)
snake repellent plant: ಹಾವುಗಳನ್ನು ಮನೆಯಿಂದ ದೂರವಿಡಲು ಈ ಸಸ್ಯಗಳನ್ನು ನೆಡಬೇಕು. ಇವು ಮನೆಯ ಸುತ್ತಲೂ ಹಾವುಗಳು ಅಲೆದಾಡುವುದನ್ನು ತಡೆಯುತ್ತವೆ. ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು ಮನೆಯ ಬಾಗಿಲಿನ ಬಳಿ ಬೆಳೆಸಬೇಕು. ಇವುಗಳ ವಾಸನೆ ಮನೆಯ ಸುತ್ತಲೂ ಹಾವುಗಳು ಅಲೆದಾಡುವುದನ್ನು ತಡೆಯುತ್ತವೆ.
ತುಳಸಿ: ಇದನ್ನು ಪವಿತ್ರ ಗಿಡವೆಂದು ಪರಿಗಣಿಸಲಾಗುತ್ತದೆ. ತುಳಸಿಯು ಹಾವುಗಳಿಗೆ ಅಹಿತಕರವಾದ ವಾಸನೆಯನ್ನು ಹೊರಸೂಸುತ್ತದೆ. ಮನೆಯ ಪ್ರವೇಶದ್ವಾರಗಳ ಬಳಿ ತುಳಸಿಯನ್ನು ನೆಡಿ ಅಥವಾ ಹಾವುಗಳನ್ನು ಓಡಿಸಲು ಇದು ಸಹಾಯಕ. ಹಾವುಗಳಿರುವ ಪ್ರದೇಶಗಳ ಬಳಿ ಒಣಗಿದ ತುಳಸಿ ಎಲೆಗಳನ್ನು ಹಾಕಿ. ಇದರಿಂದ ಹಾವು ದೂರ ಹೋಗುತ್ತದೆ.
ಸ್ನೇಕ್ ಪ್ಲಾಂಟ್: ಉದ್ದವಾದ, ಮೊನಚಾದ ಎಲೆಗಳನ್ನು ಹೊಂದಿರುವ ಸ್ನೇಕ್ ಪ್ಲಾಂಟ್ ಹಾವುಗಳನ್ನು ಓಡಿಸುತ್ತದೆ. ಇದು ನೈಸರ್ಗಿಕ ಹಾವು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಸ್ಯದ ವಾಸನೆಯಿಂದಲೇ ಹಾವುಗಳು ದೂರ ಹೋಗುತ್ತವೆ.
ಪುದೀನ : ತಾಜಾ ಪರಿಮಳ ಹಾವುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಹಾವುಗಳು ಮನೆಯ ಒಳಗೆ ನುಸುಳದಂತೆ ತಡೆಯಲು ಮನೆ ಸುತ್ತಲೂ ಪುದೀನ ಗಿಡ ನೆಡಿ. ಇದು ಸೊಳ್ಳೆ ನಿವಾರಕವೂ ಆಗಿದೆ.
ಈರುಳ್ಳಿ: ಕಟುವಾದ ವಾಸನೆಯು ಹಾವುಗಳಿಗೆ ಹಿಡಿಸುವುದಿಲ್ಲ. ಇದು ನೈಸರ್ಗಿಕ ಹಾವು ನಿವಾರಕವಾಗಿದೆ. ಹಾವುಗಳನ್ನು ಓಡಿಸಲು ನಿಮ್ಮ ಮನೆಯ ಬಳಿ ಈರುಳ್ಳಿ ಗೆಡ್ಡೆಗಳನ್ನು ನೆಡಿ ಅಥವಾ ಕತ್ತರಿಸಿದ ಈರುಳ್ಳಿಯನ್ನು ಹರಡಿ.
ಚೆಂಡು ಹೂವು: ಇದು ಕಟುವಾದ ಪರಿಮಳವನ್ನು ಹೊರಸೂಸುತ್ತವೆ. ಆದ್ದರಿಂದ ಅವು ಹಾವುಗಳನ್ನು ದೂರವಿಡುವಲ್ಲಿ ಪರಿಣಾಮಕಾರಿ. ಹಾವುಗಳನ್ನು ದೂರವಿಡಲು ನಿಮ್ಮ ತೋಟ ಅಥವಾ ಮನೆಯ ಪ್ರವೇಶ ದ್ವಾರಗಳ ಬಳಿ ಚೆಂಡುಹೂವಿನ ಗಿಡವನ್ನು ನೆಡಿ.