)
White Hair Natural Remedies: ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಬಹುತೇಕ ಜನರ ಸಾಮಾನ್ಯ ಸಮಸ್ಯೆ ಆಗಿದೆ. ಬಿಳಿ ಕೂದಲನ್ನು ಮರೆ ಮಾಚಲು ಜನ ಹೇರ್ ಡೈಗಳ ಮೊರೆ ಹೋಗುತ್ತಾರೆ. ಆದರೆ, ಕೆಮಿಕಲ್ ಮಿಶ್ರಿತ ಹೇರ್ ಡೈಗಳನ್ನು ಬಳಸುವ ಬದಲಿಗೆ ನಿಮ್ಮ ಗೋರಂಟಿ ಜೊತೆ ಅರುವಿ ಎಲೆ ಬೆರೆಸಿ ಹಚ್ಚುವುದರಿಂದ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಗಾಢ ಕಪ್ಪಾಗಿಸಬಹುದು.
ಬಿಳಿ ಕೂದಲಿಗೆ ಗೋರಂಟಿ:
ಬಿಳಿ ಕೂದಲನ್ನು ಕಪ್ಪಾಗಿಸಲು ಸಾಮಾನ್ಯವಾಗಿ ಗೋರಂಟಿ ಎಲೆಗಳನ್ನು ಬಳಸುತ್ತಾರೆ. ಆದರೆ, ಕೇವಲ ಗೋರಂಟಿ ಬಳಸುವುದರಿಂದ ಮಾತ್ರವೇ ಬೆಳ್ಳಗಿರುವ ಕೂದಲನ್ನು ಸಂಪೂರ್ಣವಾಗಿ ಕಪ್ಪಾಗಿಸಲು ಸಾಧ್ಯವಿಲ್ಲ. ಗೋರಂಟಿ ಬಳಕೆಯಿಂದ ಕೂದಲು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಗೋರಂಟಿಯೊಂದಿಗೆ ಅರುವಿ ಎಲೆ ಬಳಸಿ ಹಚ್ಚಿದರೆ ಬಿಳಿ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಬಹುದು.
ಬಿಳಿ ಕೂದಲಿಗೆ ಗೋರಂಟಿ ಮಿಕ್ಸ್:
ಗೋರಂಟಿ ಪುಡಿಯೊಂದಿಗೆ ಅರುವಿ ಎಲೆ ಪುಡಿಯನ್ನು ಹಾಕಿ ಚಹಾ ಕಷಾಯದಲ್ಲಿ ಬೆರೆಸಿ ರಾತ್ರಿಯಿಡೀ ಇರಿಸಿ. ಮರುದಿನ ಬೆಳಿಗ್ಗೆ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಮಿಕ್ಸ್ ಮಾಡಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ.
ಗೋರಂಟಿ, ಅರುವಿ ಎಲೆ ಹೇರ್ ಪ್ಯಾಕ್ ಅನ್ನು ಕೂದಲಿಗೆ ಅಪ್ಲೈ ಮಾಡಿ ಮೂರ್ನಾಲ್ಕು ಗಂಟೆಗಳ ಬಳಿಕ ಸೌಮ್ಯ ಶಾಂಪೂವಿನ ಸಹಾಯದಿಂದ ಹೇರ್ ವಾಶ್ ಮಾಡಿದರೆ ಬೆಳ್ಳಗಿರುವ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಕೂದಲಿನ ಆರೈಕೆಯಲ್ಲಿ ನೈಸರ್ಗಿಕ ಪರಿಹಾರವಾಗಿರುವುದರಿಂದ ಇದರಿಂದ ಕೂದಲಿಗಾಗಲಿ ಅಥವಾ ಚರ್ಮಕ್ಕಾಗಲಿ ಯಾವುದೇ ಹಾನಿಯಾಗುವುದಿಲ್ಲ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.