Vastu to Follow While Sweeping the House: ವಾಸ್ತು ಶಾಸ್ತ್ರದಲ್ಲಿ ಮನೆಕೆಲಸ ಮಾಡುವ ಬಗ್ಗೆ ಹಲವು ನಿಯಮಗಳನ್ನು ನೀಡಲಾಗಿದೆ. ಇದರಲ್ಲಿ ಮನೆಯನ್ನು ಸ್ವಚ್ಛಗೊಳಿಸುವುದೂ ಸೇರಿದೆ. ವಾಸ್ತುವಿನಲ್ಲಿ ಗುಡಿಸಲು ಕೆಲವು ಪ್ರಮುಖ ನಿಯಮಗಳನ್ನು ನೀಡಲಾಗಿದ್ದು, ಇವುಗಳನ್ನು ಪಾಲಿಸದಿದ್ದರೆ ಮನೆಯಲ್ಲಿ ಹಣ ಎಂದಿಗೂ ಉಳಿಯುವುದಿಲ್ಲ.
ಪೊರಕೆಯ ವಿಷಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ, ಮನೆಯ ಜನರು ಯಾವಾಗಲೂ ಸಾಲದಲ್ಲಿಯೇ ಇರುತ್ತಾರೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಮನೆಗಿರುವ ದೇವರ ಆಶೀರ್ವಾದಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
ಇಂತಹ ತಪ್ಪುಗಳು ಲಕ್ಷ್ಮಿ ದೇವಿಯನ್ನು ಕೋಪಗೊಳಿಸುತ್ತವೆ. ಅಷ್ಟೇ ಅಲ್ಲದೆ ಹೊಸಲು ದಾಟಿ ತಾಯಿ ಮಹಾಲಕ್ಷ್ಮೀ ಹೊರಟು ಹೋಗುತ್ತಾಳೆ. ಇದರಿಂದಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ಎಂದಿಗೂ ಗುಡಿಸಬೇಡಿ. ಸೂರ್ಯಾಸ್ತದ ಸಮಯದಲ್ಲಿ ಅಥವಾ ರಾತ್ರಿಯಲ್ಲಿ ಮನೆ ಗುಡಿಸಿದರೆ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ.
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಯು ರಾತ್ರಿಯ ಸಮಯದಲ್ಲಿ ಹೊರಗೆ ಸುತ್ತಾಡಲು ಬಂದು ಸ್ವಚ್ಛತೆ ಇರುವ ಮತ್ತು ಜನರು ಸಾಮರಸ್ಯದಿಂದ ಒಟ್ಟಿಗೆ ವಾಸಿಸುವ ಮನೆಗೆ ಪ್ರವೇಶಿಸುತ್ತಾಳೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ಬೆಳಿಗ್ಗೆ ಅಥವಾ ಹೆಚ್ಚೆಂದರೆ ಮಧ್ಯಾಹ್ನದೊಳಗೆ ಮನೆಯನ್ನು ಸ್ವಚ್ಛಗೊಳಿಸಿ.
ಸಂಜೆ ಅಥವಾ ರಾತ್ರಿಯ ಸಂದರ್ಭದಲ್ಲಿ ಕಸ ಗುಡಿಸುವ ಅನಿವಾರ್ಯತೆ ಎದುರಾದರೆ ಗುಡಿಸಿ, ಆದರೆ ಕನಿಷ್ಠ ಪಕ್ಷ ಕಸವನ್ನು ಹೊರಗೆ ಎಸೆಯಬೇಡಿ. ಕಸವನ್ನು ಪ್ಯಾಕ್ ಮಾಡಿ ಅಥವಾ ಕಸದ ಬುಟ್ಟಿಯಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಅದನ್ನು ಎಸೆಯಿರಿ.
ಇದನ್ನೂ ಓದಿ: ನಿಮ್ಮ ಬಳಿ PF ಖಾತೆ ಇದೆಯಾ? ಹಾಗಾದ್ರೆ ನಿಮಗೊಂದು ಶಾಕಿಂಗ್ ಸುದ್ದಿ EPFO ದಲ್ಲಿ ದಿಡೀರ್ ಬದಲಾವಣೆ!
ಸೂಚನೆ: ಪ್ರಿಯ ಓದುಗರೇ, ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಮಾಹಿತಿ ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಾಗ ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









