ನವದೆಹಲಿ : Benefits Of Guar Beans: ಆರೋಗ್ಯವನ್ನು ಕಾಪಾಡಿಕೊಳ್ಳಲು, ಹಸಿರು ತರಕಾರಿಗಳ ಸೇವನೆಯು ಬಹಳ ಮುಖ್ಯವಾಗಿದೆ. ಪೌಷ್ಟಿಕತಜ್ಞರ ಪ್ರಕಾರ, ನಿಯಮಿತವಾಗಿ ಹಸಿರು ತರಕಾರಿಗಳನ್ನು (Benefits of green vegetables) ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿನ ಅನೇಕ ರೀತಿಯ ಸಮಸ್ಯೆಗಳನ್ನು ದೂರ ಮಾಡಬಹುದು. ಹಸಿರು ತರಕಾರಿಗಳನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಸಿಗುವುದಲ್ಲದೆ, ತೂಕವನ್ನು ಕೂಡಾ ನಿಯಂತ್ರಣದಲ್ಲಿರಿಸಬಹುದು. 


COMMERCIAL BREAK
SCROLL TO CONTINUE READING

ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಪ್ರಕಾರ, ಗೋರಿ ಕಾಯಿ (benefits of guar beans) ಅನೇಕ ಪೋಷಕಾಂಶಗಳಿಂದ ತುಂಬಿದೆ. ಈ ಕಾಯಿ ಮತ್ತು ಅದರ ಕಾಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಈ ಮೂರು ಕಾರಣಗಳಿಗಾಗಿ ಗೋರಿಕಾಯಿಯನ್ನು ಆಹಾರದಲ್ಲಿ ಸೇವಿಸಬೇಕು. 


ಇದನ್ನೂ ಓದಿ : Benefits of Kasoori Methi: ಈ ಮಹಿಳೆಯರಿಗೆ ಅತ್ಯಂತ ಲಭಕಾರಿ ಕಸೂರಿ ಮೆಂತೆ, ಹಲವು ಕಾಯಿಲೆಗಳಿಗೆ ರಾಮಬಾಣ


ಗೋರಿಕಾಯಿಯ  ಪ್ರಯೋಜನಗಳು :
1. ಗೋರಿ ಕಾಯಿ ದೇಹ ತೂಕ ಇಳಿಸಿಕೊಳ್ಳಲು (Weight lose) ಸಹಾಯ ಮಾಡುತ್ತದೆ. ಹೆಚ್ಚು ಹೊತ್ತು ಕುಳಿತಲ್ಲೇ ಕೆಲಸ ಮಾಡುವುದು, ಕರಿದ ಆಹಾರವನ್ನು ತಿನ್ನುವುದು ದೇಹದ ಬೊಜ್ಜಿನ (fat) ಸಮಸ್ಯೆಗೆ  ಕಾರಣವಾಗಬಹುದು. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಣದಲ್ಲಿಡಲು  ಗೋರಕಾಯಿ ನೆರವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇತರ ತರಕಾರಿಗಳಿಗಿಂತ ಗೋರಿ ಕಾಯಿಯ, ಅಧಿಕ ಪ್ರಮಾಣದ ಫೈಬರ್ ಅಂಶ ಇರುತ್ತದೆ. ಇದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. 


2.  ಹೊಟ್ಟೆಯ ಸಮಸ್ಯೆಗೆ ಚಿಕಿತ್ಸೆ :
ಮಲಬದ್ಧತೆಯ (Constipation) ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಖಂಡಿತವಾಗಿಯೂ ಆಹಾರದಲ್ಲಿ ಗೋರಿ ಕಾಯಿಯನ್ನು ಸೇರಿಸಿ. ಇದರಲ್ಲಿರುವ ಫೈಬರ್ ಮಲಬದ್ಧತೆಯಂತಹ ಸಮಸ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಇದನ್ನೂ ಸೇವಿಸುತ್ತಾ ಬಂದರೆ, ಜೀರ್ಣಕಾರಿ ಸಮಸ್ಯೆಗಳನ್ನು (Gigestion problem) ಸುಲಭವಾಗಿ ನಿವಾರಿಸಬಹುದು. ಇದು ಹೊಟ್ಟೆಯನ್ನು ಸ್ವಚ್ಛವಾಗಿಡಲು ಕೂಡಾ ನೆರವಾಗುತ್ತದೆ. 


ಇದನ್ನೂ ಓದಿ : Health Tips: ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ಕೂಡಲೇ ಈ ಆಹಾರ ಸೇವಿಸುವುದನ್ನು ನಿಲ್ಲಿಸಿ


3. ಎಲುಬುಗಳನ್ನು ಗಟ್ಟಿಯಾಗಿರುವಂತೆ ಮಾಡುತ್ತದೆ :
ಗೋರಿಕಾಯಿ ಮತ್ತು ಅದರ ಬೀಜಗಳನ್ನು ಪೋಷಕಾಂಶಗಳ, ಕ್ಯಾಲ್ಸಿಯಂನ ಉಗ್ರಾಣ ಎಂದೇ ಕರೆಯಲಾಗುತ್ತದೆ. ಇದರಲ್ಲಿರುವ ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುವುದರ (Strong bone)ಜೊತೆಗೆ ಅವುಗಳನ್ನು ಆರೋಗ್ಯವಾಗಿರಿಸುತ್ತದೆ.  ಈ ಕಾರಣಕ್ಕಾಗಿ ಗೋರಿ ಕಾಯಿಯನ್ನು ಆಹಾರದಲ್ಲಿ ಸೇವಿಸಲೇಬೇಕು ಎಂದು ಹೇಳಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.