Planet Transit 2022 : ಇಂದು ಬುಧ ಗ್ರಹವು ತನ್ನದೇ ಆದ ರಾಶಿಚಕ್ರದ ಕನ್ಯಾರಾಶಿಯಲ್ಲಿನ್ನು ಪ್ರವೇಶಿಸಿದೆ. ಇನ್ನು ಅಕ್ಟೋಬರ್ 26 ರವರೆಗೆ ಬುಧ ಕನ್ಯಾರಾಶಿಯಲ್ಲಿಯೇ  ಇರಲಿದ್ದಾನೆ. ಇದಕ್ಕೂ ನಾಲ್ಕು ದಿನಗಳ ಹಿಂದೆ, ಗ್ರಹಗಳ ರಾಜನಾದ ಸೂರ್ಯನು ರಾಶಿಚಕ್ರವನ್ನು ಬದಲಿಸಿ ಸ್ವರಾಶಿ ಸಿಂಹ ರಾಶಿಯನ್ನು ಪ್ರವೇಶಿಸಿದ್ದನು. ಇದಲ್ಲದೆ, ಈ ಸಮಯದಲ್ಲಿ ಮಕರ ರಾಶಿಯಲ್ಲಿ ನ್ಯಾಯದ ದೇವದಾರ ಶನಿ ಕೂಡಾ ನೆಲೆಸಿದ್ದಾನೆ.  ಈ ರೀತಿಯಾಗಿ, ಮೂರು ಪ್ರಮುಖ ಗ್ರಹಗಳು ತಮ್ಮದೇ ಆದ ರಾಶಿಯಲ್ಲಿ ಇರುವುದು ಅಪರೂಪದ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ, ಬುಧ ಮತ್ತು ಶನಿ ತಮ್ಮ ಸ್ವಂತ ರಾಶಿಗಳಲ್ಲಿ ಒಟ್ಟಿಗೆ ಇರುವುದು ವಿಶೇಷ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಬುಧ-ಸೂರ್ಯ-ಶನಿ ಬೆಳಗಲಿದ್ದಾರೆ ಅದೃಷ್ಟ :  
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಈ ಗ್ರಹ ಸ್ಥಾನಗಳು ತುಂಬಾ ಶುಭಕರ. ಸಿಂಹರಾಶಿಯಲ್ಲಿ ಸೂರ್ಯನು ಇರುವಾಗ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಈ ಹೊತ್ತಿನಲ್ಲಿ ಅವರ ಶೌರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರಿಗೆ ಉತ್ತಮ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.  ಆದರೆ ಆರೋಗ್ಯದ ಬಗ್ಗೆ ಮಾತ್ರ ಸ್ವಲ್ಪ ಎಚ್ಚರಿಕೆ ಅಗತ್ಯ. 


ಇದನ್ನೂ ಓದಿ : Vastu Tips: ತೆಂಗಿನ ಕಾಯಿ ತಾಯಿ ಲಕ್ಷ್ಮಿಯ ಸ್ವರೂಪ, ಯಶಸ್ಸಿಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ


ಕರ್ಕಾಟಕ ರಾಶಿ: ಸೂರ್ಯ, ಶನಿ ಮತ್ತು ಬುಧನ ಸ್ಥಾನದಲ್ಲಾಗುವ ಬದಲಾವಣೆ  ಕರ್ಕ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಬಡ್ತಿ ಪಡೆಯಬಹುದು. ನ್ಯಾಯಾಲಯದಲ್ಲಿ ಸಿಲುಕಿರುವ ಪ್ರಕರಣಗಳು ಇತ್ಯರ್ಥವಾಗಲಿವೆ. ಹೂಡಿಕೆ ಮಾಡಲು ಮತ್ತು ಉಳಿಸಲು ಇದು ಉತ್ತಮ ಸಮಯ. 


ತುಲಾ ರಾಶಿ : ತುಲಾ ರಾಶಿಯವರಿಗೆ ಪ್ರಸ್ತುತ ಸೂರ್ಯ, ಬುಧ ಮತ್ತು ಶನಿಯ ಸ್ಥಾನವು ಮಂಗಳಕರವಾಗಿದೆ. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟದ ಬೆಂಬಲ ಸಿಗುತ್ತದೆ. ವಿದೇಶ ಪ್ರಯಾಣಕ್ಕೆ ಯೋಜನೆ ರೂಪಿಸಲಾಗುವುದು. ವಿದೇಶಗಳಿಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಲಾಭವಾಗಲಿದೆ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು.


ಇದನ್ನೂ ಓದಿ :  Surya Grahan : ಈ ದಿನ ವರ್ಷದ ಕೊನೆಯ ಸೂರ್ಯಗ್ರಹಣ : ಇದು ದೀಪಾವಳಿ-ಗೋಪೂಜೆ ಮೇಲೆ ಪರಿಣಾಮವೆ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.