)
ಚೀನೀ ವಾಸ್ತುಶಾಸ್ತ್ರವಾದ ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದು ನಕಾರಾತ್ಮಕ ಶಕ್ತಿಯನ್ನು ದೂರೀಕರಿಸಿ, ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.ಇದರಿಂದ ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಸ್ಥಿರತೆ ದೊರೆಯುತ್ತದೆ ಎಂದು ನಂಬಲಾಗಿದೆ.ಮನೆ ಅಲಂಕಾರದಲ್ಲಿ ಈ ಸಾಂಪ್ರದಾಯಿಕ ಸಲಹೆಗಳನ್ನು ಅಳವಡಿಸಿಕೊಳ್ಳುವುದು ಜೀವನದಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ ಎನ್ನುತ್ತಾರೆ ಫೆಂಗ್ ಶೂಯಿ ತಜ್ಞರು.
ಕುದುರೆಗಳ ಫೋಟೋ:
ಸೂರ್ಯೋದಯ, ಪರ್ವತಗಳು, ಜಲಪಾತಗಳು ಹಾಗೂ ಕುದುರೆಗಳ ಚಿತ್ರಗಳನ್ನು ಮನೆಯಲ್ಲಿ ಇಡುವುದು ಯಶಸ್ಸು ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ, ಮನೆಯ ನೈಋತ್ಯ ದಿಕ್ಕಿನಲ್ಲಿ ನಗುತ್ತಿರುವ ಕುಟುಂಬದ ಫೋಟೋಗಳನ್ನು ಇರಿಸುವುದರಿಂದ ಕೌಟುಂಬಿಕ ಸಂಬಂಧಗಳು ಬಲಗೊಳ್ಳುತ್ತವೆ ಎಂದು ಫೆಂಗ್ ಶೂಯಿ ಹೇಳುತ್ತದೆ.
ಅದೃಷ್ಟ ಬಿದಿರು:
ಬಿದಿರಿನ ಗಿಡವನ್ನು ಕುಟುಂಬ ಸದಸ್ಯರು ಸೇರುವ ಸ್ಥಳದಲ್ಲಿ ಬೆಳೆಸುವುದು ಸಮೃದ್ಧಿಯನ್ನು ಆಕರ್ಷಿಸುತ್ತದೆ.ಅಲ್ಲದೆ, ಆಗ್ನೇಯ ದಿಕ್ಕಿನಲ್ಲಿ ಹಣದ ಗಿಡ (Money Plant) ನೆಡುವುದು ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸುತ್ತದೆ ಎಂಬುದು ಫೆಂಗ್ ಶೂಯಿ ನಂಬಿಕೆ.
ಆಮೆ ಪ್ರತಿಮೆ ಮತ್ತು ಜಲ ವ್ಯವಸ್ಥೆ:
ಆಮೆಯನ್ನು ಸಂಪತ್ತು ಹಾಗೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಆಮೆಯ ಪ್ರತಿಮೆಯನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಇದರ ಜೊತೆಗೆ, ಕಾರಂಜಿ ಅಥವಾ ಅಕ್ವೇರಿಯಂ ಅನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಸಕಾರಾತ್ಮಕ ಫಲಿತಾಂಶ ನೀಡುತ್ತದೆ.
ಗಾಳಿ ಸರಪಳಿಗಳು (Wind Chimes)ವಿಂಡ್ ಚೈಮ್ಸ್ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ,ನಕಾರಾತ್ಮಕ ಶಕ್ತಿಯನ್ನು ಕಡಿಮೆಗೊಳಿಸಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಮುಖ್ಯ ಬಾಗಿಲು ಅಥವಾ ಕಿಟಕಿಗಳ ಮೇಲೆ ಇವನ್ನು ಅಳವಡಿಸುವುದು ಶುಭಕರ ಎನ್ನಲಾಗಿದೆ.
ಸೂಚನೆ: ಈ ಮಾಹಿತಿಯು ಸಾಂಪ್ರದಾಯಿಕ ಫೆಂಗ್ ಶೂಯಿ ನಂಬಿಕೆಗಳನ್ನು ಆಧರಿಸಿದ್ದು, ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆರೋಗ್ಯ ಅಥವಾ ಆರ್ಥಿಕ ಸಮಸ್ಯೆಗಳಿಗೆ ವೃತ್ತಿಪರ ಸಲಹೆ ಪಡೆಯಿರಿ.ಜೀ ಕನ್ನಡ ನ್ಯೂಸ್ ಧೃಡಿಕರಿಸುವುದಿಲ್ಲ.