)
Ferulic acid is best used for glowing: ಇಂದಿನ ಗ್ಲಾಮರ್ಸ್, ಕಂಪ್ಯೂಟರ್, ಮೊಬೈಲ್ ಯುಗದಲ್ಲಿ ಅಂದ, ಚೆಂದ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಒಂದು ಸೆಲ್ಫೆ ಫೋಟೋ ಕ್ಲಿಕ್ ಮಾಡಿಕೊಳ್ಳಬೇಕು ಎಂದರೂ ಪೇಸ್ ಹೇಗಿದೆ ಎಂದು ನೋಡಿಕೊಳ್ಳುವುದು ಸಾಮಾನ್ಯ. ಕೆಲವೊಬ್ಬರಿಗೆ ತಮ್ಮ ಚರ್ಮದ ಆರೈಕೆ ಎಷ್ಟೇ ಮಾಡಿದರೂ ಅದು ಅದು ಸರಿಯಾಗಿ ಕೆಲಸ ಮಾಡುತ್ತಿರಲ್ಲ. ದುಬಾರಿ ಬೆಲೆಯ ಕ್ರೀಮ್, ಸೋಪುಗಳನ್ನು, ಪೇಸ್ ವಾಶ್ ಅಂತವುಗಳನ್ನು ಬಳಕೆ ಮಾಡಿದರೂ ಚರ್ಮದ ಆರೋಗ್ಯ ಕೆಡುತ್ತಿರುತ್ತದೆ. ನಿಮ್ಮ ಚರ್ಮವನ್ನು ಮಾಲಿನ್ಯ, ಸೂರ್ಯನಿಂದ ಮತ್ತು ಚರ್ಮದ ವಯಸ್ಸಾದ ಚಿಹ್ನೆಗಳಿಂದ ರಕ್ಷಿಸುವಲ್ಲಿ ಪೆರಿಲಿಕ್ ಆಮ್ಲ (Perillic acid) ಉತ್ತಮವಾಗಿದೆ.
ಪೆರಿಲಿಕ್ ಆಮ್ಲ ಎಂದರೇ ಅಕ್ಕಿ, ಓಟ್ಸ್ ಮತ್ತು ಕೆಲವು ಹಣ್ಣುಗಳಂತಹ ಸಸ್ಯಗಳಲ್ಲಿ ಕಂಡುಬರುತ್ತದೆ. ಚರ್ಮದ ಆರೈಕೆಯಲ್ಲಿ ಇದನ್ನು ಪ್ರಾಥಮಿಕವಾಗಿ ಉತ್ಕರ್ಷಣ ನಿರೋಧಕವಾಗಿ ಉಪಯೋಗಿಸುತ್ತದೆ. ಮಾಲಿನ್ಯ, ಸೂರ್ಯ ಮತ್ತು ಪರಿಸರ ಒತ್ತಡದಿಂದ ನಿಮ್ಮ ಚರ್ಮವನ್ನು ರಕ್ಷಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ತಕ್ಷಣದ ಪರಿಣಾಮಗಳನ್ನು ತೋರಿಸುವ ಬದಲು, ಚರ್ಮವನ್ನು ಆರೋಗ್ಯಕರವಾಗಿ ರಕ್ಷಿಸುತ್ತದೆ.
ಜನರು ಸಾಮಾನ್ಯವಾಗಿ ಪೆರಿಲಿಕ್ ಆಮ್ಲ ಈ ಹೆಸರಿನಲ್ಲಿರುವ ಆಮ್ಲ ಅಥವಾ ಆಸಿಡ್ನಿಂದ ಗೊಂದಲಕ್ಕೆ ಒಳಗಾಗುತ್ತಾರೆ. ಇದು ಗ್ಲೈಕೋಲಿಕ್ ಅಥವಾ ಸ್ಯಾಲಿಸಿಲಿಕ್ ಆಮ್ಲದಂತೆ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದಿಲ್ಲ. ಇದು ಸತ್ತ ಚರ್ಮ ತೆಗೆದುಹಾಕಿ ರಕ್ಷಣಾತ್ಮಕವಾಗಿರುತ್ತದೆ. ಇದರಲ್ಲಿ ವಿಟಮಿನ್ ಸಿ ಸ್ವತಃ ತುಂಬಾ ಅಸ್ಥಿರವಾಗಿದೆ. ಫೆರಿಲಿಕ್ ಆಮ್ಲವು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಆದ್ದರಿಂದ ಇದು ದೀರ್ಘಕಾಲದವರೆಗೆ ಪರಿಣಾಮಕಾರಿ ಆಗಿರುತ್ತದೆ. ಇದಲ್ಲದೆ, ಚರ್ಮಕ್ಕೆ ಉತ್ತಮ ಉತ್ಕರ್ಷಣ ನಿರೋಧಕ ರಕ್ಷಣೆಯನ್ನು ಒದಗಿಸುತ್ತದೆ.
ಫೆರಿಲಿಕ್ ಆಮ್ಲದ ದೊಡ್ಡ ಪ್ರಯೋಜನ ಎಂದರೆ ಚರ್ಮದ ರಕ್ಷಣೆ. ಇದು ಚರ್ಮಕ್ಕೆ ಹಾನಿ ಮಾಡುವ ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಪರಿಲಿಕ್ ಆಮ್ಲವೂ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ಇದು ಚರ್ಮದ ಮಂದತೆ ಮತ್ತು ಬಣ್ಣವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಫೆರಿಲಿಕ್ ಆಮ್ಲ ಬಳಕೆ ಮಾಡುವ ಅಥವಾ ಹಚ್ಚಲು ಉತ್ತಮ ಸಮಯ ಅಂದ್ರೆ ಬೆಳಿಗ್ಗೆ. ಪರಿಸರ ಹಾನಿಯಿಂದ ರಕ್ಷಿಸುವುದು ಇದರ ಮುಖ್ಯ ಕಾರ್ಯ ಆಗಿರುವುದರಿಂದ, ಹಗಲಿನಲ್ಲಿ ನೀವು ಸೂರ್ಯನ ಬೆಳಕು ಮತ್ತು ಮಾಲಿನ್ಯಕ್ಕೆ ಒಳಗಾದಾಗ ಇದನ್ನು ಬಳಸುವುದು ಉತ್ತಮವಾಗಿರುತ್ತದೆ. ನೀವು ಇದನ್ನು ರಾತ್ರಿಯೂ ಹಚ್ಚಬಹುದು. ಆದರೆ ಬೆಳಿಗ್ಗೆ ಸನ್ಸ್ಕ್ರೀನ್ನೊಂದಿಗೆ ಹಚ್ಚುವುದು ಹೆಚ್ಚು ಪರಿಣಾಮಕಾರಿ ಆಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಫೆರುಲಿಕ್ ಆಮ್ಲವು ತುಂಬಾ ಸೌಮ್ಯವಾಗಿರುತ್ತದೆ. ಕೆಲವು ಬಲವಾದ ಚರ್ಮದ ಆರೈಕೆ ಉತ್ಪನ್ನಗಳಂತೆ ಕಿರಿಕಿರಿಯನ್ನು ಉಂಟುಮಾಡುವುದಿಲ್ಲ. ಆದರೆ ಪ್ರತಿಯೊಬ್ಬರ ಚರ್ಮವು ವಿಭಿನ್ನವಾಗಿರುತ್ತದೆ. ಆದ್ದರಿಂದ ಯಾವಾಗಲೂ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಿಸಿ ಬಳಿಕ ಹಚ್ಚಬೇಕೋ, ಬೇಡ್ವೋ ಎಂದು ನಿರ್ಧರಕ್ಕೆ ಬರಬಹುದು. ನಿಮ್ಮ ಚರ್ಮವು ತ್ವರಿತವಾಗಿ ಪ್ರತಿಕ್ರಿಯಿಸಿದರೆ, ಮೊದಲಿಗೆ ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.