Instant Remedy for knee pain: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕ ಜನರು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುತ್ತಿರುವ ಜೀವನಶೈಲಿ ಈ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ. ಕೀಲು ನೋವಿಗೆ ಮೊದಲ ಕಾರಣ ಸರಿಯಾದ ಆಹಾರ ಸೇವಿಸದಿರುವುದು. ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಕೊರತೆ ಇದ್ದರು ಕೂಡ ಕೀಲು ನೋವು ಸಂಭವಿಸುತ್ತದೆ. ಈ ಹರ್ಬಲ್ ಟೀ ಸೇವನೆಯಿಂದ ನೀವು ಕೀಲು ನೋವಿನಿಂದ ಮುಕ್ತಿ ಪಡೆಯ ಬಹುದು...


COMMERCIAL BREAK
SCROLL TO CONTINUE READING

ಕೀಲು ನೋವಿನ ಭಯದಿಂದ ಹಲವರು ನಡೆಯುವುದನ್ನೆ ನಿಲ್ಲಿಸುತ್ತಾರೆ. ಆದರೆ, ಇದು ತಪ್ಪು. ನೀವು ನಿಯಮಿತವಾಗಿ  ವ್ಯಾಯಾಮವನ್ನು ಮಾಡದಿದ್ದರೆ, ಕೀಲುಗಳಲ್ಲಿ ಕಿರಿಕಿರಿ ಮತ್ತು ವಿಪರೀತ ನೋವು ಹೆಚ್ಚಾಗುತ್ತದೆ. ಕೀಲುಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ನಿಯಮಿತವಾಗಿ ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ಗಿಡಮೂಲಿಕೆಗಳನ್ನು ಬೆರೆಸಿ ಟೀ ಮಾಡಿ ಕುಡಿಯುವುದರಿಂದ ಕೀಲು ನೋವನ್ನು ನಿವಾರಿಸಬಹುದು. ಹಾಗಾದರೆ ಟೀ ಮಾಡುವುದು ಹೇಗೆ? ಮುಂದೆ ಓದಿ


ಇದನ್ನೂ ಓದಿ: ಆಹಾರದಲ್ಲಿ ಇಂಗು ಬಳಸುವುದರಿಂದ ಏನಾಗುತ್ತೆ ಗೊತ್ತಾ..?


ಹರ್ಬಲ್ ಟೀ ಮಾಡುವುದು ಹೇಗೆ?
ಅರಿಶಿನ ಮತ್ತು ಶುಂಠಿಯಲ್ಲಿ ಅಲರ್ಜಿ ವಿರೋಧಿ ಗುಣಗಳು ಹೇರಳವಾಗಿವೆ. ಒಂದು ಚಮಚ ತುರಿದ ಶುಂಠಿ, ಅರ್ಧ ಚಮಚ ಅರಿಶಿನ ಪುಡಿ ಮತ್ತು ಚಿಟಿಕೆ ಕರಿಮೆಣಸು ಸೇರಿಸಿ ಚಹಾ ಮಾಡಿ ಕುಡಿಯಿರಿ. ನಿಮಗೆ ಮಧುಮೇಹವಿಲ್ಲದಿದ್ದರೆ, ನೀವು ಒಂದು ಚಮಚ ಜೇನುತುಪ್ಪವನ್ನು ಸಹ ಇದಕ್ಕೆ ಸೇರಿಸಬಹುದು. 


ಈ  ಚಹಾವನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ, ಇದಕ್ಕೆ ಶುಂಠಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಕರಿಮೆಣಸು ಮತ್ತು ಜೇನುತುಪ್ಪವನ್ನು ಬೆರಸಿ ಇದನ್ನು ಕುಡಿಯಿರಿ. ಈ ಚಹಾವು ಕೀಲು ನೋವಿನಿಂದ ಪರಿಹಾರ ನೀಡುತ್ತದೆ. ಈ ಚಹಾವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುವುದರಿಂದ ಒಳ್ಳೆ ಪಲಿತಾಂಶ ಸಿಗುತ್ತದೆ.


ಔಷಧೀಯ ಗುಣಗಳು ಶುಂಠಿಯಲ್ಲಿ ಹೇರಳವಾಗಿವೆ ಇದು ಸ್ನಾಯು ಮತ್ತು ಕೀಲು ನೋವನ್ನು ನಿವಾರಿಸುವ  ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಅರಿಶಿನ ದೇಹದಲ್ಲಿನ  ಸೋಂಕುಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ, ಅರಿಶಿನದಲ್ಲಿ ಗುಣಗಳು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಕರಿಮೆಣಸು ಕೂಡ ನೋವು ನಿವಾರಕ ಗುಣಗಳನ್ನು ಹೊಂದಿದೆ ಇದು ಕೀಲು ನೋವಿಗೆ ರಾಮಬಾಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.