Religious Beliefs - ನವದೆಹಲಿ: ದೇವಗುರು ಎಂದೇ ಕರೆಯಲಾಗುವ ಬೃಹಸ್ಪತಿ ಜ್ಞಾನ ನೀಡುವ ದೇವರು. ಹಳದಿ ಬಣ್ಣ ಇವರಿಗೆ ತುಂಬಾ ಪ್ರಿಯ. ದೇವಿ ಲಕ್ಷ್ಮಿ ಕೂಡ ಹಳದಿ ಬಣ್ಣವನ್ನು ತುಂಬಾ ಇಷ್ಟಪಡುತ್ತಾಳೆ. ಸದಾ ಸಂಚರಿಸುವ ದೇವಿ ಲಕ್ಷ್ಮಿ ಜ್ಞಾನವಿರುವ ಜಾಗದಲ್ಲಿ ಮತ್ತು ಅನ್ನವನ್ನು ಗೌರವಿಸುವ ಜಾಗಗಳಲ್ಲಿ ಹೆಚ್ಚಿನ ಕಾಲ ತಂಗುತ್ತಾಳೆ. ಪ್ರತಿ ಗುರುವಾರ ಬಾಳೆಗಿಡದ ಕೆಳಗೆ ತುಪ್ಪದ ದೀಪ ಉರಿಸುವವರ ಮೇಲೆ ಲಕ್ಷ್ಮಿ ತನ್ನ ಕೃಪೆ ತೋರುತ್ತಾಳೆ. ತುಪ್ಪ, ಸ್ವರ್ಣ ಅನ್ನ ಇತ್ಯಾದಿ, ಹಳದಿ ವಸ್ತುಗಳ ಸದುಪಯೋಗ ಸುನಿಶ್ಚಿತಗೊಳಿಸಿ. ಗುರುವಾರ ಇವುಗಳ ದಾನವನ್ನು ಕೂಡ ನೀವು ಮಾಡಬಹುದು.


COMMERCIAL BREAK
SCROLL TO CONTINUE READING

ಜ್ಞಾನಿಗಳಲ್ಲಿ ಬಂದ ಗೌರವ ಗುಣ ಹಾಗೂ ಆಜ್ಞಾಪಾಲನೆಯ ಗುಣಗಳ ಕಾರಣ ಅವರ ಮೇಲೆ ಲಕ್ಷ್ಮಿ(Godess Lakshmi) ಕೃಪೆ ಸದಾ ಇರುತ್ತದೆ. ಗುರುವಾರ ಹಿರಿಯರನ್ನು ಗೌರವಿಸಿ, ದೇವಾಲಯಗಳಲ್ಲಿ ಹಳದಿ ಬಣ್ಣದ ಪ್ರಸಾದ ವಿತರಿಸಿ.


ಇದನ್ನು ಓದಿ-ಧನ ಹಾನಿಯಿಂದ ಪಾರಾಗಲು ಶುಕ್ರವಾರ ಈ ಐದು ಕೆಲಸಗಳನ್ನು ತಪ್ಪದೆ ಮಾಡಿ


ಋಷಿಮುನಿಗಳಿಗೆ ಅತ್ಯಂತ ಪ್ರೀಯ ಕಾಮಧೇನು  ಅರ್ಥಾತ್ ಹಸುವಿಗೆ ಗುರುವಾರ ನಿಮ್ಮ ಮನೆಯಲ್ಲಿ ತಯಾರಾಗುವ ಮೊದಲ ರೊಟ್ಟಿಯನ್ನು ಮೀಸಲಿಡಿ. ಈ ಸಣ್ಣಪುಟ್ಟ ಉಪಾಯಗಳನ್ನು ಮಾಡುವುದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.


ಇದನ್ನು ಓದಿ-Monday Remedies :ಶುಭವಾಗುತ್ತದೆ.! ಪರಮೇಶ್ವರನ ಅನುಗ್ರಹ ಸದಾ ಇರುತ್ತದೆ..! ಸೋಮವಾರ ಹೀಗೆ ಮಾಡಿನೋಡಿ..!


ಗುರುವಾರ ಕಟಿಂಗ್ ಮಾಡುವುದು ಅಸ್ತ್ರಗಳ ಪ್ರಯೋಗ ಮಾಡುವುದರಿಂದ ದೂರವಿರಿ. ಯಂತ್ರಗಳಿಗೆ ಗುರು ಪ್ರಮುಖ ಗ್ರಹ. ಉದ್ಯಮಿಗಳು ಗುರುವಾರ ಯಂತ್ರಗಳಿಗೆ ಗೌರವ ನೀಡಬೇಕು. ಲಕ್ಷ್ಮಿ ಬರುವ ಮೂಲ ಉದ್ಯೋಗ ಹಾಗೂ ವ್ಯಾಪಾರವೇ ಆಗಿರುತ್ತದೆ. ಮಹಾಲಕ್ಷ್ಮಿಯನ್ನು ಸ್ವರ್ಣ ದೇವಿ ಎಂದೂ ಕೂಡ ಭಾವಿಸಲಾಗುತ್ತದೆ. ಗುರು ಗ್ರಹ ಕೂಡ ಚಿನ್ನಕ್ಕೆ ಸಂಬಂಧ ಪಟ್ಟವರಾಗಿದ್ದಾರೆ. ಗುರುವಾರ ಚಿನ್ನದ ಆಭರಣ ಧರಿಸುವುದು ಹಾಗೂ ಚಿನ್ನದ ದಾನ ಮಾಡುವುದು ಶುಭಕರ ಎಂದು ಹೇಳಲಾಗುತ್ತದೆ. ಆದರೆ, ಯೋಗ್ಯ ಜನರಿಗೆ ಮಾತ್ರ ದಾನ ಮಾಡಬೇಕು.


ಇದನ್ನು ಓದಿ-Sunday Remedies: ಭಾನುವಾರ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.