)
Mosquito home remedy : ಸಂಜೆಯಾದರೆ ಸಾಕು ಸೊಳ್ಳೆಗಳ ಸೈನ್ಯವೇ ಮನೆ ಸೇರುತ್ತದೆ. 2 ನಿಮಿಷ ಬಾಗಿಲು ತೆರೆದ ತಕ್ಷಣ ನೂರಾರು ಸೊಳ್ಳೆಗಳು ಮನೆಯೊಳಗೆ ನುಗ್ಗುತ್ತವೆ. ಸೊಳ್ಳೆಗಳನ್ನು ಹೋಗಲಾಡಿಸಲು ಮನೆಮದ್ದುಗಳನ್ನು ಬಳಸುವುದು ಉತ್ತಮ ಆಯ್ಕೆ.
ಸೊಳ್ಳೆಗಳನ್ನು ತಪ್ಪಿಸಲು ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು ಸುರಕ್ಷಿತ ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಸಹ ಉತ್ತಮಗೊಳಿಸುತ್ತದೆ. ಸೊಳ್ಳೆಗಳನ್ನು ಓಡಿಸಲು ನೀವು ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ನಾವು ಸೂಚಿಸಿರುವ ಈ ನೈಸರ್ಗಿಕ ಪರಿಹಾರ ಮಾಡಿದರೆ ಸೊಳ್ಳೆಗಳನ್ನು ಸುಲಭವಾಗಿ ದೂರವಿಡಬಹುದು.
ಸೊಳ್ಳೆಗಳು ಮನೆ ಸೇರದಂತೆ ತಡೆಯಲು ನೀವು ನಿಂಬೆ ಹಣ್ಣನ್ನು ಬಳಸಬಹುದು. ನಿಂಬೆ ಹಣ್ಣಿನ ಸಹಾಯದಿಂದ ಸೊಳ್ಳೆಗಳನ್ನು ಸುಲಭವಾಗಿ ಹೋಗಲಾಡಿಸಬಹುದಾಗಿದೆ.
ನಿಂಬೆ ತುಂಡು ತೆಗೆದುಕೊಂಡು ಅದರಲ್ಲಿ 5 - 6 ಲವಂಗವನ್ನು ಚುಚ್ಚಿ. ಈ ನಿಂಬೆಹಣ್ಣನ್ನು ಮನೆಯ ಮೂಲೆಯಲ್ಲಿ ಮತ್ತು ಮನೆಯ ಬಾಗಿಲ ಬಳಿ ಇರಿಸಿ. ಇದರ ವಾಸನೆಯಿಂದಾಗಿ ಸೊಳ್ಳೆಗಳ ಓಡಾಟ ಕಡಿಮೆಯಾಗುತ್ತದೆ. ಸೊಳ್ಳೆಗಳು ನಿಮ್ಮ ಮನೆ ಸೇರುವುದಿಲ್ಲ.
ಕರ್ಪೂರದ ಬಲವಾದ ವಾಸನೆಯು ಸೊಳ್ಳೆಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಕರ್ಪೂರವನ್ನು ನೀರಿನಲ್ಲಿ ಹಾಕಿ ಕೋಣೆಯಲ್ಲಿ ಇರಿಸಿ. ಅಥವಾ ಕರ್ಪೂರವನ್ನು ಸುಟ್ಟು ಅದರ ಹೊಗೆಯನ್ನು ಕೋಣೆಯಲ್ಲಿ ಹರಡಲು ಬಿಡಿ. ಪ್ರತಿ ರಾತ್ರಿ ಮಲಗುವ ಮೊದಲು ಇದನ್ನು ಮಾಡಿ. ಇದು ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯುತ್ತದೆ.
ಮನೆಯ ಸುತ್ತಲೂ ನೀರು ಸಂಗ್ರಹವಾಗಲು ಬಿಡಬೇಡಿ. ಮನೆಯ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ಸಂಜೆಯಾಗುತ್ತಿದ್ದಂತೆ ಮುಚ್ಚಿಡಿ ಅಥವಾ ಜಾಲರಿಯನ್ನು ಅಳವಡಿಸಿ. ಮನೆಯಲ್ಲಿ ಬೇವಿನ ಎಲೆಗಳನ್ನು ಸುಟ್ಟುಹಾಕಿ. ಶುಚಿತ್ವವನ್ನು ನೋಡಿಕೊಳ್ಳಿ. ಸ್ನಾನಗೃಹದಲ್ಲಿ ನಿಯಮಿತವಾಗಿ ಫಿನಾಯಿಲ್ ಅನ್ನು ಸುರಿಯಿರಿ.
(ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.