ಹದಿಹರೆಯದ ಮಗಳ ಜೊತೆ ತಂದೆ ಹೇಗಿರಬೇಕು? ಹೆಣ್ಣುಮಕ್ಕಳ ಅಪ್ಪಂದಿರು ತಿಳಿಯಲೇಬೇಕಾದ ವಿಚಾರವಿದು..

Father Daughter Relationship: ತಂದೆ-ಮಗಳ ಬಾಂಧವ್ಯ ಜಗತ್ತಿನಲ್ಲಿ ವಿಶಿಷ್ಟವಾದದ್ದು. ಪ್ರತಿಯೊಬ್ಬ ತಂದೆಯೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಾರೆ, ಮತ್ತು ಪ್ರತಿಯೊಬ್ಬ ಮಗಳು ತನ್ನ ತಂದೆಯನ್ನು ಹೀರೋ ಆಗಿ ನೋಡುತ್ತಾರೆ. ಇದೀಗ ಹದಿಹರೆಯದ ಮಗಳ ಜೊತೆ ತಂದೆ ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳೋಣ..   

Written by - Savita M B | Last Updated : Apr 8, 2025, 12:20 PM IST
  • ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದ ತಂದೆ, ಅವಳಿಗೆ ಋತುಚಕ್ರವಾದಾಗ ಅವಳಿಂದ ದೂರವಾಗುತ್ತಾರೆ
  • ಮೊದಲಿನಂತೆ ಆತ್ಮೀಯತೆಯನ್ನು ತೋರಿಸುವುದಿಲ್ಲ
ಹದಿಹರೆಯದ ಮಗಳ ಜೊತೆ ತಂದೆ ಹೇಗಿರಬೇಕು? ಹೆಣ್ಣುಮಕ್ಕಳ ಅಪ್ಪಂದಿರು ತಿಳಿಯಲೇಬೇಕಾದ ವಿಚಾರವಿದು..

Relationship Tips: ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದ ತಂದೆ, ಅವಳಿಗೆ ಋತುಚಕ್ರವಾದಾಗ ಅವಳಿಂದ ದೂರವಾಗುತ್ತಾರೆ.. ಪ್ರೀತಿಯ ಕೊರತೆ ಇಲ್ಲದಿದ್ದರೂ, ಮಗಳು ದೊಡ್ಡವಳಾದಳು ಎಂದು ಭಾವಿಸಿ ಮೊದಲಿನಂತೆ ಆತ್ಮೀಯತೆಯನ್ನು ತೋರಿಸುವುದಿಲ್ಲ. ಮೊದಲಿನಂತೆ ಎಲ್ಲವನ್ನೂ ಮುಕ್ತವಾಗಿ ಹೇಳಲು ಸಾಧ್ಯವಾಗುವುದಿಲ್ಲ.. "ಹಾಗೇ ಇರು ಹೀಗೆ ಇರು" ಎಂದು ಹುಡುಗಿಗೆ ನಿರ್ಬಂಧಗಳನ್ನು ವಿಧಿಸುತ್ತಾರೆ.. ಇದು ಮಗಳಿಗೆ ಬೆಳೆದು ನಿಂತ ಮಗಳಿಗೆ ಸ್ವಲ್ಪ ಕಷ್ಟವೆನಿಸುತ್ತದೆ.. 

Add Zee News as a Preferred Source

ಅನೇಕ ತಂದೆಯಂದಿರು ಹುಡುಗರ ಬಗ್ಗೆ ನಕಾರಾತ್ಮವಾಗಿ ಮಾತನಾಡಿ.. ಅವರೊಂದಿಗೆ ಬೆರೆಯಬೇಡಿ ಎಂದು ಹೇಳುತ್ತಾರೆ.. ಆದರೆ ಈ ರೀತಿಯ ವಿಷಯಗಳು ಮಗಳ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತವೆ. ಹೀಗಾಗಿ ಎಲ್ಲವನ್ನು ಒಂದು ಒಳ್ಳೆಯ ರೀತಿಯಿಂದ ಮಗಳಿಕೆ ತಿಳಿಸುವ ಪ್ರಯತ್ನ ಮಾಡಬೇಕು. 

ಇದನ್ನೂ ಓದಿ: ಹೌದು; ಆಕೆ ನನ್ನ ಗರ್ಲ್‌ಫ್ರೆಂಡ್‌...- ಡಿವೋರ್ಸ್ ಬಳಿಕ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ! ತನ್ನ ಬದುಕಿನ ಎರಡನೇ ʼಪ್ರೀತಿʼಯನ್ನ ಪರಿಚಯಿಸಿದ ʼಗಬ್ಬರ್‌ ಸಿಂಗ್‌ʼ

ಮಾನಸಿಕ ಮತ್ತು ದೈಹಿಕ ಬದಲಾವಣೆಗಳ ತಿಳುವಳಿ: ಹದಿಹರೆಯದಲ್ಲಿ ಲೈಂಗಿಕ ಆಕರ್ಷಣೆ ಸಹಜ. ಮಗಳು ಹುಡುಗರತ್ತ ಆಕರ್ಷಿತಳಾಗಿ.. ಪ್ರೀತಿಯಲ್ಲಿ ಬೀಳಬಹುದು. ಹಾರ್ಮೋನುಗಳ ಬದಲಾವಣೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು..  ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ನೀವೇ ಹೇಳಬೇಕು. 

ಕೆಟ್ಟ ಸ್ನೇಹಿತರಿಂದ ದೂರವಿರಲು ಸಲಹೆ: ಹದಿಹರೆಯದಲ್ಲಿ ಲೈಂಗಿಕ ಬಯಕೆ ಹೆಚ್ಚಾಗಿರುತ್ತದೆ. ಏನು ಬೇಕಾದರೂ ಆಗಬಹುದು. ಆದ್ದರಿಂದ, ನಿಮ್ಮ ಮಗಳನ್ನು ಕೆಟ್ಟ ಸ್ನೇಹಿತರಿಂದ ದೂರವಿರುವಂತೆ ಸಹಹೆ ನೀಡಿ.. ಕೆಲವು ಸ್ನೇಹಿತರು ಮತ್ತು ಗೆಳೆಯರು ಒಳ್ಳೆಯವರಾಗಿರಬಹುದು. ಆದರೆ ಇನ್ನೂ ಕೆಲವರು ಮೋಡಿಮಾಡಿ ಬಲೆಗೆ ಬೀಳಿಸಿಕೊಳ್ಳಬಹುದು.. ಹಾಗೆ ಮಾಡುವುದರಿಂದ ಉಂಟಾಗುವ ಪರಿಣಾಮಗಳನ್ನು ಮಗಳಿಗೆ ಅರಿವು ಮಾಡಿಸಿ.. 

ಇದನ್ನೂ ಓದಿ: ಹೌದು; ಆಕೆ ನನ್ನ ಗರ್ಲ್‌ಫ್ರೆಂಡ್‌...- ಡಿವೋರ್ಸ್ ಬಳಿಕ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ! ತನ್ನ ಬದುಕಿನ ಎರಡನೇ ʼಪ್ರೀತಿʼಯನ್ನ ಪರಿಚಯಿಸಿದ ʼಗಬ್ಬರ್‌ ಸಿಂಗ್‌ʼ

ನಡುವಳಿಕೆಯ ಸಲಹೆ: ತಂದೆ ತನ್ನ ಮಗಳಿಗೆ ಮಾರ್ಗದರ್ಶನ ನೀಡಬೇಕು ಮತ್ತು ದಯೆಯ ಮಾತುಗಳನ್ನು ಹೇಳಬೇಕು. ಆದರೆ ಮಗಳನ್ನು ಬೇರೊಬ್ಬರೊಂದಿಗೆ ಹೋಲಿಕೆ ಮಾಡವುದು, ಜಡ್ಜ್‌ ಮಾಡುವುದು ಬೇಡ.. ನಿಮ್ಮ ಮಗಳು ನೀವು ಹೇಳಿದ್ದೆ ಕೇಳಬೇಕೆಂದು ಒತ್ತಾಯಿಸಬೇಡಿ.. ಇದು ಅವಳ ಮನಸ್ಸಿನ ಮೇಲೆ ಪರಿಣಾಮ ಬೀರಿ ತಪ್ಪು ದಾರಿ ಹಿಡಿಯಬಹುದು.. 

ಲೈಂಗಿಕತೆಯ ಬಗ್ಗೆ ಮಾತನಾಡಿ: ಅನೇಕ ಪೋಷಕರಿಗೆ ಅದರ ಬಗ್ಗೆ ಮಾತನಾಡಲು ಕಷ್ಟವಾಗುತ್ತದೆ. ಆದರೆ ಎಲ್ಲಿ ಈ ವಿಚಾರಗಳನ್ನು ಮುಕ್ತವಾಗಿ ಮಾತನಾಡುತ್ತಾರೋ ಅಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಗರ್ಭಧಾರಣೆ ಮತ್ತು ಗರ್ಭನಿರೋಧಕಗಳ ಬಗ್ಗೆ ಸ್ವಲ್ಪ ಅರಿವು ಮೂಡಿಸುವುದು ಒಳ್ಳೆಯದು.. ಏಕೆಂದರೇ ಮುಂದಾಗುವ ತಪ್ಪುಗಳನ್ನು ಇಂದೇ ತಪ್ಪಿಸಿದಂತಾಗುತ್ತದೆ.. 

ಲೈಂಗಿಕ ಚಟುವಟಿಕೆಯನ್ನು ಅಸಹ್ಯಕರ ಎಂದು ಕರೆಯಬೇಡಿ: ಇದು ಪ್ರತಿಯೊಬ್ಬ ಮನುಷ್ಯನಿಗೂ ಇರುವ ಸಹಜ ಬಯಕೆ. ಆದರೆ ಜಾಗರೂಕರಾಗಿರಬೇಕು ಎನ್ನುವುದನ್ನು ತಿಳಿಸಬೇಕು.. ನಿಮ್ಮ ಮಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಗಟ್ಟಿಮುಟ್ಟಾಗಿರಬೇಕೆಂದು ಹೇಳಿಕೊಡಿ.. ಇಬ್ಬರು ವ್ಯಕ್ತಿಗಳು ದೈಹಿಕ ಸಂಪರ್ಕಕ್ಕೆ ಹೇಗೆ ಸಿದ್ಧರಾಗಬೇಕೆಂದು ಮಕ್ಕಳು ತಿಳಿದುಕೊಳ್ಳಬೇಕು. ಇದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News