Health Tips: ಚಳಿಗಾಲದಲ್ಲಿ ಕಾಡುವ ಹಿಮ್ಮಡಿ ನೋವಿಗೆ ಸರಳ ಮನೆಮದ್ದು
Home Remedies For Heel Pain: ಅರಿಶಿನವು ಔಷಧೀಯ ಗುಣಗಳಿಂದ ಕೂಡಿದೆ. ಇದರಲ್ಲಿ ಹಲವು ರೀತಿಯ ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಪಾದದ ನೋವು ದೂರವಾಗಬೇಕೆಂದರೆ ಎಣ್ಣೆಗೆ ಅರಿಶಿನ ಸೇರಿಸಿ ಪಾದದ ಮೇಲೆ ಲೇಪಿಸಬೇಕು.
ಹಿಮ್ಮಡಿ ನೋವಿಗೆ ಉತ್ತಮ ಔಷಧಿ: ಚಳಿಗಾಲದಲ್ಲಿ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳ ಪೈಕಿ ಹಿಮ್ಮಡಿ ನೊವು ಒಂದು. ಇದರಿಂದ ನೀವು ತೊಂದರೆಗೀಡಾಗಿದ್ದರೆ ಅದನ್ನು ಸರಿಪಡಿಸುವ ವಿಧಾನವನ್ನು ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ಇದರಿಂದ ನಿಮ್ಮ ಪಾದದ ನೋವು ತುಂಬಾ ಸುಲಭವಾಗಿ ದೂರವಾಗುತ್ತದೆ. ಹೆಚ್ಚಾಗಿ ಈ ನೋವು ಬೆಳಗ್ಗೆ ಸಂಭವಿಸುತ್ತದೆ ಎಂದು ಜನರು ದೂರುತ್ತಾರೆ. ಹವಾಮಾನ ಬದಲಾವಣೆಯ ಸಮಯದಲ್ಲಿ ನೀವು ಹೆಚ್ಚು ಕಾಳಜಿ ವಹಿಸಬೇಕು. ಈ ಮನೆಮದ್ದಿನಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು.
ಅರಿಶಿನ ಪರಿಹಾರ ನೀಡುತ್ತದೆ
ಅರಿಶಿನವು ಔಷಧೀಯ ಗುಣಗಳಿಂದ ಕೂಡಿದೆ. ಇದರಲ್ಲಿ ಹಲವು ರೀತಿಯ ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಪಾದದ ನೋವು ದೂರವಾಗಬೇಕೆಂದರೆ ಎಣ್ಣೆಗೆ ಅರಿಶಿನ ಸೇರಿಸಿ ಪಾದದ ಮೇಲೆ ಲೇಪಿಸಿ. ಇದಲ್ಲದೇ ಬೇಕಿದ್ದರೆ ಅದರಲ್ಲಿ ಬೆಲ್ಲವನ್ನೂ ಬಳಸಬಹುದು. ಈ ಪೇಸ್ಟ್ ಅನ್ನು ಪಾದದ ಮೇಲೆ ಹಚ್ಚುವುದರಿಂದ ನೋವು ಗಣನೀಯವಾಗಿ ಕಡಿಮೆಯಾಗುತ್ತದೆ.
ಇದನ್ನೂ ಓದಿ: Health Tips : ಉತ್ತಮ ಆರೋಗ್ಯಕ್ಕಾಗಿ ದಾಳಿಂಬೆ ಜ್ಯೂಸ್....!
ಚಳಿಗಾಲದಲ್ಲಿ moisturize
ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಈ ಕಾರಣದಿಂದ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರ ಬೇಕೆಂದರೆ ನೀವು ಕಾಲುಗಳನ್ನು moisturize ಮಾಡಬೇಕು. ಇದರಿಂದ ಕಾಲುಗಳು ಮೃದುವಾಗುತ್ತದೆ ಮತ್ತು ನೋವು ಸಹ ಕಡಿಮೆಯಾಗುತ್ತದೆ. ರಾತ್ರಿ ವೇಳೆ ನೀವು ಕಾಲುಗಳನ್ನು moisturize ಮಾಡಬೇಕು.
ಬಿಸಿ ನೀರನ್ನು ಬಳಸಿ
ನಿಮ್ಮ ಹಿಮ್ಮಡಿಯ ನೋವಿಗೆ ಪರಿಹಾರ ಬೇಕಾದರೆ ಪ್ರತಿದಿನ ನೀವೂ ಈ ಅಭ್ಯಾಸ ರೂಡಿಸಿಕೊಳ್ಳಿರಿ. ಹಿಮ್ಮಡಿ ನೋವನ್ನು ತೊಡೆದುಹಾಕಲು ಇದು ಉತ್ತಮ ಆಯ್ಕೆಯಾಗಿದೆ. ಹಿಮ್ಮಡಿಯಲ್ಲಿ ಊತ ಇದ್ದರೆ ಅದು ಕೂಡ ಇದರಿಂದ ದೂರ ಹೋಗುತ್ತದೆ. ಚಳಿಗಾಲದಲ್ಲಿ ಕಂಡುಬರುವ ಹಿಮ್ಮಡಿ ನೋವಿಗೆ ಈ ಮನೆಮದ್ದು ಬಹಳ ಪರಿಣಾಮಕಾರಿ. ಇದಕ್ಕಾಗಿ ನೀವು ಕಾಲಿಗೆ ಬಿಸಿ ನೀರನ್ನು ಬಳಸಬೇಕು. ಹೀಗೆ ಮಾಡುವುದರಿಂದ ಬೇಗ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: Health Tips: ಈ 5 ತರಕಾರಿಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತವೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.