ನವದೆಹಲಿ: ಗ್ರಹಗಳು ರಾಶಿ ಬದಲಾಯಿಸಿದಾಗ ಅದರ ಪರಿಣಾಮ ಭೂಮಿಯ ಮೇಲೆ ಗೋಚರಿಸುತ್ತದೆ. ಕಾಲಕಾಲಕ್ಕೆ ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ ಅಥವಾ ಉದಯಿಸುತ್ತವೆ. ಇದರಿಂದ ಭೂಮಿ ಹಾಗೂ ಮಾನವನ ಜೀವನ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಗುರುವನ್ನು ದೇವತೆಗಳ ಗುರು, ಜ್ಞಾನ, ಗುರು, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಪುಣ್ಯ ಮತ್ತು ಬೆಳವಣಿಗೆ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಗುರು ಮಾರ್ಚ್ 31ರಂದು ರಾಶಿ ಬದಲಾಯಿಸಿದೆ. ಇದೀಗ ಅದು ಏಪ್ರಿಲ್ 29ರಂದು ಮೀನ ರಾಶಿಯಲ್ಲಿ ಉದಯಿಸಲಿದೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ 3 ರಾಶಿಗಳು ವಿಶೇಷವಾಗಿ ಆರ್ಥಿಕ ಪ್ರಯೋಜನ ಪಡೆಯುತ್ತವೆ. ಈ ರಾಶಿಗಳು ಯಾವುವು ಎಂದು ತಿಳಿಯಿರಿ.


ಇದನ್ನೂ ಓದಿ: Astro Tips: ಕುಂಭ ರಾಶಿಗೆ ಶನಿ ಪ್ರವೇಶ, ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ!


ಕರ್ಕಾಟಕ ರಾಶಿ: ಗುರುಗ್ರಹದ ಉದಯವು ಕರ್ಕಾಟಕ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕರ್ಕಾಟಕ ರಾಶಿಯವರ ಸಂಕ್ರಮಣ ಜಾತಕದಲ್ಲಿ ಗುರುವು 6ನೇ ಮತ್ತು 9ನೇ ಮನೆಯ ಅಧಿಪತಿಯಾಗಿದ್ದು, ಅದೃಷ್ಟದ ಸ್ಥಳದಲ್ಲಿ ಕುಳಿತಿದ್ದಾನೆ. ಇದಲ್ಲದೇ ಹನ್ಸರಾಜ ಯೋಗ ಸಹ ಸೃಷ್ಟಿಯಾಗಿದೆ. ಈ ಸಮಯದಲ್ಲಿ ನೀವು ಅದೃಷ್ಟ ಪಡೆಯುವ ಸಾಧ್ಯತೆಗಳಿವೆ. ನೀವು ಒತ್ತಡದ ಪರಿಸ್ಥಿತಿಯಿಂದ ಸಹ ಹೊರಬರಬಹುದು. ನಿಮ್ಮ ಆದಾಯವೂ ಹೆಚ್ಚಲಿದೆ. ಉದ್ಯೋಗದಲ್ಲಿರುವವರು ಬಡ್ತಿ ಪಡೆಯಬಹುದು. ವಿದೇಶಕ್ಕೆ ಹೋಗುವ ಸಾಧ್ಯತೆಗಳೂ ಇವೆ. ಶನಿಯ ಪ್ರಭಾವದಿಂದ ನಿಮಗೆ ಮಾನಸಿಕ ಮತ್ತು ದೈಹಿಕ ತೊಂದರೆಗಳು ಉಂಟಾಗಬಹುದು.


ಧನು ರಾಶಿ: ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಗುರುವು 4ನೇ ಮನೆಯಲ್ಲಿ ಉದಯಿಸುತ್ತಾನೆ. ಈ ಪರಿಸ್ಥಿತಿಯು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿ ಖರೀದಿಸಬಹುದು. ಪೂರ್ವಿಕರ ಆಸ್ತಿಯೂ ಸಂಪಾದನೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಉದ್ಯಮಿಗಳು ಆರ್ಥಿಕ ಲಾಭ ಪಡೆಯುತ್ತಾರೆ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗಸ್ಥರು ಪ್ರಗತಿ ಹೊಂದುವರು. ತಾಯಿಯ ಆರೋಗ್ಯ ಸುಧಾರಿಸಲಿದೆ.


ಇದನ್ನೂ ಓದಿ: Palmistry: ಕೈಯಲ್ಲಿ ‘ವಿಷ್ಣು ರೇಖೆ’ ಹೊಂದಿರುವವರು ತುಂಬಾ ಅದೃಷ್ಟವಂತರು!


ಕುಂಭ ರಾಶಿ: ಕುಂಭ ರಾಶಿಯವರಿಗೆ ಗುರುವಿನ ಉದಯವೂ ಫಲಕಾರಿಯಾಗಲಿದೆ. ಏಕೆಂದರೆ ಈ ರಾಶಿಯವರಿಗೆ ಗುರು ಗ್ರಹವು ಮಾತಿನಲ್ಲಿ ಮತ್ತು ಸಂಪತ್ತಿನಲ್ಲಿ ಮೇಲೇರುತ್ತದೆ. ನೀವು ಹಠಾತ್ ಹಣವನ್ನು ಪಡೆಯಬಹುದು. ಹಣಕಾಸಿನ ಪ್ರಯೋಜನಗಳ ಹೊರತಾಗಿ, ನೀವು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಭಾಷಣದಿಂದ ಜನರು ಪ್ರಭಾವಿತರಾಗುತ್ತಾರೆ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಸಹ ಹಿಂತಿರುಗಿಸಬಹುದು. 


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.