)
Hair Loss Natural Care: ಒತ್ತಡಭರಿತ ವೇಗದ ಜೀವನ ಶೈಲಿಯಿಂದಾಗಿ ಕೂದಲಿನ ಆರೈಕೆಗೆ ಸಮಯವೇ ಸಿಗುವುದಿಲ್ಲ ಎಂಬುದು ಕೆಲವರ ವಾದ. ಆದರೆ, ನೀವು ನಿಂತಾಗ, ಕುಂತಾಗ ಮೊಬೈಲ್, ರೀಲ್ಸ್ ನೋಡುವ ಸಮಯದಲ್ಲಿ ಕೇವಲ ಒಂದೆರಡು ನಿಮಿಷವನ್ನು ಕೂದಲಿಗಾಗಿ ಮೀಸಲಿಟ್ಟರೆ ಕೂದಲುದುರುವ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಅಜ್ಜಿಯರ ಕಾಲದಲ್ಲಿ ಬಳಸುತ್ತಿದ್ದ ಮನೆಮದ್ದುಗಳನ್ನೂ ಬಳಸುವುದರಿಂದ... ಬಳಸುವುದು ಎನ್ನುವುದಕ್ಕಿಂತ ರೂಢಿಸಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಕಂಡು ಕೊಳ್ಳಬಹುದು. ಈ ಮನೆಮದ್ದುಗಳು ನ್ಯಾಚುರಲ್ ಆಗಿ ಕೂದಲಿಗೆ ಪೋಷಣೆ ನೀಡಿ, ಬುಡದಿಂದಲೇ ಕೂದಲನ್ನು ಗಟ್ಟಿಯಾಗಿಸುತ್ತದೆ. ಅಷ್ಟೇ ಅಲ್ಲ, ಇದು ಉದ್ದ ಕಡು ಕಪ್ಪು ಕೇಶರಾಶಿಯನ್ನು ಹೊಂದಲು ಕೂಡ ತುಂಬಾ ಸಹಕಾಗಿ ಆಗಿದೆ.
ಎಣ್ಣೆ ಮಸಾಜ್:
ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಿ (ತೆಂಗಿನ ಎಣ್ಣೆ, ಹರಳೆಣ್ಣೆ, ಬಾದಾಮಿ ಎಣ್ಣೆ), ಅದರಲ್ಲೂ ಸ್ವಲ್ಪ ಉಗುರು ಬೆಚ್ಚಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಕಿರುಚೀಲಗಳಿಗೆ ಪೋಷಣೆ ದೊರೆಯುತ್ತದೆ. ಇದು ಕೂದಲನ್ನು ಬೇರುಗಳಿಂದ ಬಲಗೊಳಿಸಲು, ಹೇರ್ ಫಾಲ್ ಸಮಸ್ಯೆ ನಿವಾರಿಸಲು ಸಹಕಾರಿ ಆಗಿದೆ.
ನ್ಯಾಚುರಲ್ ಹೇರ್ ವಾಶ್:
ಹೇರ್ ವಾಶ್ ಮಾಡಲು ಕೆಮಿಕಲ್ ಮಿಶ್ರಿತ ಶಾಂಪೂಗಳನ್ನು ಬಳಸುವ ಬದಲಿಗೆ ಸೀಗೆಕಾಯಿ, ಶಿಕಾಕಾಯಿ ಪುಡಿ, ಆಮ್ಲಾದಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಹೇರ್ ವಾಶ್ ಮಾಡಿ. ಇದರಿಂದ ನೆತ್ತಿಯು ನೈಸರ್ಗಿಕ ಎಣ್ಣೆಯನ್ನು ಕಾಪಾಡಿಕೊಳ್ಳಲು ಮೂಲಕ ನೆತ್ತಿಯ pH ಅನ್ನು ಸಮತೋಲನದಲ್ಲಿಡುತ್ತದೆ. ತಲೆಹೊಟ್ಟು ನಿವಾರಿಸಿ ಕಾಂತಿಯುತ ಮೃದುವಾದ ಕೇಶರಾಶಿ ಹೊಂದಲು ಸಹಕಾರಿ ಆಗಿದೆ.
ಸಮತೋಲಿತ ಆಹಾರ:
ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಕೂದಲಿನ ಆರೋಗ್ಯಕ್ಕೂ ಸಮತೋಲಿತ ಆಹಾರ ಬಹಳ ಅಗತ್ಯ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ಗಳು, ಖನಿಜಗಳು ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ತಪ್ಪದೇ ಸೇವಿಸಿ. ಇದು ಹೇರ್ ಫಾಲ್ ತಡೆಯುವುದಷ್ಟೇ ಅಲ್ಲ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯನ್ನೂ ಕೂಡ ನಿವಾರಿಸುತ್ತದೆ.
ಉತ್ತಮ ನಿದ್ರೆ:
ಕೂದಲು ಉದುರುವಿಕೆಯನ್ನು ತಡೆಯಲು ಪ್ರತಿದಿನ ಧ್ಯಾನ, ಯೋಗದಂತಹ ಅಭ್ಯಾಸಗಳ ಜೊತೆಗೆ ವಯಸ್ಸಿಗೆ ತಕ್ಕಂತೆ ಸಾಕಷ್ಟು ನಿದ್ರೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಇದು ಮನಸ್ಸಿಗೆ ನೆಮ್ಮದಿ ನೀಡಿ, ನೆತ್ತಿಗೆ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಕೂದಲು ಬೇರುಗಳಿಂದ ಬಲಗೊಂಡು ಕೂದಲ ಬೆಳವಣಿಗೆಯನ್ನು ಸಹ ಪ್ರೋತ್ಸಾಹಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.