Weight loss tips : ಹೆಚ್ಚಾಗಿ ತಿನ್ನುವ ಅಭ್ಯಾಸ ಹೊಂದಿರುವ ಜನರಿಗೆ ತೂಕವನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಆದರೆ ನೀವು ಎಷ್ಟು ಕ್ಯಾಲೊರಿಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂಬುದನ್ನು ಗಮನಿಸಿದರೆ, ನಿಮ್ಮ ತೂಕವನ್ನು ನಿಯಂತ್ರಿಸಬಹುದು. ಈ ಕುರಿತು ಕೆಲವು ಉತ್ತಮ ಸಲಹೆಗಳು ಇಲ್ಲಿವೆ ನೋಡಿ..

Weight loss journey : ಹೆಚ್ಚು ಮತ್ತು ಪದೇ ಪದೇ ತಿನ್ನುವ ಅಭ್ಯಾಸ ಜನರಿಗೆ ಒಳ್ಳೆಯದಲ್ಲ. ಹೆಚ್ಚಿನ ಚಯಾಪಚಯ ಕ್ರಿಯೆ ಇರುವವರಿಗೆ, ಇದು ಚಿಂತೆಯ ವಿಷಯವಲ್ಲ. ಆದರೆ ನಿಮ್ಮ ಚಯಾಪಚಯ ಕ್ರಿಯೆ ಕಡಿಮೆಯಿದ್ದರೆ, ಸ್ವಲ್ಪ ತಿನ್ನುವುದು ಕೂಡ ನಿಮ್ಮ ತೂಕವನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ.
ಹೆಚ್ಚು ಆಹಾರ ಸೇವಿಸಿದ ನಂತರವೂ ನಿಮ್ಮ ತೂಕವನ್ನು ನಿಯಂತ್ರಿಸಬಹುದು ಗೊತ್ತೆ..? ಹೌದು, ಪೌಷ್ಟಿಕತಜ್ಞೆ ಮಾರಿ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಹಾರದ ಪ್ರಮಾಣವನ್ನು ಕಡಿಮೆ ಮಾಡದೆಯೂ ತೂಕ ಹೆಚ್ಚಾಗದಂತೆ ಕಾಯ್ದುಕೊಳ್ಳುವುದು ಹೇಗೆ ಎಂದು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಪೌಷ್ಟಿಕತಜ್ಞೆ ಮಾರಿ ನ್ಯೂನ್ಸ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ, ಅವರು ಬಹಳಷ್ಟು ಆಹಾರವನ್ನು ತಿಂದ ನಂತರವೂ ತಮ್ಮ ತೂಕ ಹೆಚ್ಚಳವಾಗದಂತೆ ಹೇಗೆ ತಡೆಯಬೇಕು ಎನ್ನುವ ಕುರಿತು ತಿಳಿಸಿಕೊಟ್ಟಿದ್ದಾರೆ. ಅಲ್ಲದೆ, ಪ್ರತಿದಿನ ತಾವು ಸೇವಿಸುವ ಆಹಾರ ಪದ್ದತಿಯ ಕುರಿತು ಮಾಹಿತಿ ನೀಡಿದ್ದಾರೆ.
ನಾನು ಪ್ರತಿದಿನ ಸುಮಾರು 2 ಕೆಜಿ ಆಹಾರವನ್ನು ತಿನ್ನುತ್ತೇನೆ. ಇನ್ನೂ ಕ್ಯಾಲೋರಿ ಕೊರತೆಯನ್ನು ಹೊಂದಿದ್ದೇನೆ. ಇದರರ್ಥ ನಾನು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ, ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ತಿನ್ನುತ್ತೇನೆ. ಏಕೆಂದರೆ ನನ್ನ ಮನಸ್ಸಿಗೆ ತೃಪ್ತಿಯಾಗುವಷ್ಟು ತಿನ್ನಬೇಕು ಎಂದು ನನಗೆ ಅನಿಸುತ್ತದೆ. ನನ್ನ ತಟ್ಟೆ ಯಾವಾಗಲೂ ದೊಡ್ಡದಾಗಿದೆ. ಒಂದೇ ವ್ಯತ್ಯಾಸವೆಂದರೆ ನೀವು ಯಾವುದಕ್ಕೆ ಗಮನ ಕೊಡಬೇಕು ಎಂಬುದು. ಆದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ಆರಿಸಿ. ಈ ರೀತಿಯಾಗಿ ನೀವು ಹೆಚ್ಚು ತಿಂದರೂ ತೂಕ ಹೆಚ್ಚಲ್ಲ ಅಂತ ತಿಳಿಸಿದ್ದಾರೆ.
ನೀವು ಹಣ್ಣುಗಳನ್ನು ತಿನ್ನುತ್ತಿದ್ದರೆ, ಕಡಿಮೆ ಕ್ಯಾಲೋರಿ ಅಂಶವಿರುವ ಹಣ್ಣುಗಳನ್ನು ಸೇವಿಸಿ, ಉದಾರಹಣೆಗೆ ಸ್ಟ್ರಾಬೆರಿ, ಕಲ್ಲಂಗಡಿ, ಕಿವಿ, ಚೆರ್ರಿ ಹೀಗೆ ಹಲವಾರು... ಇದರ ಹೊರತಾಗಿ, ನೀವು ಮಾಂಸವನ್ನು ತಿನ್ನುತ್ತಿದ್ದರೆ, ಸೀಗಡಿ, ಟಿಲಾಪಿಯಾ ಅಥವಾ ಯಾವುದೇ ವೈಟ್ ಮೀನು, ಕೋಳಿ ಮಾಂಸ, ಸಾರ್ಡೀನ್ಗಳು, ಟ್ಯೂನ ಮೀನುಗಳನ್ನು ಸೇವಿಸಿ. ಇವು ಕಡಿಮೆ ಕ್ಯಾಲೋರಿ ಆಹಾರಗಳಾಗಿವೆ. ಕಾರ್ಬೋಹೈಡ್ರೇಟ್ಗಳಿಗೆ, ಕಿಡ್ನಿ ಬೀನ್ಸ್/ಬೀನ್ಸ್, ಬೇಯಿಸಿದ ಆಲೂಗಡ್ಡೆ, ಸಿಹಿ ಆಲೂಗಡ್ಡೆ, ಬಟಾಣಿ, ಕುಂಬಳಕಾಯಿ ಉತ್ತಮ ಆಯ್ಕೆಗಳು ಅಂತ ಮಾಹಿತಿ ನೀಡಿದ್ದಾರೆ.