)
Moringa leaves for White Hair : ನುಗ್ಗೆಕಾಯಿ ಎಲೆಯಲ್ಲಿರುವ ಪೋಷಕಾಂಶಗಳು ಕೂದಲನ್ನು ಬೇರಿನಿಂದಲೇ ಗಟ್ಟಿಯಾಗಿಸುತ್ತವೆ. ನುಗ್ಗೆ ಸೊಪ್ಪನ್ನು ಬಳಸುವುದರಿಂದ ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅಮೈನೋ ಆಮ್ಲಗಳನ್ನು ಹೊಂದಿದೆ.
ನುಗ್ಗೆ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಸಿ ಮತ್ತು ಇ ಇರುವುದರಿಂದ, ಇದು ಕೂದಲನ್ನು ಕಪ್ಪಾಗಿ ಮತ್ತು ಉದ್ದವಾಗಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಕಂಡಿಷನರ್ ಆಗಿ ಸಹ ಇದನ್ನು ಬಳಸಬಹುದು.
ನುಗ್ಗೆಕಾಯಿ ಎಲೆಯಲ್ಲಿ ಬಯೋಟಿನ್ ಕೂಡ ಇದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸತು, ವಿಟಮಿನ್ ಎ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಬಿಳಿ ಕೂದಲನ್ನು ತಡೆಯಲು ನುಗ್ಗೆಕಾಯಿ ಎಲೆ ಹೇರ್ ಪ್ಯಾಕ್ ತಯಾರಿಸಿ ಹಚ್ಚಬೇಕು.
ಮೊದಲು ನುಗ್ಗೆಕಾಯಿ ಗಿಡದ ಎಲೆಯನ್ನು ಒಣಗಿಸಬೇಕು. ಚೆನ್ನಾಗಿ ಒಣಗಿದ ಎಲೆಯನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಮೊಸರಿನಲ್ಲಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಂಡು 30 ನಿಮಿಷದ ಬಳಿಕ ಸ್ನಾನ ಮಾಡಿ.
ನುಗ್ಗೆಸೊಪ್ಪಿನ ಪುಡಿಯನ್ನು ಮೊಸರಿನಲ್ಲಿ ಬೆರೆಸಿ, ರೋಸ್ ವಾಟರ್ ಮತ್ತು ಅಕ್ಕಿ ನೀರನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ತಲೆಹೊಟ್ಟು ಸಮಸ್ಯೆ ತೊಲಗುವುದು. ನುಗ್ಗೆಕಾಯಿ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಕಂಡಿಷನರ್ ರೀತಿ ಸಹ ನೀವು ಬಳಸಬಹುದು. ಇದರಿಂದ ಕೂದಲಿಗೆ ನೈಸರ್ಗಿಕ ಹೊಳಪು ಬರುವುದು.
ಮೊಸರಿಗೆ ನುಗ್ಗೆಸೊಪ್ಪಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಿಸಿ. ಇದಕ್ಕೆ ಒಂದು ಚಮಚ ಕಾಫಿ ಪುಡಿ ಬೆರೆಸಿ. 10 ನಿಮಿಷ ಬಿಟ್ಟು ತಲೆಗೆ ಹಚ್ಚಿಕೊಳ್ಳಿ. ಒಣಗಿದ ನಂತರ ತಲೆ ಸ್ನಾನ ಮಾಡಿ. ಇದರಿಂದ 2 ನಿಮಿಷದಲ್ಲೇ ಬಿಳಿ ಕೂದಲು ಕಡು ಕಪ್ಪು ಬಣ್ಣಕ್ಕೆ ತಿರುಗುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.