ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕೂದಲು ಉದುರುವುದು ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಜನರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾರೆ ಆದರೆ ಯಾವುದೇ ವಿಶೇಷ ಫಲಿತಾಂಶ ಕಂಡುಬರುವುದಿಲ್ಲ. ಕೂದಲು ಉದುರಲು ಹಲವು ಕಾರಣಗಳಿರಬಹುದು. ಕಳಪೆ ಆಹಾರ ಪದ್ಧತಿ, ವ್ಯಾಯಾಮ ಮಾಡದೆ ಇರುವುದು, ತಡರಾತ್ರಿಯವರೆಗೆ ಎಚ್ಚರದಿಂದ ಇರುವುದು, ಅತಿಯಾದ ಒತ್ತಡ ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದರೆ ಆಯುರ್ವೇದದಲ್ಲಿ ಕೂದಲು ಉದುರುವಿಕೆಯನ್ನು ನಿಲ್ಲಿಸಬಹುದಾದ ಹಲವಾರು ಗಿಡಮೂಲಿಕೆಗಳಿವೆ. ಆಯುರ್ವೇದ ತಜ್ಞೆ ಡಾ.ದೀಕ್ಷಾ ಭಾವಸರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಕೂದಲು ಉದುರುವಿಕೆಯನ್ನು ತಡೆಯುವ ಆಯುರ್ವೇದಿಕ್ ಟೀ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೂದಲು ಉದುರುವಿಕೆಯ ಪ್ರಮಾಣವನ್ನು ಲೆಕ್ಕಿಸದೆ ಎಲ್ಲಾ ಸಂದರ್ಭಗಳಲ್ಲಿ ಈ ಆಯುರ್ವೇದ ಚಹಾವು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.(Lifestyle News In Kannada)


COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆ ತಡೆಗಟ್ಟಲು ಆಯುರ್ವೇದ ಚಹಾ
ಪ್ರತಿದಿನ ಹಾಲಿನ ಚಹಾವನ್ನು ಕುಡಿಯುವುದರಿಂದ ನಿಮಗೆ ಹಾನಿಯಾಗಬಹುದು, ಆದರೆ ಗಿಡಮೂಲಿಕೆ ಚಹಾವು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹರ್ಬಲ್ ಟೀ ರುಚಿಯ ಜೊತೆಗೆ ಆರೋಗ್ಯವನ್ನೂ ನೀಡುತ್ತದೆ. ಕೂದಲು ಉದುರುವುದನ್ನು ತಡೆಯಲು ಡಾ. ದೀಕ್ಷಾ ಭಾವಸರ್ ಅವರು ಕುಡಿಯಲು ಸಲಹೆ ನೀಡಿದ ಗಿಡಮೂಲಿಕೆ ಚಹಾವನ್ನು ತಯಾರಿಸುವುದು ತುಂಬಾ ಸುಲಭ ಮತ್ತು ನೀವು ಅದನ್ನು ಮನೆಯಲ್ಲಿಯೇ ತಯಾರಿಸಬಹುದು.


 ಈ ಆಯುರ್ವೇದ ಚಹಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
>> ಒಂದು ಲೋಟ ನೀರು
>> 10 ಒಣಗಿದ ತಾಜಾ ನುಗ್ಗೆಗಿಡದ ಎಲೆಗಳು
>> 10 ಒಣಗಿದ ತಾಜಾ ದಾಸವಾಳದ ದಳಗಳು
>> 10 ರಿಂದ 15 ಒಣಗಿದ ತಾಜಾ ಗುಲಾಬಿ ದಳಗಳು
>> 10 ಕರಿಬೇವಿನ ಎಲೆಗಳು


ಈ ಆಯುರ್ವೇದ ಚಹಾ ತಯಾರಿಸುವುದು ಹೇಗೆ?
ಆಯುರ್ವೇದ ಚಹಾವನ್ನು ತಯಾರಿಸಲು, ಎಲೆಗಳ ಮಿಶ್ರಣವನ್ನು ನೀರಿನಲ್ಲಿ 5 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ನೀವು ಈ ಚಹಾವನ್ನು ಸಾಮಾನ್ಯ ಚಹಾದೊಂದಿಗೆ ಬದಲಾಯಿಸಬಹುದು. ಏಕೆಂದರೆ ಹಾಲಿನ ಚಹಾ ನಿಮ್ಮ ಕೂದಲು ಉದುರುವಿಕೆಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.


ಚಹಾದಲ್ಲಿರುವ ಔಷಧಿಗಳ ಪ್ರಹೊಜನಗಳು
1. ನುಗ್ಗೆಸೊಪ್ಪು

ನುಗ್ಗೆಸೊಪ್ಪು  ಗುಣಧರ್ಮದಲ್ಲಿ ಬಿಸಿಯಾಗಿರುತ್ತದೆ ಮತ್ತು ಕಫ ಹಾಗೂ ವಾತವನ್ನು ಸಮತೋಲನಗೊಳಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣ, ಬಿ ವಿಟಮಿನ್, ಫೋಲೇಟ್, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಸತು ಹೇರಳ ಪ್ರಮಾಣದಲ್ಲಿರುತ್ತವೆ, ಇವು ಕೂದಲಿನ ಬೆಳವಣಿಗೆ ಮತ್ತು ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


2. ದಾಸವಾಳ
ದಾಸವಾಳವು ಗುಣಧರ್ಮದಲ್ಲಿ ತಂಪಾಗುತ್ತದೆ ಮತ್ತು ಕಫ ಹಾಗೂ ಪಿತ್ತವನ್ನು ಅದು ಸಮತೋಲನಗೊಳಿಸುತ್ತದೆ. ಇದನ್ನು ಆಯುರ್ವೇದದಲ್ಲಿ ಕೇಶ್ಯ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದು ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು, ಅಮೈನೋ ಆಮ್ಲಗಳು, ಲೋಳೆಯ ನಾರು, ತೇವಾಂಶ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳ ಪ್ರಮಾಣದಲ್ಲಿವೆ. ದಾಸವಾಳವು ನಿಮ್ಮ ಕೂದಲನ್ನು ಪೋಷಿಸುತ್ತದೆ.


3. ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳು ತಂಪು ಮತ್ತು ಸೌಮ್ಯ ಗುಣಧರ್ಮ ಹೊಂದಿವೆ. ಇವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಇದಲ್ಲದೆ ಬಿಳಿಕೂದಲು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತಾರೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಹಾರ್ಮೋನುಗಳನ್ನು ಸಹ ಸಮತೋಲನಗೊಳಿಸುತ್ತದೆ. ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ನೆತ್ತಿಯನ್ನು ತೇವಗೊಳಿಸಲು ಮತ್ತು ಸತ್ತ ಕೂದಲಿನ ಕಿರುಚೀಲಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-ಯುವಾವಸ್ಥೆಯಲ್ಲಿ ಬಿಳಿ ಕೂದಲು ಸಮಸ್ಯೆಗೆ ಗುರಿಯಾಗಿದ್ದೀರಾ? ಕೂದಲು ಕಪ್ಪಾಗಿಸಲು ಈ ಆಯುರ್ವೇದ ಎಣ್ಣೆ ಬಳಸಿ ನೋಡಿ!


4. ಗುಲಾಬಿ
ಇದು ಪಿತ್ತವನ್ನು ಶಾಂತಗೊಳಿಸಲು ಮತ್ತು ಸಮತೋಲನಗೊಳಿಸಲು ಬಳಸಲಾಗುವ ತ್ರಿದೋಶಿ ಹೂವು ಅಥವಾ ಮೂಲಿಕೆಯಾಗಿದೆ. ಇದು ಸೌಮ್ಯವಾದ ಸಂಕೋಚಕ ಮತ್ತು ಹೆಚ್ಚುವರಿ ಎಣ್ಣೆ ಹಾಗೂ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉರಿಯೂತ ನಿವಾರಕವಾಗಿದೆ ಆದ್ದರಿಂದ ಸೋರಿಯಾಸಿಸ್ ಮತ್ತು ಎಸ್ಜಿಮಾದಿಂದ ಕೂದಲು ಉದುರುವ ಸಂದರ್ಭದಲ್ಲಿ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ... ಇಲ್ದಿದ್ರೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.