)
caution before eating dates: ಇತ್ತೀಚೆಗೆ ಹೆಚ್ಚು ಜನರು ಆರೋಗ್ಯದ ಹೆಸರಿನಲ್ಲಿ ಖರ್ಜೂರದ ಮೊರೆಹೋಗುತ್ತಿದ್ದಾರೆ. ಇದು ನೈಸರ್ಗಿಕ ಸಕ್ಕರೆಯಂಶವನ್ನು ಹೊಂದಿದೆ, ಈ ಖರ್ಜೂರ ಫೈಬರ್, ಮತ್ತು ವಿಟಮಿನ್ಗಳ ಗಣಿಯಾಗಿದ್ದು, ಇದನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿಯು ಹೆಚ್ಚಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ, ಮತ್ತು ಹೃದಯ ಆರೋಗ್ಯಕ್ಕೂ ಒಳ್ಳೆಯದು. ಆದರೆ ವೈದ್ಯರು ಹೇಳುವಂತೆ, ಈ ಹಣ್ಣನ್ನು ತಿನ್ನುವ ಮುನ್ನ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸಬೇಕು.
ಖರ್ಜೂರವನ್ನು ತಪ್ಪಾದ ರೀತಿಯಲ್ಲಿ ಸಂಗ್ರಹಿಸಿಟ್ಟರೆ ಅಥವಾ ಹೆಚ್ಚು ದಿನವಾದರೆ ಕೆಡಬಹುದು. ಕೆಲವೊಮ್ಮೆ ಈ ಹಣ್ಣುಗಳಲ್ಲಿ ಹುಳುಗಳು ಅಥವಾ ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಖರ್ಜೂರ ಹೊರಗಿನಿಂದ ನೋಡಲು ಸರಿ ಇದ್ದರೂ ಒಳಗೆ ಕೆಟ್ಟಿರಬಹುದು. ಇವುಗಳನ್ನು ಪರೀಕ್ಷಿಸದೇ ನೇರವಾಗಿ ತಿಂದರೆ ಅಜೀರ್ಣ, ಆಹಾರ ವಿಷಬಾಧೆ, ವಾಂತಿ, ಹೊಟ್ಟೆನೋವು, ಅಥವಾ ಗಂಭೀರವಾಗಿ ಕಿಡ್ನಿ ಮತ್ತು ಲಿವರ್ ಸಮಸ್ಯೆಗೂ ಕಾರಣವಾಗಬಹುದು.
ಪ್ಯಾಕ್ ಮಾಡಿದ ಖರ್ಜೂರ ಕೆಲವೊಮ್ಮೆ ತಿಂಗಳುಗಟ್ಟಲೆ ಸ್ಟೋರ್ಗಳಲ್ಲಿ ಇರುತ್ತವೆ. ಉತ್ಪಾದನೆಯ ದಿನಾಂಕದ ಮೇಲೂ, "Use by" ಅಥವಾ "Best Before" ದಿನಾಂಕದ ಮೇಲೆ ನಾವು ಗಮನ ಕೊಡಬೇಕು. ದಿನಾಂಕ ಮುಗಿದ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯವಾಗಬಹುದು.
ಇನ್ನೊಂದು ದೊಡ್ಡ ಸಮಸ್ಯೆ ಎಂದರೆ, ಕೆಲವು ಕಂಪನಿಗಳು ಡೇಟ್ಸ್ ಅನ್ನು ಹೆಚ್ಚು ಮಧುರವಾಗಿಸಲು ಸಕ್ಕರೆ ಸಿರಪ್ನಲ್ಲಿ ಮುಳುಗಿಸಿ ಮಾರುತ್ತವೆ. ಈ ರೀತಿಯ ಸಂಸ್ಕರಿತ ಡೇಟ್ಸ್ ಹೆಚ್ಚು ಸೇವಿಸಿದರೆ ಡಯಾಬಿಟಿಸ್ ಅಥವಾ ತೂಕ ಹೆಚ್ಚುವಂತೆ ಮಾಡಬಹುದು.
ಖರ್ಜೂರ ಆರೋಗ್ಯಕ್ಕೆ ಒಳ್ಳೆಯದಾದರೂ, ನಾವು ಅದನ್ನು ತಿನ್ನುವ ಮೊದಲು ಅದು ತಾಜಾ, ಶುದ್ಧ ಮತ್ತು ದಿನಾಂಕದ ಎಕ್ಷ್ಪೈರಿ, ಅದು ಸುರಕ್ಷಿತವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೊರಗೆ ಚೆನ್ನಾಗಿ ಕಾಣುವ ಹಣ್ಣುಗಳು ಕೂಡ ಒಳಗೆ ಹಾಳಾಗಿರಬಹುದು. ಆರೋಗ್ಯ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ, ಅದಕ್ಕಾಗಿ ಎಲ್ಲ ರೀತಿಯಿಂದಲೂ ಎಚ್ಚರಿಕೆಯಿಂದಿರೋಣ.