ವ್ಯಾಯಾಮವಿಲ್ಲದೆ ತೂಕ ಕಳೆದುಕೊಳ್ಳಬೇಕೆ? ಬೆಳ್ಳುಳ್ಳಿಯನ್ನು ಇದರ ಜೊತೆ ತಿಂದರೆ ಮೊಂಡುತನದ ಬೊಜ್ಜು ಕರಗಿ ಬೇಗ ಸಣ್ಣಗಾಗ್ತೀರಿ

food.ndtv.com ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಕಡಿಮೆಯಾಗುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

Written by - Bhavishya Shetty | Last Updated : Aug 2, 2025, 12:59 PM IST
    • ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿಯನ್ನು ಒಟ್ಟಿಗೆ ತಿನ್ನುವುದು
    • ಇದರ ಸಂಯೋಜನೆಯು ತೂಕ ಇಳಿಸುವಲ್ಲಿ ಬಹಳ ಪ್ರಯೋಜನಕಾರಿ
    • ತೂಕ ಇಳಿಸಿಕೊಳ್ಳಲು ಇದು ಸುರಕ್ಷಿತ ಮತ್ತು ಆರೋಗ್ಯಕರ ಮನೆಮದ್ದಾಗಿದೆ
ವ್ಯಾಯಾಮವಿಲ್ಲದೆ ತೂಕ ಕಳೆದುಕೊಳ್ಳಬೇಕೆ? ಬೆಳ್ಳುಳ್ಳಿಯನ್ನು ಇದರ ಜೊತೆ ತಿಂದರೆ ಮೊಂಡುತನದ ಬೊಜ್ಜು ಕರಗಿ ಬೇಗ ಸಣ್ಣಗಾಗ್ತೀರಿ

Garlic and Honey for Weight Loss: ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಒಂದು ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿಯನ್ನು ಒಟ್ಟಿಗೆ ತಿನ್ನುವುದು. ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಸಂಯೋಜನೆಯು ತೂಕ ಇಳಿಸುವಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೂಕ ಇಳಿಸುವುದು ಸುಲಭದ ಕೆಲಸವಲ್ಲದಿದ್ದರೂ, ಅದಕ್ಕಾಗಿ ಶ್ರಮಿಸಬೇಕು. 

Add Zee News as a Preferred Source

ಅಧಿಕ ತೂಕ ಹೊಂದಿರುವ ಜನರು ಅನೇಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಸಾಧ್ಯವಾದಷ್ಟು ಬೇಗ ಸ್ಲಿಮ್ ಆಗಲು ಬಯಸುತ್ತಾರೆ. ಇದಕ್ಕಾಗಿ, ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರನ್ನು ಕುಡಿಯುತ್ತಾರೆ, ಇನ್ನೂ ಕೆಲವರು ಡಯೆಟ್‌ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಿರುವಾಗ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ದಿನಗಳವರೆಗೆ ಜೇನುತುಪ್ಪ ಮತ್ತು ಹಸಿ ಬೆಳ್ಳುಳ್ಳಿಯ ಮಿಶ್ರಣವನ್ನು ನಿಯಮಿತವಾಗಿ ಸೇವಿಸಿ. ತೂಕ ಇಳಿಸಿಕೊಳ್ಳಲು ಇದು ಸುರಕ್ಷಿತ ಮತ್ತು ಆರೋಗ್ಯಕರ ಮನೆಮದ್ದಾಗಿದೆ. 

ಇದನ್ನೂ ಓದಿ: ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಗೊತ್ತಾ? ಕೇವಲ ಒಂದು ಕೆಜಿಗಿರುವ ಬೆಲೆ ಬರೋಬ್ಬರಿ 22 ಲಕ್ಷ... ಚಿನ್ನ, ವಜ್ರ, ರಕ್ತಚಂದನಕ್ಕಿಂತಲೂ ಕಾಸ್ಟ್ಲಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ತಿನ್ನುತ್ತಾರೆ. ಇದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ದೇಹವು ನಿರ್ವಿಷಗೊಳ್ಳುತ್ತದೆ. ಇದು ಮಾತ್ರವಲ್ಲದೆ, ಬೆಳ್ಳುಳ್ಳಿ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ತಿನ್ನುವುದರಿಂದಾಗುವ ಪ್ರಯೋಜನಗಳು ಏನು ಎಂಬುದನ್ನು ನೋಡೋಣ.

food.ndtv.com ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಒಟ್ಟಿಗೆ ತಿನ್ನುವುದರಿಂದ ತೂಕ ಕಡಿಮೆಯಾಗುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರೆ, ಬೆಳ್ಳುಳ್ಳಿ ಮತ್ತು ಜೇನುತುಪ್ಪ ಸೇವಿಸುವುದರಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ಈ ಮಿಶ್ರಣವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ, ದೇಹವನ್ನು ನಿರ್ವಿಷಗೊಳಿಸುತ್ತದೆ.

ಈ ಮಿಶ್ರಣವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಈ ಆಹಾರ ಸಂಯೋಜನೆಯ ದೊಡ್ಡ ಆರೋಗ್ಯ ಪ್ರಯೋಜನವೆಂದರೆ ಅದು ಹಸಿವನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿದ್ದಾಗ, ತೂಕವೂ ವೇಗವಾಗಿ ಕಡಿಮೆಯಾಗುತ್ತದೆ. ಜೇನುತುಪ್ಪ ಮತ್ತು ಬೆಳ್ಳುಳ್ಳಿ ತೂಕ ನಷ್ಟಕ್ಕೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. 

ಬೇಯಿಸಿದ ಬೆಳ್ಳುಳ್ಳಿಗಿಂತ ಹಸಿ ಬೆಳ್ಳುಳ್ಳಿ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಹಸಿ ಬೆಳ್ಳುಳ್ಳಿಯನ್ನು ಉತ್ತಮ ತೂಕ ನಷ್ಟ ಅಂಶವನ್ನಾಗಿ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಜೇನುತುಪ್ಪವನ್ನು ಸೇವಿಸಿದರೆ, ಅದು ಕೊಬ್ಬನ್ನು ಉತ್ತಮವಾಗಿ ಚಯಾಪಚಯಗೊಳಿಸಲು ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ. ಇದರ ಸೇವನೆಯು ನಿಮಗೆ ದೀರ್ಘಕಾಲದವರೆಗೆ ಹಸಿವನ್ನುಂಟು ಮಾಡುವುದಿಲ್ಲ. ಇದು ಶಕ್ತಿಯ ಮೂಲವಾಗಿದೆ, ಇದು ಬೆಳಗಿನ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ಸಿಪ್ಪೆ ತೆಗೆದು ಅದನ್ನು ಉಪ್ಪಿನಕಾಯಿ ರೀತಿಯಲ್ಲಿ ಜೇನುತುಪ್ಪದಲ್ಲಿ ನೆನೆಸಿಡಿ. ಇದನ್ನು ಪ್ರತೀದಿನ ಬೆಳಗ್ಗೆ ಒಂದೊಂದು ಸೇವಿಸಿದರೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ದಿನದಲ್ಲಿ ಒಂದಕ್ಕಿಂತ ಹೆಚ್ಚು ಬೆಳ್ಳುಳ್ಳಿಯನ್ನು ತಿನ್ನಬೇಡಿ. ಇಲ್ಲದಿದ್ದರೆ ಜೇನುತುಪ್ಪ-ಬೆಳ್ಳುಳ್ಳಿಯ ಸಂಯೋಜನೆಯು ಕೆಲವು ಜನರಲ್ಲಿ ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಈ ಅಡ್ಡಪರಿಣಾಮಗಳಲ್ಲಿ ರಕ್ತ ತೆಳುವಾಗುವುದು, ತಲೆತಿರುಗುವಿಕೆ, ವಾಂತಿ, ಅತಿಯಾದ ಬೆವರುವುದು, ದುರ್ಬಲ ಭಾವನೆ, ಚರ್ಮದ ಅಲರ್ಜಿ, ಅನಿಯಮಿತ ಹೃದಯ ಬಡಿತ ಇತ್ಯಾದಿ ಸೇರಿವೆ.

ಇದನ್ನೂ ಓದಿ: ರೈಲ್ವೆ ಇಲಾಖೆಯ ಮಹತ್ವದ ನಿರ್ಧಾರ : ಹಿರಿಯ ನಾಗರಿಕರ ಟಿಕೆಟ್ ಮೇಲಿನ  ರಿಯಾಯಿತಿ ಪುನರಾರಂಭ 

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee Kannada News  ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News