Gray Hair Remedies: ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ ಎಂಬುದು ಗೊತ್ತಿರುವ ವಿಚಾರ. ಈ ಎಣ್ಣೆ ಕೂದಲಿಗೆ ಆಳವಾದ ಪೋಷಣೆಯನ್ನು ನೀಡಿ, ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ಪ್ರತಿದಿನ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಹಲವು ರೀತಿಯ ಕೂದಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆದಾಗ್ಯೂ, ತೆಂಗಿನ ಎಣ್ಣೆಯನ್ನು ಕೆಲವು ಪದಾರ್ಥಗಳನ್ನು ಬೆರೆಸಿ ಹಚ್ಚುವುದರಿಂದ ಇನ್ನೂ ಹೆಚ್ಚು ಉಪಯೋಗಗಳನ್ನು ಪಡೆಯಬಹುದು.
ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸಲು ನಾವು ಅನೇಕ ರೀತಿಯ ಎಣ್ಣೆಗಳು ಮತ್ತು ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತೇವೆ, ಆದರೆ ಈ ಉತ್ಪನ್ನಗಳು ನಮ್ಮ ಕೂದಲಿಗೆ ಹಾನಿ ಮಾಡುತ್ತದೆ. ಅಷ್ಟೇ ಅಲ್ಲ ಇದರಿಂದ ಉತ್ತಮ ಫಲಿತಾಂಶ ಕೂಡ ಸಿಗುವುದಿಲ್ಲ. ಆದ್ದರಿಂದ, ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸುವುದು ಉತ್ತಮ. ಬಿಳಿ ಕೂದಲು ಕೆಲವೇ ದಿನಗಳಲ್ಲಿ ನೈಸರ್ಗಿಕವಾಗಿ ಕಪ್ಪು ಮತ್ತು ದಪ್ಪವಾಗಿ ಬೆಳೆಯಬೇಕು ಎಂದರೆ, ನೀವು ಕೆಲವು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಬೇಕು.
ಇದನ್ನೂ ಓದಿ: ಪ್ರತಿದಿನವೂ ಈ ನೈಸರ್ಗಿಕ ಜ್ಯೂಸ್ ಕುಡಿದ್ರೆ ನೀವು ಬೇಗನ ತೂಕ ನಷ್ಟ ಮಾಡಿಕೊಳ್ಳಬಹುದು!!
ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಹಚ್ಚುವುದರಿಂದ ಇದು ನಿಮ್ಮ ಕೂದಲನ್ನು ಬಲಿಷ್ಟವಾಗಿಸುತ್ತದೆ. ಈ ಎಣ್ಣೆ ಕೂದಲಿಗೆ ಆಳವಾದ ಪೋಷಣೆಯನ್ನು ನೀಡಿ, ಕೂದಲಿನ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ. ಪ್ರತಿದಿನ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ಬೂದು ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಮೆಂತ್ಯೆ ಪರಿಣಾಮಕಾರಿ. ಇದು ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಿ, ಬೇರಿನಿಂದಲೇ ಕೂದಲನ್ನು ಬಲಪಡಿಸುತ್ತದೆ. ಅಲ್ಲದೆ, ಇದರಲ್ಲಿರುವ ಗುಣಗಳು ಕೂದಲನ್ನು ಕಪ್ಪಾಗಿಸುವಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಶುಗರ್ ಎಷ್ಟೇ ಹೆಚ್ಚಿದ್ದರೂ ನಾರ್ಮಲ್ ಆಗಿಸುತ್ತೆ ಈ ಎಲೆ! ಜಜ್ಜಿ ರಸ ಮಾಡಿ ಕುಡಿದ್ರೆ ಹಾರ್ಟ್‌ಅಟ್ಯಾಕ್ ಭಯವೂ ಇರಲ್ಲ..
ಬಳಸುವ ವಿಧಾನ:
ಮೊದಲು ಮೆಂತ್ಯವನ್ನು ನುಣ್ಣಗೆ ರುಬ್ಬಿ, ನಂತರ 1 ಚಮಚ ಮೆಂತ್ಯ ಪುಡಿಯನ್ನು 3 ರಿಂದ 4 ಚಮಚ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಚೆನ್ನಾಗಿ ಕುದಿಸಿ. ಎಣ್ಣೆಯನ್ನು ಚೆನ್ನಾಗಿ ತಣ್ಣಗಾಗಿಸಿ ಕೂದಲಿಗೆ ಹಚ್ಚಬೇಕು. ಇದನ್ನು ವಾರಕ್ಕೆ ಎರಡು ಬಾರಿ ಬಳಸುವುದರಿಂದ, ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ತೆಂಗಿನ ಎಣ್ಣೆ, ಕರಿಬೇವಿನ ಮಿಶ್ರಣ:
ತೆಂಗಿನ ಎಣ್ಣೆ ಬಿಳಿ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ತೆಂಗಿನ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಕುದಿಸಿ ಕೂದಲಿಗೆ ಹಚ್ಚಿದರೆ, ನಿಮ್ಮ ಕೂದಲಿಗೆ ಹಲವಾರು ಪ್ರಯೋಜನೆಗಳು ದೊರೆಯುತ್ತದೆ. 1 ಬಟ್ಟಲು ತೆಂಗಿನ ಎಣ್ಣೆಯನ್ನು ತೆಗೆದುಕೊಂಡು, ಅದಕ್ಕೆ ಕೆಲವು ಕರಿಬೇವು ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಎಣ್ಣೆಯ ಬಣ್ಣ ಬದಲಾದಾಗ, ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲನ್ನು ಬೇರಿನಿಂದಲೇ ಕಪ್ಪು ಬಣ್ಣಕ್ಕೆ ತಿರುಗಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹಚ್ಚಿ ಬೆಳಿಗ್ಗೆ ತಲೆ ತೊಳೆಯುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ.
ಇದನ್ನೂ ಓದಿ: ಇದೊಂದು ಪುಟ್ಟ ಹಣ್ಣು ಸಾಕು ಬ್ಲಡ್ ಶುಗರ್ ನಾರ್ಮಲ್ ಮಾಡಲು ! ದಿನಕ್ಕೊಂದರಂತೆ ಯಾವ ಸಮಯದಲ್ಲಾದರೂ ಸೇವಿಸಿ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ