Beauty Tips In Kannada: ಸುಂದರ ತ್ವಚೆಗಾಗಿ ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ. ಆ ಕ್ಷಣದಲ್ಲಿ ಇದು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೂ, ಕೆಲವೊಮ್ಮೆ ಚರ್ಮಕ್ಕೂ ಹಾನಿ ಉಂಟು ಮಾಡುತ್ತದೆ. ಆದರೆ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ನೀವು ನೈಸರ್ಗಿಕವಾಗಿ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ ಹಣ ವಿನಿಯೋಗಿಸುವ ಅಗತ್ಯವಿಲ್ಲ, ಹೆಚ್ಚು ಸಮಯವೂ ಬೇಕಾಗುವುದಿಲ್ಲ. ಪ್ರತಿ ದಿನ ಎದ್ದ ತಕ್ಷಣ ಈ ನಾಲ್ಕು ಅಭ್ಯಾಸಗಳನ್ನು ರೂಢಿಸಿಕೊಂಡರೆ ಚರ್ಮಕ್ಕೆ ನೈಸರ್ಗಿಕ ಹೊಳಪು ದೊರೆಯುತ್ತದೆ.
ನ್ಯಾಚುರಲ್ ಆಗಿ ಮುಖದ ಕಾಂತಿ ಹೆಚ್ಚಿಸಲು ಜಸ್ಟ್ ಈ 4 ಕೆಲಸ ಮಾಡಿ:
* ತಣ್ಣೀರಿನಿಂದ ಮುಖ ತೊಳೆಯುವುದು:
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆಯಿರಿ. ಈ ವೇಳೆ ರಾಸಾಯನಿಕ ಆಧಾರಿತ ಫೇಸ್ ವಾಶ್‌ಗಳನ್ನು ಬಳಸದೆ, ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಫೇಸ್ ವಾಶ್ ಅಥವಾ ಕ್ಲೆನ್ಸರ್ ಅನ್ನು ಸಹ ಬಳಸಬಹುದು. ಸಾಧ್ಯವಾದರೆ, ನೈಸರ್ಗಿಕ ಉತ್ಪನ್ನಗಳನ್ನು ಬಳಸಿ. ಇದರಿಂದ ಕಾಂತಿಯುತ ಸುಂದರ ತ್ವಚೆ ನಿಮ್ಮದಾಗುತ್ತದೆ.
ಇದನ್ನೂ ಓದಿ- ಬಲೂನ್‌ನಂತೆ ಊದಿರುವ ಹೊಟ್ಟೆಯನ್ನೂ ತಿಂಗಳಲ್ಲಿ ಕರಗಿಸಲು ಈ ಮ್ಯಾಜಿಕ್ ಮಸಾಲೆಗಳನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ
ಟೋನಿಂಗ್:
ಫೇಸ್ ವಾಶ್ ಮಾಡಿದ ಬಳಿಕ ಟೋನಿಂಗ್ ಪ್ರಕ್ರಿಯೆ ತುಂಬಾ ಮುಖ್ಯ. ಇದಕ್ಕಾಗಿ ರೋಸ್ ವಾಟರ್ ಬಳಸಬಹುದು. ಮುಖ ತೊಳೆದ ನಂತರ ನಿಮ್ಮ ಮುಖದ ಮೇಲೆ ರೋಸ್ ವಾಟರ್ ಅನ್ವಯಿಸುವುದರಿಂದ ಇದು ನಿಮ್ಮ ಚರ್ಮವನ್ನು ಹೈಡ್ರೀಕರಿಸುವ ಮೂಲಕ ಚರ್ಮದ ಕಲೆಗಳನ್ನು ಕಡಿಮೆ ಮಾಡುವುದಲ್ಲದೆ, ನೈಸರ್ಗಿಕ ಹೊಳಪನ್ನು ಸಹ ನೀಡುತ್ತದೆ.
ಸೀರಮ್:
ಮುಖಕ್ಕೆ ಟೋನರ್ ಹಚ್ಚಿ ಒಂದೆರಡು ನಿಮಿಷಗಳನ್ನು ಬಿಟ್ಟು ಸೀರಮ್ ಲೇಪಿಸಿ. ಇದಕ್ಕಾಗಿ ವಿಟಮಿನ್ ಸಿ ಯುಕ್ತ ಸೀರಮ್ ಬಳಸುವುದು ಹೆಚ್ಚು ಸೂಕ್ತ. ಇದು ನಿಮ್ಮ ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಿ, ಒಳಗಿನಿಂದ ಚರ್ಮವನ್ನು ಪೋಷಿಸುತ್ತದೆ ಮತ್ತು ಕ್ರಮೇಣ ಚರ್ಮದ ಹೊಳಪು ಹೆಚ್ಚಾಗುತ್ತದೆ.
ಇದನ್ನೂ ಓದಿ- ಹೇರ್ ಡೈ ಬೇಡವೇ ಬೇಡ.. ಈ ಪುಟ್ಟ ಹಣ್ಣು ತಿಂದ್ರೆ ಬೇರಿನಿಂದಲೇ ಕಪ್ಪಾಗುತ್ತವೆ ಬಿಳಿಕೂದಲು!
ಮಾಯಿಶ್ಚರೈಸರ್:
ಮುಖಕ್ಕೆ ಸೀರಮ್ ಹಚ್ಚಿ ಕೆಲ ನಿಮಿಷಗಳ ಬಳಿಕ ಮಾಯಿಶ್ಚರೈಸರ್ ಹಚ್ಚಿ. ಇದು ನಿಮ್ಮ ಮುಖವನ್ನು ಮೃದುವಾಗಿಸಿ, ಕಾಂತಿಯುತವಾಗಿಸುವಲ್ಲಿ ಪರಿಣಾಮಕಾರಿ ಆಗಿದೆ.
ನಿತ್ಯ ಈ ನಾಲ್ಕು ಸ್ಕಿನ್ ದಿನಚರಿಯನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ನೈಸರ್ಗಿಕವಾಗಿ ಮುಖದ ಅಂದ ಹೆಚ್ಚಿಸಬಹುದು. ನೀವು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಸನ್‌ಸ್ಕ್ರೀನ್ ಹಚ್ಚಲು ಮರೆಯಬೇಡಿ. ಏಕೆಂದರೆ ಸೂರ್ಯನ ಹಾನಿಕಾರಕ ಕಿರಣಗಳು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ, ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.









