Broom Vastu Tips : ಪ್ರತಿ ಮನೆಯಲ್ಲೂ ಸ್ವಚ್ಛತೆಗಾಗಿ ಪೊರಕೆಯನ್ನು ಬಳಸಲಾಗುತ್ತದೆ. ಪೊರಕೆ ಸಂಪತ್ತಿನ ದೇವತೆಯಾದ  ಲಕ್ಷ್ಮೀ ಗೆ ಸಂಬಂಧಿಸಿದ್ದಾಗಿದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಪೊರಕೆ ಕೊಳ್ಳುವಾಗ ಅಥವಾ ಬಳಸುವುದರಲ್ಲಿ ನಿಯಮ ತಪ್ಪಿದರೆ  ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ವಾಸ್ತು ಶಾಸ್ತ್ರದಲ್ಲಿ, ಪೊರಕೆಯ ಬಗ್ಗೆ  ಕೆಲವು ಪ್ರಮುಖ ನಿಯಮಗಳನ್ನು  ಹೇಳಲಾಗಿದೆ. ಈ ನಿಯಮಗಳನ್ನು ಅನುಸರಿಸಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಪೊರಕೆ ಬಗ್ಗೆ ಈ ನಿಯಮಗಳನ್ನು ಅನುಸರಿಸಿ :
ಅದು ಮನೆಯಾಗಿರಲಿ ಅಥವಾ ಕಚೇರಿಯಾಗಿರಲಿ, ಪೊರಕೆಯನ್ನು ಯಾವಾಗಲೂ ಸೂರ್ಯೋದಯದ ನಂತರವೇ ಬಳಸಬೇಕು. ಸಂಜೆಯಾದ ನಂತರ ಪೊರಕೆಯನ್ನು ಬಳಸಬಾರದು. ಸಂಜೆಯ ವೇಳೆ ಪೊರಕೆ ಬಳಸಿದರೆ ಲಕ್ಷ್ಮೀ ದೇವಿಯನ್ನು ಕೆರಳಿಸುತ್ತದೆ ಎಂದು ಹೇಳಲಾಗುತ್ತದೆ.  ಮುಸ್ಸಂಜೆ ಹೊತ್ತಲ್ಲಿ ಮನೆಗೆ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಕಾರಣದಿಂದ ಸಂಜೆಯ ನಂತರ ಪೊರಕೆಯನ್ನು ಬಳಸಬಾರದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Diwali 2022: ದೀಪಾವಳಿಯ ರಾತ್ರಿ ಈ ಪ್ರಾಣಿ-ಪಕ್ಷಿ ಕಂಡರೆ ಅದು ಮನೆಗೆ ಲಕ್ಷ್ಮಿಯ ಆಗಮನದ ಸಂಕೇತ


ಪೊರಕೆಯನ್ನು ಎಲ್ಲರ ಕಣ್ಣಿಗೆ ಬೀಳುವ ಜಾಗದಲ್ಲಿ ಇಡಬಾರದು.  ಪೊರಕೆಯನ್ನು ಯಾವಾಗಲೂ ಮರೆಮಾಡಿ ಇಡಬೇಕು. ಹೊರಗಿನಿಂದ ಬಂದವರಿಗೆ ಕಾಣದಂಥಹ ಜಾಗದಲ್ಲಿ ಪೊರಕೆ ಇಡಬೇಕು. 


ಅಡುಗೆಮನೆಯಲ್ಲಿ ಅಥವಾ ತಿಜೋರಿ ಬಳಿ ಪೊರಕೆ ಇಡಬೇಡಿ. ಇದರಿಂದ ತಾಯಿ ಅನ್ನಪೂರ್ಣೆ ಹಾಗೂ  ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾರೆ. ಇದರಿಂದ  ಮನೆಯಲ್ಲಿ ಬಡತನ ಮತ್ತು ನಕಾರಾತ್ಮಕತೆ ನೆಲೆಯಾಗುತ್ತದೆ.  


ಗೋವು ಅಥವಾ ಯಾವುದೇ ಪ್ರಾಣಿಗೆ ಪೊರಕೆಯಿಂದ ಹೊಡೆಯಬೇಡಿ. ಇದು ದುರಾದೃಷ್ಟಕ್ಕೆ ಕಾರಣವಾಗುತ್ತದೆ. 


ಇದನ್ನೂ ಓದಿ : Diwali 2022: ದೀಪಾವಳಿಯ ರಾತ್ರಿ ಮಾಟ-ಮಂತ್ರಗಳ ಸಿದ್ಧಿ ನಡೆಯುತ್ತದೆ, ನಕಾರಾತ್ಮಕ ಶಕ್ತಿಗಳಿಂದ ಈ ರೀತಿ ಪಾರಾಗಿ


ಮನೆಯ ಸದಸ್ಯರು ಯಾವುದಾದರೂ ಕೆಲಸದ ನಿಮಿತ್ತ ಮನೆಯಿಂದ ಹೊರಗೆ  ಹೊರಟರೆ ಅವರು ಹೋರಾಟ ತಕ್ಷಣ ಪೊರಕೆಯಿಂದ ಮನೆ ಗುಡಿಸುವ ಕೆಲಸ ಮಾಡಬೇಡಿ, ಹೀಗೆ ಮಾಡುವುದರಿಂದ ಆ ವ್ಯಕ್ತಿ ಮಾಡಲು ಹೊರಟಿರುವ ಕೆಲಸದಲ್ಲಿ ವಿಫಲನಾಗುತ್ತಾನೆ. 


ಪೊರಕೆಯನ್ನು ಯಾವತ್ತೂ ನಿಂತ ಸ್ಥಿತಿಯಲ್ಲಿ ಇಡಬೇಡಿ. ಪಾದಗಳನ್ನು ಪೊರಕೆಗೆ ತಾಗಿಸಬೇಡಿ. ಮೊದಲೇ ಹೇಳಿದಂತೆ ಪೊರಕೆಯನ್ನು ಲಕ್ಷ್ಮೀ ಸ್ವರುಉಪ ಎಂದು ಹೇಳಲಾಗುತ್ತದೆ. ಹಾಗಾಗಿ ತಪ್ಪಿ ಪೊರಕೆಗೆ ಕಾಲು ತಾಗಿದರೆ ಲಕ್ಷ್ಮೀ ದೇವಿಯ ಕ್ಷಮೆಯಾಚಿಸಿ. 


ಶನಿವಾರದಂದು ಪೊರಕೆಯನ್ನು ಎಂದಿಗೂ ಖರೀದಿಸಬೇಡಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.