)
Weight Loss Journey: ಫಿಟ್ನೆಸ್ ಟ್ರೆನರ್ ತರ್ಣ್ ಕೌರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ತೂಕ ಇಳಿಸುವ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. 31 ಕೆಜಿ ತೂಕ ಇಳಿಸಿಕೊಂಡ ಅವರು, ತಮ್ಮ ಪ್ರಯಾಣ ಹೇಗಿತ್ತು ಎಂಬುದರ ಬಗ್ಗೆ ನಿರಂತರವಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.. ತಮ್ಮ ಆಹಾರ ಮತ್ತು ವ್ಯಾಯಾಮದ ದಿನಚರಿಗಳನ್ನು ಹಂಚಿಕೊಳ್ಳುವುದಲ್ಲದೆ, ತಮ್ಮ ಫಾಲೋವರ್ಸ್ನ್ನು ಪ್ರೋತ್ಸಾಹಿಸುತ್ತಾರೆ. ಆ ನಿಟ್ಟಿನಲ್ಲಿ, ಇನ್ಸ್ಟಾಗ್ರಾಮ್ನಲ್ಲಿ ಅತಿಯಾಗಿ ತಿನ್ನುವುದಕ್ಕೆ ಕಾರಣವಾಗುವ ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವ ಬಗ್ಗೆ ತರ್ಣ್ ಕೌರ್ ಮಾತನಾಡಿದ್ದಾರೆ. ಆ ಅಭ್ಯಾಸಗಳನ್ನು ತ್ಯಜಿಸಲು ತಾನು ಶ್ರಮಿಸಿದ್ದಲ್ಲದೆ, ಬದಲಾವಣೆಯನ್ನು ತರುವತ್ತ ಹೆಚ್ಚು ಗಮನಹರಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ..
ತರ್ಣ್ ಕೌರ್ ಅತಿಯಾಗಿ ತಿನ್ನುವುದನ್ನು ತಡೆಯಲು ಮತ್ತು ತನ್ನ ದೇಹವನ್ನು ಆಲಿಸಲು ತಾನು ಅಭ್ಯಾಸ ಮಾಡಿದ 8 ವಿಷಯಗಳನ್ನು ವಿವರಿಸಿದ್ದಾರೆ. ನೀವು ಅವುಗಳನ್ನು ಇಲ್ಲಿ ವಿವರವಾಗಿ ಕಾಣಬಹುದು.
1. ಸಣ್ಣ ತಟ್ಟೆಯಲ್ಲಿ ತಿನ್ನುವುದು
ತರ್ಣ್ ಕೌರ್ ಸಣ್ಣ ತಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ.. ಏಕೆಂದರೇ ಹೀಗೆ ಮಾಡುವುದರಿಂದ ಹೆಚ್ಚು ಆಹಾರದ ಸೇವನೆ ತಪ್ಪುತ್ತದೆ ಎನ್ನುವುದು ಅವರ ಅಭಿಪ್ರಾಯ.. ದೊಡ್ಡ ತಟ್ಟೆಯಾದರೆ ಬೇಕಾದಷ್ಟು ಆಹಾರ ಹಾಕಿಕೊಂಡು ಹೊಟ್ಟೆ ತುಂಬ ತಿಂದು ಬಿಡುತ್ತೇವೆ ಇದರಿಂದ ತೂಕ ಗಣನೀಯವಾಗಿ ಹೆಚ್ಚಾಗುತ್ತೆ ಎಂಬುದನ್ನು ಅವರು ವಿವರಿಸಿದ್ದಾರೆ..
2. ಅತಿಯಾದ ನಿಯಂತ್ರಣದ ಅಗತ್ಯವಿಲ್ಲ
ತುಂಬಾ ನಿರ್ಬಂಧ ಹೇರಬೇಡಿ.. ತೂಕ ಇಳಿಸಬೇಕೆಂದು ಏನೂ ತಿನ್ನದೆಯೇ ನಮ್ಮ ಹೊಟ್ಟೆಗೆ ನಾವೇ ಮೋಸಮಾಡಿಕೊಳ್ಳಬಾರದು.. ನಿಮಗೆ ಯಾವ ಆಹಾರ ಜಾಸ್ತಿ ಇಷ್ಟವಾಗುತ್ತದೆಯೋ ಅದನ್ನೇ ಮಿತವಾಗಿ ತಿನ್ನಿ ಎನ್ನುತ್ತಾರೆ ತರ್ಣ್ ಕೌರ್..
3. ಸಂಜೆ 7 ಗಂಟೆಯ ನಂತರ ಊಟ ಮಾಡಬೇಡಿ.
ನಿಮ್ಮ ಭೋಜನವನ್ನು ಬೇಗ ಮುಗಿಸುವ ಅಭ್ಯಾಸ ಮಾಡಿಕೊಳ್ಳಿ. ಅಂದರೆ, ನೀವು ಸಂಜೆ 7 ಗಂಟೆಯೊಳಗೆ ಊಟ ಮುಗಿಸಿ ಬೇಗನೆ ಮಲಗಿದರೆ, ಮಧ್ಯರಾತ್ರಿಯಲ್ಲಿ ನಿಮಗೆ ಅತಿಯಾಗಿ ಹಸಿವಾಗುವುದಿಲ್ಲ.
4. ಊಟದ ನಂತರ ಹಲ್ಲುಜ್ಜಿಕೊಳ್ಳಿ.
ರಾತ್ರಿ ಊಟ ಬೇಗ ಮಾಡಿದ ನಂತರ, ತಕ್ಷಣ ಹಲ್ಲುಜ್ಜಿಕೊಳ್ಳಿ. ಏಕೆಂದರೆ ಹಲ್ಲುಜ್ಜಿದ ತಿನ್ನಬೇಕೆಂಬ ಹಂಬಲ ಕಡಿಮೆಯಾಗುತ್ತದೆ.
5. ನೀರು ಮುಖ್ಯ
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ನೀರು ಬಾಯಾರಿಕೆಯನ್ನು ತಣಿಸುತ್ತದೆ ಜೊತೆಗೆ ಹಸಿವಾದ ಸಮಯದಲ್ಲಿ ಹೆಚ್ಚು ನೀರು ಕುಡಿದರೆ ಹೊಟ್ಟೆ ತುಂಬಿದ ಭಾಸವಾಗಿ ಹೆಚ್ಚು ಆಹಾರ ತಿನ್ನುವುದು ತಪ್ಪುತ್ತದೆ.. ಇದರೊಂದಿಗೆ ಕಡಿಮೆ ಕ್ಯಾಲೋರಿಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇದು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ.. ಮತ್ತು ನಿಮಗೆ ಆಗ್ಗಾಗೆ ಹಸಿವಾಗುವುದಿಲ್ಲ..
(ಸೂಚನೆ: ಇವೆಲ್ಲವೂ ತರ್ಣ್ ಕೌರ್ ಅವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)