Goddess Lakshmi: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ವಾಸ್ತುವಿನಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ನೀವು ಎಲ್ಲವನ್ನೂ ವಾಸ್ತು ಪ್ರಕಾರ ಮಾಡಿದರೆ ನಿಮ್ಮ ಜೀವನವು ತುಂಬಾ ಉತ್ತಮವಾಗಿರುತ್ತದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ ಮನೆಯಲ್ಲಿ ಲಕ್ಷ್ಮಿ ದೇವಿಯ ಚಿತ್ರ ಅಥವಾ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಏಕೆಂದರೆ ನೀವು ಲಕ್ಷ್ಮಿ ದೇವಿಯ ಚಿತ್ರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನಿಂತುಹೋಗುತ್ತದೆ. ಮತ್ತು ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ. ಲಕ್ಷ್ಮಿ ದೇವಿಯ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದರ ಕುರಿತು ನೀವು ಈ ಇಲ್ಲಿ ತಿಳಿಯಬಹುದು..
ಹಿಂದೂ ಧರ್ಮದಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಚಿತ್ರ ಅಥವಾ ಪ್ರತಿಮೆಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ, ಈ ದಿಕ್ಕನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಹೇಳಲಾಗಿದೆ.. ಇದಲ್ಲದೆ, ಕಮಲದ ಹೂವಿನ ಮೇಲೆ ಕುಳಿತು ಸಂಪತ್ತಿನ ಮಳೆಯನ್ನು ಸುರಿಸುವ ಲಕ್ಷ್ಮಿ ದೇವಿಯ ಚಿತ್ರವನ್ನು ಈ ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಚಿತ್ರ ಅಥವಾ ವಿಗ್ರಹವನ್ನು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬಾರದು.. ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದಾಗಿ, ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಮತ್ತು ಅನಗತ್ಯ ನಗದು ವೆಚ್ಚಗಳು ಹೆಚ್ಚಾಗುತ್ತವೆ.
ಈ ವಾಸ್ತು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ:
- ಮನೆಯಲ್ಲಿ ಇಡುವ ಲಕ್ಷ್ಮಿ ದೇವಿಯ ಚಿತ್ರ ಅಥವಾ ವಿಗ್ರಹ ಯಾವಾಗಲೂ ಸ್ವಚ್ಛವಾಗಿರಬೇಕು ಮತ್ತು ಚಿತ್ರದ ಸುತ್ತಲೂ ಬೆಳಕು ಇರಬೇಕು. ಏಕೆಂದರೆ ಕತ್ತಲೆ ಮತ್ತು ಕೊಳಕು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಪೋಟೋದೊಂದಿಗೆ ಗಣೇಶನ ಚಿತ್ರವನ್ನು ಇಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
- ಲಕ್ಷ್ಮಿ ದೇವಿಯ ಚಿತ್ರ ಅಥವಾ ಪ್ರತಿಮೆಯ ಬಳಿ ಖಂಡಿತವಾಗಿಯೂ ದೀಪವನ್ನು ಹಚ್ಚಬೇಕು.
- ನೀವು ತಪ್ಪಾಗಿ ಸಹ ನಿಮ್ಮ ಮಲಗುವ ಕೋಣೆ ಅಥವಾ ಅಡುಗೆಮನೆಯ ಬಳಿ ಲಕ್ಷ್ಮಿ ದೇವಿಯ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು.









