)
ಕ್ಲೌಡ್ ಕಿಚನ್ (Cloud Kitchen) ಅನ್ನು "ವರ್ಚುವಲ್ ಕಿಚನ್" ಅಥವಾ "ಘೋಸ್ಟ್ ಕಿಚನ್" ಎಂದೂ ಕರೆಯಲಾಗುತ್ತದೆ. ಇದು ಹೋಟೆಲ್ ಅಥವಾ ರೆಸ್ಟೊರೆಂಟ್ಗಳಂತೆ ಗ್ರಾಹಕರು ಬಂದು ಊಟ ಮಾಡುವ ಸ್ಥಳವಲ್ಲ. ಇಲ್ಲಿ ಅಡುಗೆ ಮನೆಯಷ್ಟೇ ಇರುತ್ತದೆ, ಗ್ರಾಹಕರಿಗೆ ಊಟವನ್ನು ನೇರವಾಗಿ ಆನ್ಲೈನ್ ಫುಡ್ ಡೆಲಿವರಿ ಆ್ಯಪ್ಗಳ ಮೂಲಕ ಮಾತ್ರ ತಲುಪಿಸಲಾಗುತ್ತದೆ.
ರುಚಿಕರವಾಗಿ ಅಡುಗೆ ಮಾಡಲು ಬರುವವರು ಈ ಕ್ಲೌಡ್ ಕಿಚನ್ ಬ್ಯುಸಿನೆಸ್ ಶುರುಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುವವರಿಗೆ ಅಥವಾ ಬ್ಯಾಚುಲರ್ಸ್ಗಳಿಗೆ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಇಂತಹ ಜನರಿಗೆ ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ ತಯಾರಿಸುವವರ ಅವಶ್ಯಕತೆ ಹೆಚ್ಚಿರುತ್ತದೆ. ಈ ರೀತಿಯ ಬೇಡಿಕೆಯ ಜನರು ಹೊರಗಿನ ಆಹಾರದ ಮೇಲೆ ಅವಲಂಬಿತರಾಗಿರುತ್ತಾರೆ. ಆದ್ದರಿಂದ ನೀವೆನಾದರು ಕ್ಲೌಡ್ಕಿಚನ್ ಶುರು ಮಾಡಿದರೆ ಈ ರೀತಿಯ ಜನರೇ ನಿಮ್ಮ ಬ್ಯುಸಿನೆಸ್ಗೆ ಗ್ರಾಹಕರಾಗುತ್ತಾರೆ ಮತ್ತು ಕ್ರಮೇಣವಾಗಿ ನೀವು ಇದರಿಂದ ಹೆಚ್ಚಿನ ಲಾಭ ಗಳಿಸಬಹುದು.
ಸದ್ಯಕ್ಕೆ ಕ್ಲೌಡ್ಕಿಚನ್ ಸ್ವಯಂ ಉದ್ಯೋಗವು ಈಗ ಸಾಕಷ್ಟು ಟ್ರೆಂಡಿಂಗ್ನಲ್ಲಿದೆ. ಕಡಿಮೆ ಹೂಡಿಕೆಯೊಂದಿಗೆ ಮತ್ತು ಆಹಾರ ವಿತರಣಾ ಅಪ್ಲಿಕೇಶನ್ಗಳ ಸಹಾಯದಿಂದ ನೀವು ಮನೆಯಿಂದಲೇ ಈ ಬ್ಯಸಿನೆಸ್ ಪ್ರಾರಂಭಿಸಬಹುದು.ಇಂಟರ್ನೆಟ್ ಸಹಾಯದಿಂದ ಈಗ ಮನೆಯಲ್ಲಿ ಬೇಯಿಸಿದ ರುಚಿಕರವಾದ ಊಟಗಳು ಲಕ್ಷಾಂತರ ಜನರನ್ನು ತಲುಪಬಹುದು.
ಈ ಬ್ಯುಸಿನೆಸ್ ಶುರುಮಾಡಲು ಮೊದಲಿಗೆ ನೀವು ಸರಿಯಾದ ಸ್ಥಳವನ್ನು ಆರಿಸಿಕೊಳ್ಳಬೇಕು.ಭಾರತದ ನಗರ ಪ್ರದೇಶಗಳಲ್ಲಿ ಈ ಬ್ಯುಸಿನೆಸ್ಗೆ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ನಗರ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಂದು ಮದ್ಯಮ ವರ್ಗದ ಕುಟುಂಬವೂ ಈ ಉದ್ಯೋಗದ ಲಾಭ ಪಡೆದುಕೊಳ್ಳಬಹುದು. ಏಕೆಂದರೆ ಕ್ಲೌಡ್ ಕಿಚನ್ ಶುರು ಮಾಡಲು ಹೆಚ್ಚಿನ ಹೂಡಿಕೆ ಬೇಕಿಲ್ಲ. ನೀವು ನಿಮ್ಮ ಮನೆಯಿಂದಲೇ ಈ ಕೆಲಸವನ್ನು ಶುರುಮಾಡಬಹುದು. ಇದಕ್ಕೆ ಸುಮಾರು 400 ರಿಂದ 1000 ಚದರ ಅಡಿ ವಿಸ್ತೀರ್ಣದ ಅಡುಗೆ ಮನೆಯ ಜಾಗ ಸಾಕು. ಆದರೆ ಮೊದಲಿಗೆ ನೀವು ಯಾವ ಪ್ರದೇಶಗಳಿಂದ ಹೆಚ್ಚು ಆರ್ಡರ್ಗಳನ್ನು ಪಡೆಯಬಹುದು ಎಂಬುದನ್ನು ಆದರಿಸಿ ಆ ಪ್ರದೇಶದ ಬಳಿ ಕ್ಲೌಡ್ ಕಿಚನ್ ಅನ್ನು ಶುರುಮಾಡಬಹುದು. ಇದರಿಂದ ನೀವು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು.