ಕಬ್ಬಿನ ರಸ ಕುಡಿಯುವ ಮುನ್ನ ಎಚ್ಚರ..! ಈ ತಪ್ಪು ಮಾಡಬೇಡಿ

ಮದುವೆಗೆ ವಯಸ್ಸು ನಿಜವಾಗಿಯೂ ಮುಖ್ಯವೇ..? : ಪ್ರೀತಿ ಮಾಡುವಾಗ ಸಂಗಾತಿಗಳು ಯೋಚಿಸುವುದಿಲ್ಲವಾದರೂ, ಸಾಮಾಜಿಕ ರೂಢಿಗಳು ಮತ್ತು ಸಿದ್ಧಾಂತಗಳು ಮದುವೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಸಾಂಪ್ರದಾಯಿಕವಾಗಿ, ಭಾರತೀಯ ಸಮಾಜದಲ್ಲಿ, ಗಂಡನು ತನ್ನ ಹೆಂಡತಿಗಿಂತ ಸ್ವಲ್ಪ ದೊಡ್ಡವನಾಗಿರಬೇಕು ಎಂದು ನಂಬಲಾಗಿದೆ. ಆದರೆ ಈಗ ಇವೆಲ್ಲವನ್ನು ಯಾರು ತಲೆಗೆ ಹಾಕಿಕೊಳ್ಳಲ್ಲ

ಭಾರತೀಯ ಸಮಾಜದಲ್ಲಿ, ವಿಶೇಷವಾಗಿ ವ್ಯವಸ್ಥಿತ ವಿವಾಹಗಳಲ್ಲಿ, ಗಂಡ ಮತ್ತು ಹೆಂಡತಿಯ ನಡುವೆ ಸುಮಾರು 3 ರಿಂದ 5 ವರ್ಷಗಳ ಅಂತರವನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಆದರೂ, ಅನೇಕ ಸುಖ ಸಂಸಾರದಲ್ಲಿ, ಹೆಂಡತಿಯು ಗಂಡನಿಗಿಂತ ದೊಡ್ಡವರೂ ಆಗಿದ್ದಾರೆ..

ಇದನ್ನೂ ಓದಿ:ಮಲೈಕಾ ಮಾಡಿದಂತೆ ನೀವೂ ರಾತ್ರಿ ಈ ಕೆಲಸ ಮಾಡಿದ್ರೆ ವಾರದಲ್ಲೇ ತೂಕ ಕಡಿಮೆಯಾಗುತ್ತೆ..! ಆ 3 ಸಿಕ್ರೆಟ್‌ ಇಲ್ಲಿವೆ ನೋಡಿ..

ಭಾರತದಲ್ಲಿ, ಮದುವೆಗೆ ಕಾನೂನುಬದ್ಧ ಕನಿಷ್ಠ ವಯಸ್ಸು ಹುಡುಗಿಯರಿಗೆ 18 ವರ್ಷಗಳು ಮತ್ತು ಹುಡುಗರಿಗೆ 21 ವರ್ಷಗಳು. ಈ ನಿಟ್ಟಿನಲ್ಲಿ, ಗಂಡ ಮತ್ತು ಹೆಂಡತಿಯ ನಡುವೆ ಸುಮಾರು 3 ವರ್ಷಗಳ ವ್ಯತ್ಯಾಸವನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಆದರೂ, ಮದುವೆಯು ಕೇವಲ ದೈಹಿಕ ಪ್ರಬುದ್ಧತೆಯ ಮೇಲೆ ಅವಲಂಬಿತವಾಗಿಲ್ಲ.. ಭಾವನಾತ್ಮಕ ಮತ್ತು ಬೌದ್ಧಿಕ ಪರಿಪಕ್ವತೆ ಕೂಡ ಮುಖ್ಯ.

ಯಶಸ್ವಿ ದಾಂಪತ್ಯವು ವಯಸ್ಸಿನ ವ್ಯತ್ಯಾಸವನ್ನು ಅವಲಂಬಿಸಿಲ್ಲ, ಬದಲಿಗೆ ಇಬ್ಬರ ನಡುವಿನ ಪ್ರೀತಿ, ಗೌರವ ಮತ್ತು ತಿಳುವಳಿಕೆಯನ್ನು ಅವಲಂಬಿಸಿರುತ್ತದೆ. 3 ವರ್ಷ ವಯಸ್ಸಿನ ವ್ಯತ್ಯಾಸವಾಗಿರಲಿ ಅಥವಾ 15 ವರ್ಷ ವಯಸ್ಸಿನ ವ್ಯತ್ಯಾಸವಾಗಿರಲಿ, ಮುಖ್ಯವಾದುದು ಸಾಮರಸ್ಯ, ಭಾವನಾತ್ಮಕ ಬೆಂಬಲ ಮತ್ತು ಪರಸ್ಪರ ತಿಳಿದುಕೊಳ್ಳುವ ಸಾಮರ್ಥ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News