ತೆಂಗಿನ ಎಣ್ಣೆಯೊಂದಿಗೆ ಈ ಎರಡು ಪದಾರ್ಥ ಬೆರೆಸಿ ಕೂದಲಿಗೆ ಹಚ್ಚಿದರೆ.. ಬುಡದಿಂದ ಶಮನವಾಗುತ್ತೆ ಬಿಳಿ ಕೂದಲು! ಬೂದು ಕೂದಲು ಬರದಂತೆ ತಡೆಯುವ ಅದ್ಭುತ ಪರಿಹಾರ ಇದು

White hair remedies: ಕೂದಲು ಅತೀ ಸಣ್ಣ ವಯಸ್ಸಿಗೆ ಬಿಳಿ ಬಣ್ಣಕ್ಕೆ ತಿರುಗುವುದರಿಂದ ಚಿಂತೆಗೆ ಬಿದ್ದಿದ್ದೀರಾ? ಯಾವುದೇ ಹೇರ್‌ ಡೈ ಸಹಾಯವಿಲ್ಲದೆ, ನಿಮ್ಮ ಕೂದಲನ್ನು ಕಪ್ಪಾಗಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ, 100 ಪ್ರತಿಶತ ರಿಸಲ್ಟ್ಸ್‌ ಕಾಣಬಬಹದು.  

Written by - Zee Kannada News Desk | Last Updated : Apr 16, 2025, 12:55 PM IST
  • ವಯಸ್ಸಾದಂತೆ ಕೂದಲು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.
  • ಮಾರುಕಟ್ಟೆಯಿಂದ ಖರೀದಿಸುವ ಹೇರ್ ಡೈ ರಾಸಾಯನಿಕಗಳನ್ನು ಹೊಂದಿರುವುದು ಮಾತ್ರವಲ್ಲದೆ ಕೂದಲಿಗೆ ಹಾನಿ ಮಾಡುತ್ತದೆ.
  • ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುವುದಷ್ಟೇ ಅಲ್ಲದೆ, ಇವು ಕೂದಲನ್ನು ಮೃದು ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆಯೊಂದಿಗೆ ಈ ಎರಡು ಪದಾರ್ಥ ಬೆರೆಸಿ ಕೂದಲಿಗೆ ಹಚ್ಚಿದರೆ.. ಬುಡದಿಂದ ಶಮನವಾಗುತ್ತೆ ಬಿಳಿ ಕೂದಲು! ಬೂದು ಕೂದಲು ಬರದಂತೆ ತಡೆಯುವ ಅದ್ಭುತ ಪರಿಹಾರ ಇದು

White hair remedies: ವಯಸ್ಸಾದಂತೆ ಕೂದಲು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಇದಲ್ಲದೆ ಒತ್ತಡ, ವಾಯು ಮಾಲಿನ್ಯ, ಕೂದಲಿನ ಕಳಪೆ ಆರೈಕೆ, ಪೌಷ್ಟಿಕಾಂಶದ ಕೊರತೆಗಳು,ಆರೋಗ್ಯ ಸ್ಥಿತಿಗಳು, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ರಾಸಾಯನಿಕ ಕ್ರೀಮ್‌ಗಳ ಅತಿಯಾದ ಬಳಕೆ ಕೂಡ ಕೂದಲು ಬೂದು ಬಣ್ಣಕ್ಕೆ ತಿರುಗುವುದಕ್ಕೆ ಮುಖ್ಯ ಕಾರಣವಾಗಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಅನೇಕ ಜನರು ರಾಸಾಯನಿಕಗಳನ್ನು ಬಳಸುತ್ತಾರೆ. ಮಾರುಕಟ್ಟೆಯಿಂದ ಖರೀದಿಸುವ ಹೇರ್ ಡೈ ರಾಸಾಯನಿಕಗಳನ್ನು ಹೊಂದಿರುವುದು ಮಾತ್ರವಲ್ಲದೆ ಕೂದಲಿಗೆ ಹಾನಿ ಮಾಡುತ್ತದೆ. 

Add Zee News as a Preferred Source

ಇದನ್ನು ತಪ್ಪಿಸಲು ನೀವು, ಮನೆಯ ಉತ್ಪನ್ನಗಳನ್ನು ಮಾತ್ರ ಬಳಸಿಕೊಂಡು ನಿಮ್ಮ ಕೂದಲನ್ನು ಹೇಗೆ ಕಪ್ಪಾಗಿಸುವುದು ಎಂದು ನೀವು ತಿಳಿದುಕೊಳ್ಳಬೇಕು. ಸ್ವಾಭಾವಿಕವಾಗಿ, ನೀವು ಮನೆಯಲ್ಲಿ ತಯಾರಿಸಿದ ಹೇರ್ ಡೈ ಅನ್ನು ನಿಮ್ಮ ಕೂದಲಿಗೆ ಹಚ್ಚಿದರೆ, ಅದು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುವುದಷ್ಟೇ ಅಲ್ಲದೆ, ಇವು ಕೂದಲನ್ನು ಮೃದು ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ.

ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು, ತೆಂಗಿನ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಹಚ್ಚಿ. ಇವೆರೆಡರ ಮಿಶ್ರಣ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಈ ನೈಸರ್ಗಿಕ ಪರಿಹಾರವನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು. ಈ ಎಣ್ಣೆಯನ್ನು ನೆತ್ತಿಯಿಂದ ಕೂದಲಿನ ತುದಿಯವರೆಗೆ ಚೆನ್ನಾಗಿ ಮಸಾಜ್ ಮಾಡಿ, ಒಂದೆರೆಡು ಗಂಟೆ ಹಾಗೆಯೇ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ: ಯಾವುದೇ ಔಷಧ, ಪಥ್ಯವಿಲ್ಲದೇ.. ಮಧುಮೇಹವನ್ನು ಸಂಪೂರ್ಣ ಕಂಟ್ರೋಲ್‌ ಮಾಡುತ್ತೆ ಒಂದು ಲೋಟ ನೀರು! ಹೇಗೆ ಗೊತ್ತೇ?

ಮೆಹಂದಿ ಎಲೆಯ ಪುಡಿಯನ್ನು ಆಮ್ಲಾ ಪುಡಿಯೊಂದಿಗೆ ಬೆರೆಸಿ ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಕೂದಲಿನ ವಿನ್ಯಾಸವನ್ನು ಸುಧಾರಿಸುವಲ್ಲಿ ಆಮ್ಲಾ ಮತ್ತು ಗೋರಂಟಿ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಗೋರಂಟಿಯನ್ನು ಪುಡಿ ಮಾಡಿದ ನಂತರ, ನೀವು ಬೇಯಿಸಿದ ಚಹಾ ಪುಡಿ ಅಥವಾ ಕಾಫಿ ಪುಡಿಯನ್ನು ಕೂಡ ಸೇರಿಸಬಹುದು. ಇದು ಕೂದಲಿಗೆ ಆಳವಾದ ಕಪ್ಪು ಬಣ್ಣವನ್ನು ನೀಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ.

ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಗೋರಂಟಿ ಬಳಸಿ ಇನ್ನೊಂದು ಹೇರ್ ಡೈ ತಯಾರಿಸಬಹುದು. ಈ ಹೇರ್ ಡೈ ಮಾಡಲು,  ಮೆಹಂದಿ ಪುಡಿ ಹಾಗೂ ಆಮ್ಲಾದ ಪುಡಿಯನ್ನು ನೀರಿನಲ್ಲಿ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಮೇಲೆ ಅರ್ಧ ಗಂಟೆ ಇರಿಸಿ ನಂತರ ತೊಳೆಯಿರಿ. ಇದರಿಂದ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ. ಈ ಎಣ್ಣೆ ಕೂದಲಿನ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ:ಬೆಳಗೆದ್ದು ಈ ಎಲೆ ಜಗಿದು ತಿನ್ನಿ ಸಾಕು.. 45 ದಿನಗಳವರೆಗೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ ಹೃದಯಾಘಾತ ತಡೆಯಬಲ್ಲ ಏಕೈಕ ಮದ್ದು

ನೈಸರ್ಗಿಕ ಕೂದಲು ಬಣ್ಣವನ್ನು ತಯಾರಿಸಲು ಇಂಡಿಗೊ ಮತ್ತು ಹೆನ್ನಾವನ್ನು ಸಹ ಬಳಸಬಹುದು. ಒಂದು ಕಪ್ ಇಂಡಿಗೋ ಪುಡಿಯನ್ನು ಅರ್ಧ ಕಪ್ ಗೋರಂಟಿ ಜೊತೆ ಮಿಶ್ರಣ ಮಾಡಿ. ಈ ಮಿಶ್ರಣವೂ ಕೂದಲಿಗೆ ಗಾಢವಾದ ಕಪ್ಪು ಬಣ್ಣವನ್ನು ನೀಡುವಲ್ಲಿ ಉತ್ತಮ ಪರಿಣಾಮ ಬೀರುತ್ತದೆ. ಇದನ್ನು ನಿಮ್ಮ ಕೂದಲಿನ ಮೇಲೆ 40 ರಿಂದ 50 ನಿಮಿಷಗಳ ಕಾಲ ಇರಿಸಿ, ನಂತರ ತೊಳೆಯಿರಿ. ಕೂದಲು ಕಪ್ಪಾಗುತ್ತದೆ, ಮೊದಲನೆ ಬಳಕೆಯಲ್ಲಿಯೇ ನೀವು ಭಾರಿ ವ್ಯತ್ಯಾಸವನ್ನು ಕಾಣಬಹುದು.

ವಾರಕ್ಕೆ 2-3 ಬಾರಿ ಕಪ್ಪು ಚಹಾದಿಂದ ನಿಮ್ಮ ಕೂದಲನ್ನು ತೊಳೆದರೆ, ನಿಮ್ಮ ಬಿಳಿ ಕೂದಲು ಕಪ್ಪಾಗುತ್ತದೆ. ಕಪ್ಪು ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ. ಒಂದು ಲೋಟ ನೀರಿಗೆ 2 ಟೀ ಚಮಚ ಚಹಾ ಎಲೆಗಳನ್ನು ಸೇರಿಸಬಹುದು. ಅದಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ. ಬಿಸಿನೀರನ್ನು ತಣ್ಣಗಾಗಿಸಿ. ನಂತರ, ನಿಮ್ಮ ತಲೆಯನ್ನು ತೊಳೆಯಿರಿ. ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆದರೆ, ನಿಮ್ಮ ಬಿಳಿ ಕೂದಲು ಕಪ್ಪಾಗುತ್ತದೆ. 

ಇದನ್ನೂ ಓದಿ: ಸಣ್ಣಪುಟ್ಟ ವಿಷಯಕ್ಕೂ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುವ ಮುನ್ನ ಎಚ್ಚರ!! ವೈದ್ಯರ ಹೇಳಿದ್ದಾರೆ ಶಾಕಿಂಗ್‌ ಮಾಹಿತಿ

ಈ ಬಣ್ಣವನ್ನು ತಯಾರಿಸಲು, ಒಂದು ಕಪ್ ಮೊಸರಿನಲ್ಲಿ 2-3 ಚಮಚ ಕರಿಮೆಣಸು ಮತ್ತು ಸಮಾನ ಪ್ರಮಾಣದ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ. ಕೆಲವು ದಿನಗಳವರೆಗೆ ನಿರಂತರವಾಗಿ ಬಳಸಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.

ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಲು ನೀವು ಈ ಪರಿಹಾರವನ್ನು ಪ್ರಯತ್ನಿಸಬಹುದು. ಇದನ್ನು ಪ್ರಯತ್ನಿಸಲು, ದಾಸವಾಳದ ಹೂವುಗಳನ್ನು ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ, ಈ ನೀರಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಕೂದಲು ಬೂದುಬಣ್ಣವನ್ನು ತಡೆಗಟ್ಟುವಲ್ಲಿ ದಾಸವಾಳದ ಹೂವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೆ, ಇದು ತಲೆಹೊಟ್ಟು ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಈ ಕಾಯಿಲೆ ಇದ್ದವರು... ಎಷ್ಟೇ ಆಸೆಯಾದ್ರೂ ಸರಿ ಹಪ್ಪಳ ತಿನ್ನಬಾರದು! ವಿಷವಾಗಿ ಪರಿಣಮಿಸುವುದು... ತಿನ್ನುವ ದುಸ್ಸಾಹಸ ಯಾವತ್ತಿಗೂ ಮಾಡ್ಬೇಡಿ

ಕೂದಲನ್ನು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಿಸಲು, ನೀವು ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಹುರಿದು ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಬಹುದು. ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಕಟ್ಟು ಕರಿಬೇವು ಎಲೆಗಳನ್ನು ಸೇರಿಸಿ. ಕರಿಬೇವು ಎಲೆಗಳು ಬಿಸಿಯಾಗಿ ಸಿಡಿಯಲು ಪ್ರಾರಂಭಿಸಿದ ನಂತರ, ಒಲೆಯನ್ನು ಆಫ್ ಮಾಡಿ. ತಲೆ ಮಸಾಜ್ ಮಾಡಲು ಈ ಎಣ್ಣೆಯನ್ನು ಬಳಸಿ. ಈ ಎಣ್ಣೆಯನ್ನು ವಾರಕ್ಕೆ 2 ರಿಂದ 3 ಬಾರಿ ಕೂದಲಿಗೆ ಹಚ್ಚಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ, ಮೂಲಗಳ ಮಾಹಿತಿ ಹಾಗೂ ಮನೆಮದ್ದುಗಳನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News