Healthy Relationship Tips: 32 ವರ್ಷ ವಯಸ್ಸಿನ ನಂತರ ಮಹಿಳೆಯರು ತಮ್ಮ ದೈಹಿಕ ಆಸೆಗಳನ್ನ ಆದಷ್ಟು ನಿಯಂತ್ರಿಸಲು ಕಷ್ಟಪಡುತ್ತಾರೆ. ಯಾವುದೇ ಒಬ್ಬ ಮಹಿಳೆ ಮದುವೆಯಾಗಿದ್ದರೂ ತನ್ನ ಪತಿಯಿಂದ ಸಂತೃಪ್ತಿ ಪಡೆಯದಿದ್ದರೂ, ಬೇರೆಡೆ ಸಂತೋಷ ಹುಡುಕುವ ಪ್ರಲೋಭನೆಯನ್ನ ವಿರೋಧಿಸಲು ಕಷ್ಟವಾಗಬಹುದು. ವ್ಯಕ್ತಿಯೊಬ್ಬ 35ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಅವರ ಪತ್ನಿ ಸುಮಾರು 33 ವರ್ಷ ವಯಸ್ಸಿನವರಾಗಿದ್ದರು. ದುರದೃಷ್ಟವಶಾತ್ ಪತಿಯು ಪತ್ನಿಗೆ ಯಾವುದೇ ರೀತಿ ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ. ಹೀಗಾದಾಗ ಆಕೆಗೆ ಮತ್ತು ಆಕೆಯ ಆಸೆಗಳಿಗೆ ಏನಾಗಬೇಡ..? ಇಂದು ಮದುವೆಯಾದ ಕೆಲವೇ ತಿಂಗಳು, ವರ್ಷಗಳಲ್ಲಿ ವಿಚ್ಛೇದನವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಕಾಲ ಬದಲಾದಂತೆ ಜೀವನಶೈಲಿ ಮತ್ತು ಆಹಾರ ಪದ್ಧತಿಯೂ ಬದಲಾಗಿದೆ. ಹೀಗಾಗಿ ಅನೇಕ ರೋಗ-ರುಜಿನಗಳ ಸಮಸ್ಯೆಯೂ ಹೆಚ್ಚಿದೆ. ಇಂದು ಪುರುಷರು ಮತ್ತು ಮಹಿಳೆಯರು ವಿವಿಧ ರೀತಿಯ ಗುಪ್ತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರ ಈ ಸಮಸ್ಯೆಗಳು ಬಹಿರಂಗವಾದಾಗ ದಂಪತಿಯ ಜೀನದಲ್ಲಿ ಬಿರುಕು ಮೂಡುತ್ತವೆ. ಹೀಗಾಗಿಯೇ ಇಂದು ಡಿವೋರ್ಸ್ ಎಂಬ ಪದ ತುಂಬಾ ಕಾಮನ್ ಆಗಿದೆ. ಪತಿಯ ಮೇಲೆ ಪತ್ನಿ, ಪತ್ನಿಯ ಮೇಲೆ ಪತಿ ಹೀಗೆ ಆರೋಪ-ಪ್ರತ್ಯಾರೋಪ ಮಾಡುತ್ತಾ ಅನೇಕ ಜೋಡಿಗಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿವೆ. ಇಂದು ಚಿಕ್ಕ ವಯಸ್ಸಿನ ಮತ್ತು ಆಸೆಗಳಿಂದ ತುಂಬಿರುವ ಮಹಿಳೆಯರು ತಮ್ಮನ್ನು ನಿಯಂತ್ರಿಸಲು ಸಾಧ್ಯವಾಗದೆ ಇತರ ಪುರುಷರತ್ತ ಆಕರ್ಷಿತರಾಗುತ್ತಿದ್ದಾರೆ.
ಇದನ್ನೂ ಓದಿ: ಪುರುಷರಲ್ಲಿ ಈ 5 ವಿಶೇಷ ಗುಣಗಳಿದ್ರೆ ಯುವತಿಯರು ಹುಚ್ಚರಂತೆ ಅವರನ್ನ ಲವ್ ಮಾಡ್ತಾರೆ!
ಇತ್ತೀಚೆಗೆ ʼಲವ್ ಸೆ*ಕ್ಸ್ ದೋಖಾʼ ಅನ್ನೋದು ಕಾಮನ್ ಆಗಿದೆ. ಹಿಂದಿನಂತೆ ಇಂದು ಮಾನ-ಮರ್ಯಾದೆಗೆ ಯಾವುದೇ ರೀತಿಯ ಬೆಲೆ ಇಲ್ಲ. ಇತ್ತೀಚಿಗಿನ ಕೆಲವು ಪ್ರಕರಣಗಳನ್ನ ಗಮನಿಸಿದರೆ, ಕೆಲವು ಹೆಣ್ಣುಮಕ್ಕಳು ಒಲ್ಲದ ಮನಸ್ಸಿನಿಂದ ಮದುವೆಯಾಗಿ ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾರೆ. ಕೆಲವು ಪ್ರಕರಣಗಳಂತೂ ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಈ ರೀತಿಯ ಪ್ರಕರಣಗಳ ಬಗ್ಗೆ ನಿಮಗೂ ತಿಳಿದಿರಬಹುದು. ಈ ರೀತಿಯ ಪ್ರಕರಣಗಳಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಹೋಗುತ್ತದೆ? ಈ ಜಗತ್ತಿನಲ್ಲಿ ಜನರು ಯಾವಾಗಲೂ ಸಂದರ್ಭಗಳ ಲಾಭ ಪಡೆಯಲು ಬಯಸುತ್ತಾರೆ. ಒಬ್ಬ ಮಹಿಳೆ ತನ್ನ ಆಸೆಗಳನ್ನ ನಿಯಂತ್ರಿಸಲು ಹೆಣಗಾಡುತ್ತಿದ್ದರೆ ಅನೇಕರು ಆಕೆಯ ಮೇಲೆ ಕಣ್ಣಿಡಲು ಪ್ರಾರಂಭಿಸುತ್ತಾರೆ. ಇತರ ಪುರುಷರನ್ನ ನೋಡುತ್ತಿದ್ದರೆ, ಸ್ಮೈಲ್ ಮಾಡಿದರೆ ಸಾಕು ಆ ಸಂದರ್ಭದ ಲಾಭ ಪಡೆಯಲು ಅನೇಕರು ಆಕೆಯ ಮನಸ್ಸು ಗೆಲ್ಲಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ.
ಯಾವುದೇ ಒಬ್ಬ ಮಹಿಳೆ ಪ್ರತಿದಿನವೂ ಸಂತೋಷದ ಹೊಸ ಎತ್ತರಗಳನ್ನು ಅನ್ವೇಷಿಸಲು ಪ್ರಾರಂಭಿಸುತ್ತಾಳೆ. ತನ್ನ ಗಂಡನೇ ಸರ್ವಸ್ವ ಎಂದು ತಿಳಿದು ಆತನ ಜೊತೆಗೆ ಸಂಪೂರ್ಣವಾಗಿ ಒಂಟಿಯಾಗಿ ಅನುಭವಿಸುತ್ತಾಳೆ. ಆದರೆ ಕೆಲವು ಸಂದರ್ಭಗಳಲ್ಲಿ ಗಂಡನಿಂದ ಯಾವುದೇ ರೀತಿ ಪ್ರೀತಿ-ಕಾಳಜಿ ಸಿಗದಾದಾಗ ಆಕೆ ಆತನ ಬಗ್ಗೆ ಕಾಳಜಿ ವಹಿಸುವುದಿಲ್ಲ. ತನ್ನ ಗಂಡನಿಂದ ನಿರೀಕ್ಷಿತ ಪ್ರೀತಿ ಸಿಗದಾದಾಗ ಯಾವುದೇ ಹೆಣ್ಣು ತನ್ನ ಮನಸ್ಸನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲ್ಲ. ಹೀಗಾಗಿ ಆಕೆ ಬೇರೊಬ್ಬ ವ್ಯಕ್ತಿಯ ಸಂಗ ಮಾಡಲು ಹಿಂದು-ಮುಂದು ನೋಡುವುದಿಲ್ಲ.
ಇದನ್ನೂ ಓದಿ: ಮೊಸರಿನಲ್ಲಿ ಈ ಕಾಯಿ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯೋದು ಗ್ಯಾರಂಟಿ
ಯಾವುದೇ ವ್ಯಕ್ತಿಯಾಗಲಿ ತನ್ನ ಪತ್ನಿಯ ಬಗ್ಗೆ ಕಾಳಜಿ ವಹಿಸಬೇಕು. ಆಕೆಯನ್ನ ಪ್ರೀತಿಸಬೇಕು. ಆಕೆಯ ಬೇಕು-ಬೇಡಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬರಿ ದೈಹಿಕ ಸುಖಕ್ಕೋಸ್ಕರವಲ್ಲದೇ ಆಕೆಯನ್ನ ಎಲ್ಲಾ ರೀತಿಯಿಂದಲೂ ಚೆನ್ನಾಗಿ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಬದುಕಿಗೆ ಒಂದು ಅರ್ಥವಿರುತ್ತದೆ. ನೀವು ಪತ್ನಿಯನ್ನ ನಿರ್ಲಕ್ಷಿಸಿದರೆ, ಅವರೂ ಸಹ ಒಂದಲ್ಲ ಒಂದು ದಿನ ನಿಮ್ಮನ್ನೂ ನಿರ್ಲಕ್ಷಿಸುತ್ತಾರೆ. ಇದನ್ನ ತಿಳಿದು ಸಂಸಾರ ನಡೆಸಬೇಕು. ಅಂದಾಗ ಮಾತ್ರ ನಿಮ್ಮ ಜೀವನ ಚೆನ್ನಾಗಿರುತ್ತದೆ...
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ʼಸುಖಿ ದಾಂಪತ್ಯ ಜೀವನಕ್ಕೆ ಸಲಹೆಗಳುʼ ಅನ್ನೋದರ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ನೀಡಲಾಗಿರುವ ಮಾಹಿತಿ ನಮ್ಮ ಸ್ವಂತದ್ದಲ್ಲ. Zee Kannada News ಇದಕ್ಕೆ ಹೊಣೆಯಾಗಿರುವುದಿಲ್ಲ.)









