Horoscope 31 August 2022: ಆಗಸ್ಟ್ 31 ರಂದು ಈ ರಾಶಿಗಳ ಜಾತಕದವರ ಮೇಲಿರಲಿದೆ ಗಣೇಶನ ವಿಶೇಷ ಕೃಪಾವೃಷ್ಟಿ
Horoscope August 31: ನಾಳೆ ಆಗಸ್ಟ್ 31 ದೇಶಾದ್ಯಂತ ವಿಜೃಂಭಣೆಯಿಂದ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ನಾಳಿನ ದಿನ ಯಾವ ಯಾವ ರಾಶಿಗಳ ಜಾತಕದವರ ಪಾಲಿಗೆ ಹೇಗಿರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
Horoscope August 31: ನಾಳೆ ಆಗಸ್ಟ್ 31 ದೇಶಾದ್ಯಂತ ವಿಜೃಂಭಣೆಯಿಂದ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ನಾಳಿನ ದಿನ ಯಾವ ಯಾವ ರಾಶಿಗಳ ಜಾತಕದವರ ಪಾಲಿಗೆ ಹೇಗಿರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ - ಅಜ್ಞಾತ ಭಯ ಕಾಡಲಿದೆ. ಮಾತಿನಲ್ಲಿ ಹಿಡಿತವಿರಲಿ. ವ್ಯಾಪಾರದಲ್ಲಿ ಪರಿವರ್ತನೆಗೆ ಅವಕಾಶ ಇರಲಿದೆ. ಮಿತ್ರರ ಬೆಂಬಲ ಸಿಗಲಿದೆ. ಧರ್ಮದ ಪ್ರತಿ ಶ್ರದ್ಧಾಭಾವ ಇರಲಿದೆ. ಮನೆಯ ಸ್ವಚ್ಚತೆಗಾಗಿ ಹಣ ಖರ್ಚಾಗಲಿದೆ. ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ. ಸಹೋದರರ ಬೆಂಬಲ ಸಿಗಲಿದೆ. ಶೈಕ್ಷಣಿಕ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗಬಹುದು. ಖರ್ಚು ಹೆಚ್ಚಾಗಲಿದೆ. ಜೀವನೋಪಾಯ ಅಸ್ತವ್ಯಸ್ತದಿಂದ ಕೂಡಿರಲಿದೆ. ತಾಯಿಯಿಂದ ಧನಪ್ರಾಪ್ತಿಯ ಎಲ್ಲಾ ಸಂಕೇತಗಳಿವೆ.
ವೃಷಭ ರಾಶಿ - ಮನಸ್ಸು ಶಾಂತವಾಗಿರುತ್ತದೆ, ಆದರೆ ತಾಳ್ಮೆಯಿಂದಿರಲು ಪ್ರಯತ್ನಿಸಿ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ಅನಗತ್ಯ ವಾದ ವಿವಾದ ಬೇಡ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಕಠಿಣ ಪರಿಶ್ರಮ ಇರಲಿದೆ. ಕೆಲಸದ ಪರಿಸ್ಥಿತಿಗಳು ಸುಧಾರಿಸುತ್ತವೆ. ನೀವು ಸಂಗ್ರಹಿಸಿದ ಸಂಪತ್ತು ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ತಂದೆಗೆ ಆರೋಗ್ಯ ಸಮಸ್ಯೆಗಳಿರಬಹುದು. ಆದಾಯ ಸುಧಾರಿಸಲಿದೆ. ನೀವು ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ - ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ಕಟ್ಟಡ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಹೆಚ್ಚು ಓಡಾಟ ಇರಲಿದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖರ್ಚು ಹೆಚ್ಚಾಗಲಿದೆ. ಸ್ವಾವಲಂಬಿಯಾಗಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಉದ್ಯೋಗ ಬದಲಾವಣೆಯ ಸಾಧ್ಯತೆಯೂ ಇದೆ. ಆದಾಯ ಹೆಚ್ಚಲಿದೆ. ಪ್ರಯಾಣಯೋಗಗಳು ನಿರ್ಮಾಣಗೊಳ್ಳುತ್ತಿವೆ. ಆದಾಯದಲ್ಲಿ ಅಡಚಣೆಗಳು ಉಂಟಾಗಬಹುದು.
ಕರ್ಕ ರಾಶಿ - ನಿಮಗೆ ತಾಯಿಯ ಬೆಂಬಲವನ್ನು ಸಿಗಲಿದೆ. ಶೈಕ್ಷಣಿಕ ಅಥವಾ ಬೌದ್ಧಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡಲಿದೆ. ಘನತೆ-ಗೌರವ ನಿಮ್ಮದಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಕೋಪವನ್ನು ತಪ್ಪಿಸಿ. ವ್ಯಾಪಾರದಲ್ಲಿ ಪರಿಸ್ಥಿತಿಗಳನ್ನು ಸುಧಾರಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಲಿದೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷದ ಭಾವನೆ ಇರಲಿದೆ. ನೀವು ಕೆಲವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಗಲಿದೆ. ನೀವು ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಯೋಗವಿದೆ.
ಸಿಂಹ ರಾಶಿ - ಆತ್ಮವಿಶ್ವಾಸ ಇರಲಿದೆ, ಆದರೆ ಮನಸ್ಸಿನಲ್ಲಿ ಅಶಾಂತಿಯ ಭಾವನೆಯೂ ಒಂದೆಡೆ ರಲಿದೆ. ಕಟ್ಟಡ ಸುಖ ಹೆಚ್ಚಾಗಬಹುದು. ಕುಟುಂಬದಲ್ಲಿ ಗೌರವ ಹೆಚ್ಚಾಗಲಿದೆ. ಹೆಚ್ಚು ಓಡಾಟ ಸಂಭವಿಸಲಿದೆ.. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಯೋಜನೆ ಮಾಡಬಹುದು. ಖರ್ಚು ಜಾಸ್ತಿ ಇರಲಿದೆ. ಜೀವನವು ನೋವಿನಿಂದ ಕೂಡಿರಬಹುದು. ವ್ಯಾಪಾರದಲ್ಲಿ ಸಹೋದರ ಸಹೋದರಿಯರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.
ಕನ್ಯಾರಾಶಿ - ಅಧ್ಯಯನ ಹೆಚ್ಚಾಗಲಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಬೌದ್ಧಿಕ ಕೆಲಸದಿಂದ ಆದಾಯದಲ್ಲಿ ಹೆಚ್ಚಳವಾಗಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು. ಆತ್ಮವಿಶ್ವಾಸದಿಂದ ತುಂಬಿರುವಿರಿ. ಕೋಪವನ್ನು ನಿಮ್ಮ ಮೇಲೆ ನಿಯಂತ್ರಣ ಸಾಧಿಸಲು ಬಿಡಬೇಡಿ. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಗೆಳೆಯರ ಆಗಮನ. ವ್ಯಾಪಾರದಲ್ಲಿ ಬದಲಾವಣೆ ಲಾಭ ತರಲಿದೆ. ಕಠಿಣ ಪರಿಶ್ರಮವು ಲಾಭದಾಯಕವಾಗಿರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪುನಃ ಆರಂಭಗೊಳ್ಳಲಿವೆ. ಲಾಭದ ಅವಕಾಶಗಳಿವೆ.
ತುಲಾ ರಾಶಿ - ನೀವು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು. ಹೆಚ್ಚು ಓಡಾಟ ಇರಲಿದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನಸ್ಸಿನಲ್ಲಿ ಅಶಾಂತಿಯ ಭಾವನೆ ಇರಲಿದೆ. ಕುಟುಂಬದ ಬೆಂಬಲ ಸಿಗಲಿದೆ. ಕೆಲಸದ ವ್ಯಾಪ್ತಿ ವಿಸ್ತರಣೆಯ ಸಾಧ್ಯತೆಗಳಿವೆ. ಕಠಿಣ ಪರಿಶ್ರಮ ಇರಲಿದೆ. ವ್ಯವಹಾರದಲ್ಲಿ ಏನಾದರೂ ಒಳ್ಳೆಯದು ಸಂಭವಿಸಬಹುದು. ತಾಯಿಯಿಂದ ಹಣ ಸಿಗಲಿದೆ. ನೀವು ಸಹೋದರರೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಲಾಭದ ಲಕ್ಷಣಗಳು ಗೋಚರಿಸುತ್ತಿವೆ.
ವೃಶ್ಚಿಕ ರಾಶಿ - ಮನಸ್ಸು ಶಾಂತಿಯಿಂದ ಕೂಡಿರಲಿದೆ. ಆತ್ಮವಿಶ್ವಾಸವೂ ಹೆಚ್ಚಾಗಲಿದೆ, ಆದರೆ ಸಂಭಾಷಣೆಯಲ್ಲಿ ಹಿಡಿತವಿರಲಿ. ಹಳೆಯ ಸ್ನೇಹಿತನೊಂದಿಗೆ ಸಂಪರ್ಕ ಸಾಧಿರುವಿರಿ. ಹೊಸ ಉದ್ಯೋಗಾವಕಾಶದ ಲಕ್ಷಣಗಳಿವೆ. ಸಂಗಾತಿಯ ಬೆಂಬಲ ಇರಲಿದೆ. ಸ್ವಭಾವದಲ್ಲಿ ಕಿರಿಕಿರಿಯುಂಟಾಗಬಹುದು. ತಾಯಿಗೆ ಆರೋಗ್ಯ ಸಮಸ್ಯೆಗಳಿರಬಹುದು. ಕೆಲಸದ ಒತ್ತಡ ಹೆಚ್ಚಾಗಿರಲಿದೆ. ವ್ಯಾಪಾರ ಪರಿಸ್ಥಿತಿಗಳಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಲಾಭದ ಅವಕಾಶಗಳು ಹೆಚ್ಚಾಗಲಿವೆ. ದೀರ್ಘಕಾಲದಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಬಳಿ ಬರಲಿದೆ. ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.
ಧನು ರಾಶಿ - ಸಮಚಿತ್ತದಿಂದಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಪ್ರತಿಷ್ಠೆ ಹೆಚ್ಚಾಗಲಿದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ನಿಮಗೆ ಸಹೋದರ ಸಹೋದರಿಯರ ಬೆಂಬಲ ಮತ್ತು ಸಹಕಾರ ಸಿಗಲಿದೆ. ಬರವಣಿಗೆ-ಬೌದ್ಧಿಕ ಕೃತಿಗಳು ಗಳಿಕೆಯ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಆದರೆ, ಜೀವನ ಅಹಿತಕರವಾಗಿರುವ ಸಾಧ್ಯತೆ ಇದೆ. ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು. ಸ್ನೇಹಿತರ ಸಹಕಾರ ಸಿಗಲಿದೆ.
ಮಕರ ರಾಶಿ - ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ. ಸ್ವಾವಲಂಬಿಯಾಗಿರಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಆದಾಯ ಹೆಚ್ಚಲಿದೆ. ನೀವು ಕುಟುಂಬ ಸಮೇತ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಅಥವಾ ಮಂಗಳ ಕಾರ್ಯಗಳು ನಡೆಯಬಹುದು. ಕೆಲಸದ ಒತ್ತಡ ಹೆಚ್ಚಾಗಿರಲಿದೆ. ಕೋಪದ ಕ್ಷಣಗಳು ಮತ್ತು ತೃಪ್ತಿಯ ಭಾವನೆಗಳು ಇರಲಿವೆ. ವಾಹನ ಸುಖ ಪ್ರಾಪ್ತಿಯಾಗಬಹುದು. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಜೀವನ ಅಸ್ತವ್ಯಸ್ತವಾಗಲಿದೆ. ಸಂಬಂಧಗಳಲ್ಲಿ ನಿಕಟತೆ ಇರಲಿದೆ.
ಕುಂಭ ರಾಶಿ - ಮನಸ್ಸು ಚಂಚಲವಾಗಿರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯವಹಾರದಲ್ಲಿ ಎಚ್ಚರದಿಂದಿರಿ. ತೊಂದರೆಗಳು ಎದುರಾಗಬಹುದು. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ನೀವು ಬೌದ್ಧಿಕ ಅನ್ವೇಷಣೆಯಲ್ಲಿ ಪ್ರಯಾಣ ಮಾಡಬೇಕಾಗಬಹುದು. ಅನುಪಯುಕ್ತ ಕಾರ್ಯಗಳತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಕಠಿಣ ಪರಿಶ್ರಮದ ಹೊರತಾಗಿಯೂ, ಯಶಸ್ಸು ತಡವಾಗಿ ದಕ್ಕಲಿದೆ. ನೀವು ಕೆಲವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಖರ್ಚು ಜಾಸ್ತಿ ಇರಲಿದೆ. ಆಸ್ತಿಯಲ್ಲಿ ಹೂಡಿಕೆಯಿಂದ ಲಾಭದ ಸಾಧ್ಯತೆಗಳಿವೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿರುತ್ತವೆ.
ಇದನ್ನೂ ಓದಿ-Vastu Tips: ಬಾತ್ರೂಮ್ನಲ್ಲಿ ಈ ವಸ್ತುಗಳನ್ನಿಟ್ಟರೆ ಆರ್ಥಿಕ ಹಾನಿ ಕಟ್ಟಿಟ್ಟ ಬುತ್ತಿ
ಮೀನ ರಾಶಿ - ಕಲೆ ಅಥವಾ ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗಬಹುದು. ನೀವು ಶೈಕ್ಷಣಿಕ ಕೆಲಸಕ್ಕಾಗಿ ಬೇರೆ ಸ್ಥಳಕ್ಕೆ ಹೋಗಬಹುದು. ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಖರ್ಚು ಹೆಚ್ಚಾಗಲಿದೆ. ಕುಟುಂಬದ ಶಾಂತಿಗಾಗಿ ತಾಳ್ಮೆಯಿಂದಿರಲು ಪ್ರಯತ್ನಿಸಿ. ಕುಟುಂಬದ ಬೆಂಬಲವೂ ಸಿಗಲಿದೆ. ತಾಳ್ಮೆ ಕಡಿಮೆಯಾಗಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವ್ಯಾಪಾರದಲ್ಲಿ ಆದಾಯ ಹೆಚ್ಚಲಿದೆ. ಆದಾಯದ ಮೂಲಗಳು ಕೂಡ ಸೃಷ್ಟಿಯಾಗಲಿವೆ ಸಹೋದರರೊಂದಿಗಿನ ಸಂಬಂಧದಲ್ಲಿ ಮಧುರತೆ ಇರಲಿದೆ.
ಇದನ್ನೂ ಓದಿ-ವೃತ್ತಿಜೀವನದಲ್ಲಿ ಯಶಸ್ಸು, ಆರ್ಥಿಕ ಪ್ರಗತಿಗಾಗಿ ಫೆಂಗ್ ಶೂಯಿ ಸಲಹೆಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.