Natural Hair Dye: ಮನೆಯಲ್ಲೆ ಸಿಗುವ ಈ 3 ಪದಾರ್ಥ ಬೆರೆಸಿ ಕೂದಲಿಗೆ ಹಚ್ಚಿದರೆ, ತಕ್ಷಣ ಕಪ್ಪಾಗುತ್ತೆ ಬಿಳಿ ಕೂದಲು

Natural Hair Dye: ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ಹೇರ್ ಡೈ ತಯಾರಿಸಬಹುದು. ಇದಕ್ಕೆ ಕರಿಬೇವಿನ ಎಲೆಗಳನ್ನು ಬಳಸಬಹುದು.  

Written by - Zee Kannada News Desk | Last Updated : Mar 22, 2025, 02:48 PM IST
  • ಬಿಳಿ ಕೂದಲು ವಯಸ್ಕರನ್ನು ಮಾತ್ರವಲ್ಲದೆ ಯುವಜನರನ್ನು ಸಹ ಕಾಡುವ ಸಮಸ್ಯೆಯಾಗಿದೆ.
  • ಕೆಲವು ನೈಸರ್ಗಿಕ ಕೂದಲು ಬಣ್ಣಗಳು ಸಹ ಇವೆ. ಇದನ್ನು ಕರಿಬೇವು ಎಲೆಗಳಿಂದ ತಯಾರಿಸಬಹುದು.
  • ಕೂದಲಿನ ಬೆಳವಣಿಗೆ ಮತ್ತು ಕೂದಲನ್ನು ಕಪ್ಪಾಗಿಸುವಲ್ಲಿ ಇದು ತುಂಬಾ ಒಳ್ಳೆಯದು.
Natural Hair Dye: ಮನೆಯಲ್ಲೆ ಸಿಗುವ ಈ 3 ಪದಾರ್ಥ ಬೆರೆಸಿ ಕೂದಲಿಗೆ ಹಚ್ಚಿದರೆ, ತಕ್ಷಣ ಕಪ್ಪಾಗುತ್ತೆ ಬಿಳಿ ಕೂದಲು

Natural Hair Dye: ಬಿಳಿ ಕೂದಲು ವಯಸ್ಕರನ್ನು ಮಾತ್ರವಲ್ಲದೆ ಯುವಜನರನ್ನು ಸಹ ಕಾಡುವ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಲು, ಕೃತಕ ಕೂದಲು ಬಣ್ಣವನ್ನು ಬಳಸಲಾಯಿತು. ಇದು ಕೆಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಬೂದು ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಕೂದಲು ಬಣ್ಣಗಳು ಸಹ ಇವೆ. ಇದನ್ನು ಕರಿಬೇವು ಎಲೆಗಳಿಂದ ತಯಾರಿಸಬಹುದು. 

Add Zee News as a Preferred Source

ಕರಿಬೇವು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಕೂದಲಿನ ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆ ಮತ್ತು ಕೂದಲನ್ನು ಕಪ್ಪಾಗಿಸುವಲ್ಲಿ ಇದು ತುಂಬಾ ಒಳ್ಳೆಯದು. ಕರಿಬೇವು ಅಷ್ಟೇ ಅಲ್ಲ ಕಳೊಂಜಿ ಕೂಡ ಕೂದಲನ್ನು ಕಪ್ಪಾಗಿಸುವಲ್ಲಿ ತುಂಬಾ ಸಹಾಯ ಮಾಡುತ್ತದೆ. ಇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಏಕೈಕ ಮನೆಮದ್ದು ಎಂದು ಹೇಳಬಹುದು. ಇದು ಬೂದು ಕೂದಲಿಗೆ ಸಹ ಒಳ್ಳೆಯದು. ಕಪ್ಪು ಜೀರಿಗೆ ಬೀಜಗಳು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 

ಗೋರಂಟಿ ಎಲೆ ಬೂದು ಕೂದಲಿನ ಬೆಳವಣಿಗೆಯನ್ನು ತಡೆಯಲು ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಈ ನೈಸರ್ಗಿಕ ಹೇರ್ ಪ್ಯಾಕ್ ತಲೆಹೊಟ್ಟಿನಂತಹ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ. ಇದು ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲದೆ ಬಲಶಾಲಿಯನ್ನಾಗಿ ಮಾಡುತ್ತದೆ. ಇದು ನೈಸರ್ಗಿಕ ವಸ್ತುವಾಗಿದ್ದು ನಿಮ್ಮ ಕೂದಲಿಗೆ ಯಾವುದೇ ಹಾನಿ ಮಾಡುವುದಿಲ್ಲ. 

ಕರಿಬೇವಿನ ಎಲೆಗಲನ್ನು ಒಣಗಿಸಿ, ಪುಡಿ ಮಾಡಿ ಜರಡಿ ಹಿಡಿದುಕೊಳ್ಳಿ, ಇದಕ್ಕೆ ಕಪ್ಪು ಜೀರಿಗೆ ಪುಡಿ ಮತ್ತು ಹೋರಂಟಿ ಮಿಶ್ರಣ ಮಾಡಿ, ಒಂದು ಕಬ್ಬಿಣದ ಪಾತ್ರ ತೆಗೆದುಕೊಂಡು, ಈ ಎಲ್ಲಾ ಪುಡಿಗಳನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ, ಇದಕ್ಕೆ ಸ್ವಲ್ಪ ನೀರು ಸೇರಿಸಿ, ಈ ಮಿಶ್ರಣವನ್ನು 24 ಗಂಟೆಗಳ ಕಾಲ ಚೆನ್ನಾಗಿ ನೆನೆಯಲು ಬಿಡಿ. ಮರುದಿನ ಬೆಳಗ್ಗೆ ಇದನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ವಚ್ಛವಾದ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.

ಸೂಚನೆ: ಈ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

Trending News