ಡಯೆಟ್‌, ಜಿಮ್‌ ಇಲ್ಲದೆಯೇ.. ಮೊಸರಿಗೆ ಈ ಪುಟ್ಟ ಕಾಳು ಬೆರೆಸಿ ತಿಂದ್ರೆ ಎರಡೇ ದಿನದಲ್ಲಿ ಕಡಿಮೆಯಾಗುತ್ತೆ ತೂಕ!

Curd for Weight Loss: ಈಗ ಎಲ್ಲರೂ ಬಿಸಿಲಿನ ಹೊಡೆತಕ್ಕೆ ಸುಸ್ತಾಗಿ ಹೋಗಿದ್ದಾರೆ. ಈ ಬಿಸಿಲಿನಲ್ಲಿ ಆರೋಗ್ಯವಾಗಿರಲು ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.    

Written by - Savita M B | Last Updated : Apr 27, 2025, 02:11 PM IST
  • ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈ ಬಿಸಿಲಿನಿಂದ ಬದುಕುಳಿಯಲು ಮತ್ತು ಆರೋಗ್ಯವಾಗಿರಲು ಶ್ರಮಿಸುತ್ತಿದ್ದಾರೆ
  • ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ
ಡಯೆಟ್‌, ಜಿಮ್‌ ಇಲ್ಲದೆಯೇ.. ಮೊಸರಿಗೆ ಈ ಪುಟ್ಟ ಕಾಳು ಬೆರೆಸಿ ತಿಂದ್ರೆ ಎರಡೇ ದಿನದಲ್ಲಿ ಕಡಿಮೆಯಾಗುತ್ತೆ ತೂಕ!

Health Tips: ಈಗ ಎಲ್ಲರೂ ಬಿಸಿಲಿನಿಂದ ಬೇಸೋತ್ತು ಹೋಗಿದ್ದಾರೆ.. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈ ಬಿಸಿಲಿನಿಂದ ಬದುಕುಳಿಯಲು ಮತ್ತು ಆರೋಗ್ಯವಾಗಿರಲು ಶ್ರಮಿಸುತ್ತಿದ್ದಾರೆ. ಆರೋಗ್ಯವಾಗಿರಲು ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ನಿಮ್ಮ ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸಲು ಸೂಚಿಸಲಾಗುತ್ತದೆ. ಚಳಿಗಾಲವಿರಲಿ ಅಥವಾ ಬೇಸಿಗೆಯಾಗಿರಲಿ ಮೊಸರು ತುಂಬಾ ಒಳ್ಳೆಯದು.

ತೂಕ ಇಳಿಸಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೊಸರು ಹಲವು ವಿಧಗಳಲ್ಲಿ ಉಪಯುಕ್ತವಾಗಿದೆ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಮತ್ತು ಸ್ಲಿಮ್ ಆಗಲು ಬಯಸುವವರು ಖಂಡಿತವಾಗಿಯೂ ತಮ್ಮ ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು. ಮೊಸರು ನಿಸ್ಸಂದೇಹವಾಗಿ ಆರೋಗ್ಯಕರ ಎಂದು ವೈದ್ಯರು ಹೇಳುತ್ತಾರೆ. ಆದರೆ, ತೂಕ ಇಳಿಸಿಕೊಳ್ಳಲು ಕೇವಲ ಮೊಸರು ತಿಂದರೆ ಸಾಲದು. ಅದರೊಂದಿಗೆ ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡಬೇಕು. ಆಗ ಮಾತ್ರ ನೀವು ತೂಕ ಇಳಿಸಿಕೊಳ್ಳಬಹುದು.. 

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ಜೀರಿಗೆ - ಮಾಂಸ ಅಥವಾ ಸಸ್ಯಾಹಾರಿ ಭಕ್ಷ್ಯಗಳಿಗೆ ಜೀರಿಗೆ ಸೇರಿಸುವುದರಿಂದ ಅವುಗಳ ರುಚಿ ಬದಲಾಗಬಹುದು. ಆದರೆ ಆ ಜೀರಿಗೆ ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿ ಮೊಸರಿಗೆ ಜೀರಿಗೆ ಸೇರಿಸಿ ತಿಂದರೇ ನಿರೀಕ್ಷಿತ ಫಲಿತಾಂಶ ಪಡೆಯಬಹುದು.. ಇದನ್ನು ಎರಡು ವಾರಗಳ ಕಾಲ ತಿಂದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ.

ದಾಲ್ಚಿನ್ನಿ - ದಾಲ್ಚಿನ್ನಿಯನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ತೂಕ ನಷ್ಟಕ್ಕೆ ದಾಲ್ಚಿನ್ನಿಯ ಪ್ರಯೋಜನಗಳು ಹಲವಾರು. ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ದಾಲ್ಚಿನ್ನಿಯನ್ನು ಮೊಸರಿನೊಂದಿಗೆ ಸೇವಿಸಬಹುದು. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ಸೋಂಪು - ಅನೇಕ ಜನರು ತಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಸೋಂಪು ನೆನೆಸಿದ ನೀರನ್ನು ಕುಡಿಯುತ್ತಾರೆ. ಮೊಸರಿನೊಂದಿಗೆ ಸೋಂಪು ಬೆರೆಸಿ ತಿನ್ನುವುದರಿಂದಲೂ ನೀವು ಪ್ರಯೋಜನ ಪಡೆಯಬಹುದು. ಮೊಸರು ಮತ್ತು ಸೋಂಪು ಹೆಚ್ಚಿನ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ಇತರ ಅನೇಕ ಪ್ರಯೋಜನಕಾರಿ ವಸ್ತುಗಳನ್ನು ಹೊಂದಿರುತ್ತವೆ. ಇವು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಸುಲಭವಾಗಿ ಕರಗಿಸುತ್ತವೆ.

(ಹಕ್ಕುತ್ಯಾಗ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಇನ್ನಷ್ಟು ತಿಳಿದುಕೊಳ್ಳಲು ಯಾವಾಗಲೂ ತಜ್ಞರ ಸಲಹೆಯನ್ನು ಪಡೆಯಿರಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News