ಶ್ರಾವಣ ಮಾಸದಲ್ಲಿ ಚಿಕನ್, ಮಟನ್ ಸೇರಿದಂತೆ ಮಾಂಸಾಹಾರಗಳ ಸೇವನೆ ನಿಷಿದ್ಧ. ಇದು ಕೇವಲ ಸಾಂಪ್ರದಾಯಿಕ ನಂಬಿಕೆಯಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳು ಸಹ ಇದನ್ನು ಬೆಂಬಲಿಸುತ್ತವೆ.

Shravan Masa Food Rituals: ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಬಹಳ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ದೈವತಾ ಆರಾಧನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ಹಲವರು ದೇವರ ಸನ್ನಿಧಾನಕ್ಕೆ ಹೋಗುತ್ತಾರೆ. ಮಾತ್ರವಲ್ಲ, ಮನೆಯಲ್ಲೂ ಕೂಡ ಹಲವು ರೀತಿಯ ವ್ರತ, ಪೂಜೆ, ಹಬ್ಬಗಳನ್ನು ಆಚರಿಸುತ್ತಾರೆ. ಹೀಗಾಗಿ, ಹಿಂದೂ ಸಂಪ್ರದಾಯಗಳ ಪ್ರಕಾರ, ಶ್ರಾವಣದಲ್ಲಿ ಚಿಕನ್, ಮಟನ್ ಸೇರಿದಂತೆ ಮಾಂಸಾಹಾರ ತಿನ್ನುವುದನ್ನು ನಿಷಿದ್ಧ ಎನ್ನಲಾಗುತ್ತದೆ. ಆದರೆ, ಸಂಪ್ರದಾಯದ ಪ್ರಕಾರ ಮಾತ್ರವಲ್ಲ ವೈಜ್ಞಾನಿಕವಾಗಿಯೂ ಸಹ ಈ ಮಾಸದಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ.
ಶ್ರಾವಣ ಮಾಸವು ಬಹುತೇಕ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಇರುತ್ತದೆ.ಆಯುರ್ವೇದದ ಪ್ರಕಾರ, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಭಾರತೀಯ ಹವಾಮಾನದ ಪ್ರಕಾರ ಅತಿಯಾದ ಮಳೆ ಬೀಳುವುದು ಸಹಜ. ಹಾಗಾಗಿ ನಮ್ಮ ದೇಹಕ್ಕೆ ಬೇಕಾಗುವಂತಹ ಉಷ್ಣಾಂಶ ಸೂರ್ಯನಿಂದ ದೊರೆಯುವುದಿಲ್ಲ. ಮುಖ್ಯವಾಗಿ ಮಾಂಸಾಹಾರಗಳಾದ ಚಿಕನ್ ಅಥವಾ ಮಟನ್ ತಿಂದಾಗ ಅಂತಹ ಆಹಾರಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಚಳಿ ಅಥವಾ ತಂಪಾದ ವಾತಾವರಣದಲ್ಲಿ ಜೀರ್ಣ ಕ್ರಿಯೆ ನಿಧಾನವಾಗಿರುತ್ತೆ. ಹಾಗಾಗಿ, ಸರಿಯಾಗಿ ಜೀರ್ಣವಾಗದಿದ್ದಾಗ ತಿನ್ನುವಂತಹ ಆಹಾರ ವಿಷವಾಗಿ ಮಾರ್ಪಾಡಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಶ್ರಾವಣ ಮಾಸದಲ್ಲಿ ಮನೆಯಲ್ಲಿ ಶುಚಿತ್ವದ ವಿಚಾರಗಳನ್ನು ಇಟ್ಟುಕೊಂಡು ಮಾಂಸಹಾರ ಸೇವನೆ ಮಾಡುವುದರಿಂದ ಚಿಕ್ಕ ಚಿಕ್ಕ ಬ್ಯಾಕ್ಟೀರಿಯಾಗಳು ನಮ್ಮ ಅರಿವಿಲ್ಲದೆ ನಮ್ಮ ದೇಹವನ್ನು ಪ್ರವೇಶ ಮಾಡುತ್ತವೆ. ಅಲ್ಲದೆ, ಈ ವಾತಾವರಣದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ ಹಲವಾರು ರೋಗಗಳಿಂದ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹಾಗಾಗಿಯೇ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ (ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ) ಚಿಕನ್, ಮಟನ್ ಸೇವನೆ ಮಾಡುವುದನ್ನು ತಪ್ಪಿಸುವುದು ಒಳಿತು ಎನ್ನಲಾಗುತ್ತದೆ. ನೀವೇನಾದರೂ, ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುತ್ತಿದ್ದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದಲಾದರೂ ಈಗಿನಿಂದಲೇ ಇವನ್ನೂ ತ್ಯಜಿಸಿ.