ಈ ನಾಲ್ಕು ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ಬದುಕು ಬಂಗಾರವಾಗುತ್ತದೆಯಂತೆ..!
ಪ್ರತಿ ರಾಶಿಗಳಿಗೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ಆಯಾ ರಾಶಿಗನುಗುಣವಾಗಿ ಅವರವರ ಗುಣ ವಿಶೇಷತೆಗಳನ್ನು ಕೂಡಾ ಲೆಕ್ಕ ಹಾಕಲಾಗುತ್ತದೆ. ಹಾಗೆಯೇ ಕೆಲ ರಾಶಿಚಕ್ರಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಉತ್ತಮ ಪತ್ನಿಯರಾಗುವ ಗುಣವಿರುತ್ತದೆಯಂತೆ.
ನವದೆಹಲಿ : ಪ್ರತಿ ರಾಶಿಗಳಿಗೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ಆಯಾ ರಾಶಿಗನುಗುಣವಾಗಿ (Zodia sign) ಅವರವರ ಗುಣ ವಿಶೇಷತೆಗಳನ್ನು ಕೂಡಾ ಲೆಕ್ಕ ಹಾಕಲಾಗುತ್ತದೆ. ಹಾಗೆಯೇ ಕೆಲ ರಾಶಿಚಕ್ರಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಉತ್ತಮ ಪತ್ನಿಯರಾಗುವ ಗುಣವಿರುತ್ತದೆಯಂತೆ. ಅಂದರೆ ಅವರು ಎಥಾ ಸಂದರ್ಭ ಬಂದರೂ ತಮ್ಮ ಸಂಗಾತಿಯ ಜೊತೆ ತೊರೆಯುವುದಿಲ್ಲವಂತೆ. ಹಾಗಿದ್ದರೆ, ಯಾವ ರಾಶಿಚಕ್ರ ಮಹಿಳೆಯರು ಈ ವಿಶೇಷ ಗುಣವನ್ನು ಹೊಂದಿರುತ್ತಾರೆ ನೋಡೋಣ.
ಮೀನ : ಈ ರಾಶಿಚಕ್ರದ ಹೆಣ್ಣು ಮಕ್ಕಳು ಅತೀ ಸೂಕ್ಷ್ಮ ಮತ್ತು ಕಾಳಜಿಯುಳ್ಳವರು. ಈ ರಾಶಿಚಕ್ರ ಚಿಹ್ನೆಗಳ ಮಹಿಳೆಯರು (woman) ಕಷ್ಟದ ಸಮಯದಲ್ಲಿ ತಮ್ಮ ಸಂಗಾತಿಯನ್ನು ಬಿಟ್ಟು ಹೋಗುವುದಿಲ್ಲ ಸದಾ ಜೊತೆಯಾಗಿ ನಿಲ್ಲುತ್ತಾರೆ. ಅವರು ಭಾವನಾತ್ಮಕವಾಗಿರುತ್ತಾರೆ ಮತ್ತು ತುಂಬಾ ಪ್ರೀತಿಯುಳ್ಳವರಾಗಿರುತ್ತಾರೆ.
ಇದನ್ನೂ ಓದಿ : Palmistry: ನೀವು ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಹೊಂದಿರುವಿರಿ? ನಿಮ್ಮ ಕೈಗಳನ್ನು ನೋಡಿ ತಿಳಿದುಕೊಳ್ಳಿ
ಕಟಕ: ಈ ರಾಶಿಚಕ್ರದ ಮಹಿಳೆಯರು ಪೋಷಣೆ ಮತ್ತು ಆರೈಕೆಯಲ್ಲಿ ಉತ್ತಮರು. ತನ್ನ ಸಂಗಾತಿಯನ್ನು ಅನಗತ್ಯವಾಗಿ ತೊಂದರೆಗೆ ಈಡು ಮಾಡುವುದಿಲ್ಲ. ಯಾವಾಗಲೂ ನಿಷ್ಠಳಾಗಿರುತ್ತಾಳೆ (Loyal towards husband) . ಈ ರಾಶಿಯವರು ಸಂಬಂಧದಲ್ಲಿ ಸ್ಥಿರತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಾಗಿ ಅವರು ಎಂದಿಗೂ ತಮ್ಮ ಸಂಗಾತಿಯನ್ನು ಬಿಡುವುದಿಲ್ಲ.
ತುಲಾ : ಈ ರಾಶಿಚಕ್ರದ ಹೆಣ್ಣು ಮಕ್ಕಳು ಕೂಡಾ ವೈವಾಹಿಕ ಜೀವನದಲ್ಲಿ (married life) ಸಮತೋಲನ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. ಕಷ್ಟಕರ ಸಂದರ್ಭಗಳಲ್ಲಿ ಪ್ರಬುದ್ಧರಾಗಿ ವರ್ತಿಸುತ್ತಾರೆ. ಕಷ್ಟಕರ ಸಂದರ್ಭಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಇವರು ಸಮಸ್ಯೆಯ ಬದಲು ಪರಿಹಾರದ ಬಗ್ಗೆ ಯೋಚಿಸುತ್ತಾರೆ. ಸಂಬಂಧಗಳನ್ನು ಬಹಳ ಪ್ರಾಮಾಣಿಕವಾಗಿ ನಿಷ್ಟೆಯಿಂದ ನಿಭಾಯಿಸುತ್ತಾರೆ.
ಇದನ್ನೂ ಓದಿ : Saturday Born Child: ಈ ದಿನ ಜನಿಸಿದವರ ಮೇಲೆ ಶನಿದೇವ ವಿಶೇಷ ಕೃಪೆ ತೋರುತ್ತಾನೆ
ಕುಂಭ : ಈ ರಾಶಿಚಕ್ರದ ಮಹಿಳೆಯರು ಬಲವಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ತನ್ನನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಇವರಿಗೆ ತಿಳಿದಿರುತ್ತದೆ. ಪ್ರೀತಿ ಮತ್ತು ವಾತ್ಸಲ್ಯದ ಬಗ್ಗೆ ಉತ್ತಮ ಕಾಳಜಿ ಹೊಂದಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ