ಬೆಳಗ್ಗೆ ಇಷ್ಟು ಗಂಟೆಗೆ ಎದ್ದು... ರಾತ್ರಿ ಈ ಟೈಂಗೆ ಮಲಗಿದ್ರೆ ಸಾಕು ಒಂದೇ ವಾರದಲ್ಲಿ 7ಕೆಜಿಯಷ್ಟು ತೂಕ ಇಳಿಕೆಯಾಗುತ್ತೆ

best time to sleep and wake up for weight loss: ತೂಕ ಇಳಿಕೆ ಎಂಬುದು ಕೇವಲ ಆಹಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ನಿದ್ದೆಗೂ ಸಂಬಂಧಿಸಿದೆ. ಒಬ್ಬ ವ್ಯಕ್ತಿಗೆ ಸರಿಯಾದ ಪ್ರಮಾಣದಲ್ಲಿ ನಿದ್ದೆ ಬರದಿದ್ದರೆ ಅನೇಕ ಸಮಸ್ಯೆಗಳನ್ನು ಆತ ಎದುರಿಸಬೇಕಾಗುತ್ತದೆ. 

Written by - Bhavishya Shetty | Last Updated : Apr 4, 2025, 04:39 PM IST
    • ಬೊಜ್ಜು ಸರಳ ಅಥವಾ ಸಂಕೀರ್ಣವಾಗಿರಬಹುದು
    • ತೂಕ ಇಳಿಕೆ ಎಂಬುದು ಕೇವಲ ಆಹಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ನಿದ್ದೆಗೂ ಸಂಬಂಧಿಸಿದೆ
    • ಒಬ್ಬ ವ್ಯಕ್ತಿ 7-9 ಗಂಟೆಗಳ ಕಾಲ ನಿದ್ರೆ ಮಾಡಬೇಕು
ಬೆಳಗ್ಗೆ ಇಷ್ಟು ಗಂಟೆಗೆ ಎದ್ದು... ರಾತ್ರಿ ಈ ಟೈಂಗೆ ಮಲಗಿದ್ರೆ ಸಾಕು ಒಂದೇ ವಾರದಲ್ಲಿ 7ಕೆಜಿಯಷ್ಟು ತೂಕ ಇಳಿಕೆಯಾಗುತ್ತೆ
File Photo

best time to sleep and wake up for weight loss: "ರಾತ್ರಿ 9 ಗಂಟೆಗೆ ನಿದ್ದೆ ಮಾಡುವವರು, ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಳ್ಳುವವರು, ದಿನಕ್ಕೆ ಎರಡು ಬಾರಿ ಊಟ ಮಾಡುವವರು, ಯಾವುದೇ ರೀತಿಯ ಸಕ್ಕರೆ ಬೇಡ ಎಂದು ಹೇಳುವವರು, ನಿಮಿಷಕ್ಕೆ 40 ಬಡಿತಗಳ ವಿಶ್ರಾಂತಿ ಹೃದಯ ಬಡಿತ ಹೊಂದಿರುವವರು, ವಾರದಲ್ಲಿ ಐದು ದಿನ ರನ್ನಿಂಗ್‌ ಮಾಡುವವರು, ಎರಡು ದಿನಗಳ ಎನರ್ಜಿ ಟ್ರೈನಿಂಗ್‌, ನೋ ನೆಟ್‌ಫ್ಲಿಕ್ಸ್, ನೋ ಅಮೆಜಾನ್ ಪ್ರೈಮ್, ನೋ ಟಿವಿ ಮತ್ತು ಮೆಟ್ಟಿಲುಗಳನ್ನು ಹತ್ತುವವರು" ಇಷ್ಟೆಲ್ಲಾ ಫಾಲೋ ಮಾಡುವವರು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ವರದಿಯೊಂದು ಹೇಳಿದೆ.

Add Zee News as a Preferred Source

ಇದನ್ನೂ ಓದಿ: ಸೂರ್ಯ, ಶನಿ ಮತ್ತು ಶುಕ್ರರ ತ್ರಿಗ್ರಹಿ ಯುತಿ: ಏಪ್ರಿಲ್ 14ರವರೆಗೆ 3 ರಾಶಿಗಳಿಗೆ ತೊಂದರೆ, ಆರೋಗ್ಯ ಮತ್ತು ವೃತ್ತಿಜೀವನದ ಎಚ್ಚರ!!

47 ವರ್ಷದ ಶಾಜನ್ ಸ್ಯಾಮ್ಯುಯೆಲ್ ಎಂಬವರು 94 ಕೆಜಿ ತೂಕ ಹೊಂದಿದ್ದರು. ಆದರೆ ಇಂದು, 68 ಕೆಜಿಯಲ್ಲಿ ಅವರು ಅಲ್ಟ್ರಾ ಮ್ಯಾರಥಾನರ್ ಆಗಿದ್ದಾರೆ. 18 ಸಾಂಪ್ರದಾಯಿಕ ಮ್ಯಾರಥಾನ್‌ಗಳನ್ನು (42.2 ಕಿಮೀ), ಒಂದು ಬಾರಿ 220 ಕಿಮೀ, ಮೂರು ಬಾರಿ 161 ಕಿಮೀ, ಆರು ಬಾರಿ 100 ಕಿಮೀ ಮತ್ತು ಲೆಕ್ಕವಿಲ್ಲದಷ್ಟು ಬಾರಿ 50 ಕಿಮೀ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಫಿಟ್ ಇಂಡಿಯಾ ಆಂದೋಲನದ ಬ್ರಾಂಡ್ ರಾಯಭಾರಿಯಾಗಿದ್ದಾರೆ.

ತಮ್ಮ ಜೀವನಶೈಲಿ ಮತ್ತು ತೂಕ ಇಳಿಕೆ ಪ್ರಯಾಣದ ಬಗ್ಗೆ ಮಾತನಾಡಿರುವ ಅವರು, "ನಾನು ವ್ಯವಹಾರದ ನಿಮಿತ್ತ ಆಗಾಗ್ಗೆ ಪ್ರಯಾಣಿಸುತ್ತಿದ್ದೆ, ಹೊರಗೆ ತಿನ್ನುತ್ತಿದ್ದ ಎಲ್ಲಾ ಆಹಾರದ ಬಗ್ಗೆಯೂ ನನಗೆ ಗಮನವಿರಲಿಲ್ಲ. ಒಮ್ಮೆ ಕೇರಳದಾದ್ಯಂತ ಪ್ರಯಾಣಿಸುತ್ತಿದ್ದ ನಾನು, ಪ್ರತಿದಿನ ಮಲಬಾರ್ ಪರೋಟಗಳು ಮತ್ತು ಡೀಪ್-ಫ್ರೈಡ್ ಚಿಕನ್ ಅನ್ನು ತಿನ್ನುತ್ತಿದ್ದೆ. ನಿಷ್ಕ್ರಿಯ ಜೀವನಶೈಲಿಯನ್ನು ಹೊಂದಿದ್ದ ಕಾರಣ ತೂಕ ಮಿತಿ ಮೀರಿ ಹೆಚ್ಚಾಯಿತು" ಎಂದು ಸ್ಯಾಮ್ಯುಯೆಲ್ ಹೇಳುತ್ತಾರೆ.

"ಅದಾದ ಬಳಿಕ ಮ್ಯಾರಥಾನ್‌ ನನ್ನ ಮೋಜೋ ಆಯಿತು. ಆಹಾರ, ಪೋಷಣೆ ಮತ್ತು ಶಕ್ತಿಯ ಮೇಲೆ ಸಮಾನ ಗಮನವನ್ನು ಕೇಂದ್ರೀಕರಿಸಿ, ನಾನು 42 ನೇ ವಯಸ್ಸಿನಲ್ಲಿ ಅಲ್ಟ್ರಾಮ್ಯಾರಥಾನ್ ಓಟಗಾರನಾದೆ. ನಾನು 12/24/36 ಗಂಟೆಗಳ ಕ್ರೀಡಾಂಗಣ ಓಟಗಳನ್ನು ಪೂರ್ಣಗೊಳಿಸಿದ್ದೇನೆ. ಸಿಂಗಾಪುರ ಮತ್ತು ಬರ್ಲಿನ್ ಮ್ಯಾರಥಾನ್‌ಗಳನ್ನು ಮಾಡಿದ್ದೇನೆ" ಎಂದು ಸ್ಯಾಮ್ಯುಯೆಲ್ ತನ್ನ ವೈಟ್‌ ಲಾಸ್‌ ಜರ್ನಿಯ ಬಗ್ಗೆ ಹೇಳುತ್ತಾರೆ.

ಬೇರಿಯಾಟ್ರಿಕ್ ಸರ್ಜನ್ ಮತ್ತು ಬೊಜ್ಜು ಶಸ್ತ್ರಚಿಕಿತ್ಸೆ ಸೊಸೈಟಿಯ ಮಾಜಿ ಕಾರ್ಯದರ್ಶಿ ಡಾ. ಜಯಶ್ರೀ ತೋಡ್ಕರ್ ಹೇಳುವಂತೆ, ದೇಹದ ಚಯಾಪಚಯ ವ್ಯವಸ್ಥೆಯು ಒಂದು ನಿರ್ದಿಷ್ಟ ಅತ್ಯುತ್ತಮ ಮಟ್ಟದಲ್ಲಿದ್ದಾಗ, ಅದು ವ್ಯಕ್ತಿಯು ತನ್ನ ಹೆಚ್ಚುವರಿ ತೂಕವನ್ನು ನಿಯಂತ್ರಣಕ್ಕೆ ತರಲು ತೆಗೆದುಕೊಳ್ಳುವ ಸ್ವಯಂಪ್ರೇರಿತ ಪ್ರಯತ್ನಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ಹೇಳುತ್ತಾರೆ.

"ಬೊಜ್ಜು ಸರಳ ಅಥವಾ ಸಂಕೀರ್ಣವಾಗಿರಬಹುದು. ಭಾರತದಲ್ಲಿ ಶೇಕಡಾ ತೊಂಬತ್ತು ಪ್ರಕರಣಗಳು ದುರದೃಷ್ಟವಶಾತ್ ಸಂಕೀರ್ಣವಾಗಿವೆ ಮತ್ತು ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಕೊಬ್ಬಿನ ಪಿತ್ತಜನಕಾಂಗ, ಹೃದ್ರೋಗ ಇತ್ಯಾದಿಗಳಿಗೆ ಸಂಬಂಧಿಸಿವೆ. ಈ ರೀತಿಯ ಬೊಜ್ಜು ಆಹಾರ ಮತ್ತು ವ್ಯಾಯಾಮದಂತಹ ಬಾಹ್ಯ ಕ್ರಮಗಳಿಗೆ ಮಾತ್ರ ಪ್ರತಿಕ್ರಿಯಿಸಲು ವಿಫಲವಾಗಿದೆ" ಎಂದು ಅವರು ಹೇಳುತ್ತಾರೆ.

ತೂಕ ಇಳಿಕೆ ಎಂಬುದು ಕೇವಲ ಆಹಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ನಿದ್ದೆಗೂ ಸಂಬಂಧಿಸಿದೆ. ಒಬ್ಬ ವ್ಯಕ್ತಿಗೆ ಸರಿಯಾದ ಪ್ರಮಾಣದಲ್ಲಿ ನಿದ್ದೆ ಬರದಿದ್ದರೆ ಅನೇಕ ಸಮಸ್ಯೆಗಳನ್ನು ಆತ ಎದುರಿಸಬೇಕಾಗುತ್ತದೆ. ಇನ್ನು ಸೂಕ್ತ ತೂಕ ನಷ್ಟಕ್ಕೆ, ನಿಮ್ಮ ಚಯಾಪಚಯ ಕ್ರಿಯೆ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸಲು ಸ್ಥಿರವಾದ ನಿದ್ರೆಯ ವೇಳಾಪಟ್ಟಿ ಇರಬೇಕು. ಒಬ್ಬ ವ್ಯಕ್ತಿ 7-9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ರಾತ್ರಿ ೧೦ ರಿಂದ ಬೆಳಗ್ಗೆ ೬ರವರೆಗೆ ನಿದ್ದೆ ಮಾಡಬೇಕು. ಹೀಗೆ ಮಾಡಿದರೆ ತೂಕ ಇಳಿಕೆ ಸುಲಭವಾಗುತ್ತದೆ.

ಇದನ್ನೂ ಓದಿ: ತಾಯಿಯ ಒತ್ತಾಯದ ಮೇರೆಗೆ ಸಹ ನಟಿಯ ಮೇಲೆ ಪ್ರೀತಿ.. ಇಬ್ಬರನ್ನು ಮದುವೆಯಾಗಿ ಇಂದು ಸಿಂಗಲ್‌ ಆಗಿ ಜೀವನ ಸಾಗಿಸುತ್ತಿರುವ ಈ ನಟ ಸೌತ್‌ ಇಂಡಸ್ಟ್ರಿಯ ಸೂಪರ್‌ಸ್ಟಾರ್‌

 ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ, ಮನೆಮದ್ದು ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.   

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News