ನವದೆಹಲಿ : ಮಹಾನ್ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಣಿ ಆಚಾರ್ಯ ಚಾಣಕ್ಯ ಅವರು ಬರೆದ ಚಾಣಕ್ಯ ನೀತಿಯು ಯಶಸ್ವಿ ಮತ್ತು ಸಂತೋಷದ ಜೀವನವನ್ನು ಹೇಗೆ ನಡೆಸುವುದು ಎನ್ನುವುದನ್ನು ತಿಳಿಸುತ್ತದೆ. ಈ ನೀತಿಯಲ್ಲಿ ಒಬ್ಬ ವ್ಯಕ್ತಿ ಶ್ರೀಮಂತರಾಗಬೇಕಾದರೆ ಏನು ಮಾಡಬೇಕು ಎಂದು ಕೂಡಾ ಹೇಳಲಾಗಿದೆ (Chanakya niti for life).  ಜೀವನದಲ್ಲಿ ಆಗುವ  ಹಣದ ನಷ್ಟವನ್ನು ತಪ್ಪಿಸಲು ಹೇಗೆ ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ವಿವರವಾಗಿ ವಿವರಿಸಲಾಗಿದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ವ್ಯಕ್ತಿಯು ಎಂದಿಗೂ ತೊಂದರೆಗೆ ಸಿಲುಕುವುದಿಲ್ಲ ಎನ್ನಲಾಗುತ್ತದೆ.  


COMMERCIAL BREAK
SCROLL TO CONTINUE READING

 ಒಬ್ಬ ವ್ಯಕ್ತಿಗೆ ಅಪಾರವಾದ ಸಂಪತ್ತನ್ನು ನೀಡಿ, ಸದಾ ಸಿರಿವಂತಿಕೆಯ ಜೀವನ ನಡೆಸಲು ಸಹಾಯ ಮಾಡುವ ಗುಣಗಳು ಯಾವುವು ಎನ್ನುವುದನ್ನು ಚಾಣಾಕ್ಯ ನೀತಿಯ ಮೂಲಕ ತಿಳಿದುಕೊಳ್ಳೋಣ.  ಈ ನೀತಿಯಲ್ಲಿ ಹೇಳಲಾದ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ವ್ಯಕ್ತಿಗೆ ಜೀವನದಲ್ಲಿ ಗೌರವ ಸಿಗುತ್ತದೆ (Chanakya Niti For Success).  ಮಾತ್ರವಲ್ಲ ವ್ಯಕ್ತಿ ಮಣ್ಣನ್ನು ಮುಟ್ಟಿದರೂ ಅದು ಚಿನ್ನವಾಗುವಷ್ಟು ಹಣ ಸಂಪಾದನೆ ಮಾಡಬಹುದಂತೆ. 


ಇದನ್ನೂ ಓದಿ :  12 ವರ್ಷಗಳ ನಂತರ ರಾಶಿಗೆ ಪ್ರವೇಶಿಸುತ್ತಿರುವ ಗುರು , ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ


ಈ ಗುಣಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ : 
ಆಚಾರ್ಯ ಚಾಣಕ್ಯರ ಪ್ರಕಾರ, ಯಾವಾಗಲೂ ಇತರರ ಬಗ್ಗೆ ಒಳ್ಳೆಯ ಭಾವನೆಗಳನ್ನು ಹೊಂದಿರುವ ಜನರು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. ಅವರ ಜೀವನದ ಎಲ್ಲಾ ತೊಂದರೆಗಳು ತಾನಾಗಿಯೇ ನಾಶವಾಗುತ್ತವೆ. ಅಂತಹ ಜನರು ಹಂತ ಹಂತವಾಗಿ ಹಣವನ್ನು ಗಳಿಸುತ್ತಾರೆ ಮತ್ತು ತಮ್ಮ ಜೀವನದ ಪ್ರತಿ ಹಂತದಲ್ಲಿಯೂ ಸಂತೋಷವನ್ನು ಅನುಭವಿಸುತ್ತಾರೆ (Chanakya Niti For Life). 


ದಾನ ಕಾರ್ಯಗಳಲ್ಲಿ ತೊಡಗಿರುವ ಜನರು  ಸಮಾಜದ ಬಗ್ಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಸಮಾಜದಲ್ಲಿ ಸಹಾಯದ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವವರನ್ನು  ಅದೃಷ್ಟ ಯಾವಾಗಲೂ ಬೆಂಬಲಿಸುತ್ತದೆ. ಅಂತಹವರು ಯಾವುದೇ ಕೆಲಸ, ವ್ಯಾಪಾರ ಮಾಡಿದರೂ ಅವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ ಮತ್ತು ಸಮಾಜದಲ್ಲಿ ಗೌರವವೂ ಸಿಗುತ್ತದೆ. 


ಇದನ್ನೂ ಓದಿ:  Budh Gochar: ವೃತ್ತಿ-ವ್ಯವಹಾರದಲ್ಲಿ ಪ್ರಗತಿಶೀಲ ಗ್ರಹ ಸಂಚಾರ, ಇದು ನಿಮಗೆ ಶುಭವೋ ಅಶುಭವೋ ತಿಳಿಯಿರಿ


ಯಾರು ತನು, ಮನ ಧನಗಳಿಂದ ಪರೋಪಕಾರದಲ್ಲಿ ತೊಡಗುತ್ತಾರೆಯೋ, ಅವರ ಮನೆಯಲ್ಲಿ ಹಣದ ಭಂಡಾರ ಯಾವಾಗಲೂ ತುಂಬಿರುತ್ತದೆ. ಅವರ ಜೀವನದಲ್ಲಿ ಕಷ್ಟಗಳು ಬರುವುದಿಲ್ಲ, ಬಂದರೂ ಸುಲಭವಾಗಿ ಪರಿಹಾರವಾಗುತ್ತವೆ. 


 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.