Baba Vanga Prediction 2025 : 2025ರ ವರ್ಷದ ನಾಲ್ಕನೇ ತಿಂಗಳಲ್ಲಿಯೇ ಜಗತ್ತು ಅನೇಕ ಭಯಾನಕ ವಿಪತ್ತುಗಳಿಗೆ ಸಾಕ್ಷಿಯಾಗಿದೆ. ಮ್ಯಾನ್ಮಾರ್-ಥೈಲ್ಯಾಂಡ್‌ನಲ್ಲಿನ ಭೀಕರ ಭೂಕಂಪವಾಗಿರಬಹುದು ಅಥವಾ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಾಗಿರಬಹುದು.ಈ ವಿಪತ್ತುಗಳು ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಮಾತ್ರವಲ್ಲ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕೂಡಾ ನಾಶಮಾಡಿವೆ. ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಜೀವ ಮತ್ತು ಆಸ್ತಿ ನಷ್ಟದ ಈ ಅನುಕ್ರಮ ಇನ್ನೂ ನಿಲ್ಲುವುದಿಲ್ಲ ಎಂದು ತೋರುತ್ತದೆ. ಜಪಾನೀಸ್ ಬಾಬಾ ವಂಗಾ ಎಂದೇ ಪ್ರಸಿದ್ಧರಾದ ರಿಯೊ ಟ್ಯಾಟ್ಸುಕಿ ಜುಲೈ 2025 ರ ಭಯಾನಕ ಭವಿಷ್ಯ ನುಡಿದಿದ್ದಾರೆ.
ಎದುರಾಗಲಿದೆ ಭಯಾನಕ ಸುನಾಮಿ :
ಜುಲೈ 2025 ರಲ್ಲಿ ಜಪಾನ್ ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ದೊಡ್ಡ ವಿಪತ್ತು ಸಂಭವಿಸಬಹುದು ಎಂದು ರಿಯೋ ಟ್ಯಾಟ್ಸುಕಿ ಹೇಳಿದ್ದಾರೆ. ಇದು ದೊಡ್ಡ ಸುನಾಮಿಯಾಗಲಿದ್ದು, ಇದು ಜಪಾನ್ ಮತ್ತು ಅದರ ನೆರೆಯ ದೇಶಗಳ ಮೇಲೆ ಪರಿಣಾಮ ಬೀರುತ್ತದೆ.
ರಿಯೊ ಪ್ರಕಾರ, ಜುಲೈ 2025 ರಲ್ಲಿ ಬರುವ ಸುನಾಮಿ 2011 ರ ಸುನಾಮಿಗಿಂತ ಮೂರು ಪಟ್ಟು ದೊಡ್ಡದಾಗಿರಬಹುದು.ಈ ಭವಿಷ್ಯವಾಣಿ ನಿಜವಾದರೆ ಅನೇಕ ಜನರು ಪ್ರಾಣ ಕಳೆದುಕೊಳ್ಳಬಹುದು.ಅಲ್ಲದೆ, ಈ ಜಲ ಪ್ರಳಯ ಅನೇಕ ಹಳ್ಳಿ ಮತ್ತು ನಗರಗಳನ್ನು ನಾಶಮಾಡಬಹುದು. ಜಪಾನ್ ಹೊರತುಪಡಿಸಿ, ಈ ಸುನಾಮಿ ಫಿಲಿಪೈನ್ಸ್, ಇಂಡೋನೇಷ್ಯಾ ಮತ್ತು ತೈವಾನ್‌ನಂತಹ ದೇಶಗಳಲ್ಲಿಯೂ ವಿನಾಶವನ್ನುಂಟು ಮಾಡುತ್ತದೆ.
ಈಗಾಗಲೇ ನಿಜವಾಗಿರುವ ಭವಿಷ್ಯವಾಣಿಗಳು :
ವರದಿಯ ಪ್ರಕಾರ, ರಿಯೊ ಟ್ಯಾಟ್ಸುಕಿ ಹಲವಾರು ದಶಕಗಳಿಂದ ಭವಿಷ್ಯ ನುಡಿಯುತ್ತಿದ್ದಾರೆ. 1980 ರ ದಶಕದಿಂದಲೂ ಪ್ರಪಂಚದಾದ್ಯಂತ ಸಂಭವಿಸುವ ವಿಪತ್ತುಗಳ ಬಗ್ಗೆ ಮೊದಲೇ ಹೇಳಿದ್ದಾರೆ. ಇವರೊಬ್ಬ ಮಾಂಗಾ ಕಲಾವಿದ. ಅವರ ಕನಸಿನ ದಿನಚರಿಯನ್ನು "ನಾನು ನೋಡಿದ ಭವಿಷ್ಯ" ಎಂಬ ಹೆಸರಿನಲ್ಲಿ 1999 ರಲ್ಲಿ ಪ್ರಕಟಿಸಲಾಯಿತು. 1991 ರಲ್ಲಿ ಗಾಯಕ ಫ್ರೆಡ್ಡಿ ಮರ್ಕ್ಯುರಿ ಸಾವು ಮತ್ತು 1995 ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ ಅವರ ಹಲವು ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವಾಗಿವೆ.
ಇದನ್ನೂ ಓದಿ : Weekly Horoscope: ಏಪ್ರಿಲ್ ಮೂರನೇ ವಾರ ಪ್ರಭಾವಶಾಲಿ ಆದಿತ್ಯ ಯೋಗದಿಂದ ಸೂರ್ಯನಂತೆಯೇ ಕಂಗೊಳಿಸಲಿದೆ ಈ ರಾಶಿಯವರ ಬದುಕು
(ಸೂಚನೆ : ಪ್ರಿಯ ಓದುಗರೇ, ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ತಿಳಿಸಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಾಗ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









