)
snake repellent garuda tree: ಸಹರಾನ್ಪುರ ಎಂಬುದು ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ನಗರ. ಈ ಪ್ರದೇಶದಲ್ಲಿ ಹೆಚ್ಚಾಗಿ ಹಾವುಗಳು ಕಂಡುಬರುತ್ತವೆ. ಹೊಲ ಗದ್ದೆ, ತೋಟ, ಮನೆ ಎಂದಿಲ್ಲದೆ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಕಾಡುಗಳಿಂದ ಹಾವುಗಳು ಹೊರಬಂದು ಹಳ್ಳಿ ಮತ್ತು ಮನೆಗಳಿಗೆ ನುಗ್ಗಿ ಜನರ ಮೇಲೆ ದಾಳಿ ನಡೆಸುತ್ತಿದೆ. ಈ ಸಮಸ್ಯೆಯಿಂದ ಬೇಸತ್ತ ಇಲ್ಲಿನ ಜನರು ನೈಸರ್ಗಿಕ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ಇದರ ಮೂಲಕ ಹಾವುಗಳಿಗೆ ಹಾನಿ ಮಾಡದೆ ಅವುಗಳನ್ನು ದೂರ ಓಡಿಸುವ ಕೆಲಸ ಮಾಡುತ್ತಿದ್ದಾರೆ.
ಸಹರಾನ್ಪುರದ ಕೆಲವು ಪ್ರದೇಶಗಳು ಶಿವಾಲಿಕ್ ಕಾಡಿನಿಂದ ಸುತ್ತುವರೆದಿವೆ. ಇದೇ ಕಾರಣಕ್ಕೆ ಸಣ್ಣ ಹಾವುಗಳಿಂದ ಹಿಡಿದು ದೊಡ್ಡ ಹೆಬ್ಬಾವುಗಳವರೆಗಿನ ಹಾವುಗಳು ಇಲ್ಲಿನ ಮನೆಗಳಿಗೆ ಪ್ರವೇಶಿಸುತ್ತಿವೆ. ಇಲ್ಲಿನ ನಿವಾಸಿ ರಾಜೇಂದ್ರ ಅಟಲ್ ಎಂಬವರು ಹಾವುಗಳಿಂದ ತೊಂದರೆಗೊಳಗಾದ ನಂತರ ತಮ್ಮ ನೈಸರ್ಗಿಕ ತೋಪಿನಲ್ಲಿ ಕೆಲವು ಗರುಡ ಮರಗಳನ್ನು ನೆಟ್ಟರು. ಅವುಗಳನ್ನು ನೆಟ್ಟಾಗಿನಿಂದ, ಅವರ ನೈಸರ್ಗಿಕ ತೋಪಿನಲ್ಲಿ ಒಂದೇ ಒಂದು ಹಾವು ಕೂಡ ಕಾಣಿಸಿಕೊಂಡಿಲ್ಲ. ಇದು ಒಂದು ಜೀವಂತ ಉದಾಹರಣೆಯಾಗಿದೆ.
ಇದರರ್ಥ ಗರುಡ ಮರವು ಹಾವುಗಳಿಗೆ ಬದ್ಧವೈರಿ. ಆದ್ದರಿಂದ, ಗರುಡ ಮರವನ್ನು ನೋಡಿದ ನಂತರ ಹಾವುಗಳು 50 ಮೀಟರ್ ದೂರದಿಂದಲೇ ಓಡಿಹೋಗುತ್ತಿವೆ. ಈಗ, ಸಹರಾನ್ಪುರದಲ್ಲಿ ಎಲ್ಲೆಲ್ಲೂ ಗರುಡ ಮರಗಳನ್ನು ಕಾಣಬಹುದು. ಈ ಮೂಲಕ ಅಲ್ಲಿನ ಜನತೆ ಹಾವಿನ ಸಮಸ್ಯೆಯಿಂದ ಪರಿಹಾರ ಕಂಡುಕೊಂಡಿದ್ದಾರೆ.
ಮಾಧ್ಯಮದೊಂದೊಗೆ ಮಾತನಾಡಿದ ನೈಸರ್ಗಿಕ ತೋಪಿನ ಮಾಲೀಕ ರಾಜೇಂದ್ರ ಅಟಲ್, "ಬಹಳಷ್ಟು ಹಾವುಗಳಿದ್ದರೆ ಅಥವಾ ನೀವು ಹಾವುಗಳಿಗೆ ಹೆದರುತ್ತಿದ್ದರೆ ಮತ್ತು ಅವುಗಳ ಕಾರಣದಿಂದಾಗಿ ಮನೆಯಿಂದ ಹೊರಬರಲು ಹೆದರುತ್ತಿದ್ದರೆ, ನಿಮ್ಮ ಮನೆಯಲ್ಲಿರುವ ಸಸ್ಯಗಳ ನಡುವೆ ಗರುಡ ಮರವನ್ನು ನೆಡಿ. ಹೀಗೆ ಮಾಡಿದರೆ, ಮನೆಯ 50 ಮೀಟರ್ ವ್ಯಾಪ್ತಿಯಿಂದಲೇ ಹಾವುಗಳ ಆಗಮನವನ್ನು ತಡೆಯುತ್ತದೆ" ಎಂದಿದ್ದಾರೆ.
ಗರುಡ ಮರವನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಇದು ದೊಡ್ಡ ಮರವಾಗಿ ಬೆಳೆಯುತ್ತದೆ. ರಾಜೇಂದ್ರ ಅಟಲ್ ತನ್ನ ಜಾಗದಲ್ಲಿ ಹೆಚ್ಚಿನ ಸಂಖ್ಯೆಯ ಗರುಡ ಮರಗಳನ್ನು ನೆಟ್ಟಿದ್ದಾರೆ. ಆಯುರ್ವೇದದಲ್ಲಿ ಗರುಡ ಮರವು ಹೆಚ್ಚಿನ ಮಹತ್ವವನ್ನು ಹೊಂದಿದೆ. ಇನ್ನು ಗರುಡ ಮರದ ಮರ ಎಲೆ, ತೊಗಟೆ, ಬೇರನ್ನು ಸಹ ಮನೆಯ ಬಾಗಿಲಿಗೆ ಕಟ್ಟಿದರೆ ಹಾವುಗಳ ಬರುವಿಕೆ ಕಡಿಮೆಯಾಗುತ್ತದೆ. ಹಾಗೆಯೇ ಈ ಮರದ ಹಣ್ಣು ಹಾವಿನ ಕಡಿತದ ವಿಷವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.