Hindu New Year 2023: ಪಂಚಾಂಗದ ಪ್ರಕಾರ, ಪ್ರತಿ ವರ್ಷ ಹಿಂದೂ ಹೊಸ ವರ್ಷವು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಆರಂಭವಾಗುತ್ತದೆ. ಇದರೊಂದಿಗೆ ಚೈತ್ರ ನವರಾತ್ರಿಯೂ ಕೂಡ ಆರಂಭವಾಗುತ್ತದೆ. ಈ ಹೊಸ ವರ್ಷ 2080 ಅನ್ನು ಪಿಂಗಲ್ ಅಥವಾ ಶೋಭನ್ ಸಂವತ್ಸರ್ ಎಂದು ಕರೆಯಲಾಗುತ್ತದೆ. ಈ ಹೊಸ ವರ್ಷವು ಬುಧವಾರ ಮತ್ತು ವೃಶ್ಚಿಕ ಲಗ್ನದಿಂದ ಪ್ರಾರಂಭವಾಗುತ್ತದೆ. ಈ ಶೋಭನ ಸಂವತಕ್ಕೆ ಬುಧ ರಾಜನಾದರೆ ಶುಕ್ರನು ಈ ಸಂವತ್ಸರದ ಮಂತ್ರಿಯಾಗುತ್ತಾನೆ.


COMMERCIAL BREAK
SCROLL TO CONTINUE READING

30 ವರ್ಷಗಳ ನಂತರ ರೂಪುಗೊಳ್ಳುತ್ತಿರುವ ಇಂತಹ ಅಪರೂಪದ ಯೋಗದಲ್ಲಿ ಈ ಬಾರಿ ಹಿಂದೂ ಹೊಸ ವರ್ಷ ಆರಂಭವಾಗುತ್ತಿದೆ. ಏಕೆಂದರೆ ಶನಿದೇವನು 30 ವರ್ಷಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಿದರೆ, ಗುರುವು 12 ವರ್ಷಗಳ ನಂತರ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಹೀಗಾಗಿ ಈ ಹೊಸ ವರ್ಷದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಈ ಸಂವತ್ಸರವು ಯಾವ ರಾಶಿಗಳ ಜನರ ಪಾಲಿಗೆ ಮಂಗಳಕರ ಮತ್ತು ಆಹ್ಲಾದಕರ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ
ಹಿಂದೂ ಹೊಸ ವರ್ಷವು ನಿಮ್ಮ ಪಾಲಿಗೆ ಅತ್ಯಂತ ಮಂಗಳಕರವಾಗಿದೆ. ಏಕೆಂದರೆ ಈ ವರ್ಷದಲ್ಲಿ ಗುರುವು ನಿಮ್ಮ ರಾಶಿಯಿಂದ ಲಾಭದ ಸ್ಥಾನದಲ್ಲಿರಲಿದ್ದಾನೆ. ಹೀಗಾಗಿ, ನೀವು ಹಳೆಯ ಹೂಡಿಕೆಯಿಂದ ಲಾಭ ಪಡೆಯಬಹುದು. ಇದಲ್ಲದೆ, ಈ ಅವಧಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಈ ವರ್ಷ ನಿಮಗೆ ಲಾಭವನ್ನು ಪಡೆಯಲು ನಿಮ್ಮ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ. ಅಲ್ಲದೆ, ಈ ಅವಧಿಯಲ್ಲಿ, ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಗಳಿಸಬಹುದು. ಮತ್ತೊಂದೆಡೆ, ನೀವು ಕೆಲಸ ಅಥವಾ ವ್ಯವಹಾರದಲ್ಲಿ ಯಾವುದೇ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ, ನೀವು ಈ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ಇದೇ ವೇಳೆ, ಈ ಅವಧಿಯಲ್ಲಿ ನಿಮ್ಮ ಆದಾಯದ ಹೊಸ ಮೂಲಗಳನ್ನು ಸೃಷ್ಟಿಯಾಗಲಿವೆ.


ಇದನ್ನೂ ಓದಿ-ದೇವಗುರು ಬೃಹಸ್ಪತಿಯ ಮನೆಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರ ಮೇಲೆ ಭಾರಿ ಹಣದ ಸುರಿಮಳೆ, ಸಿಗಲಿದೆ ಬಡ್ತಿ ಭಾಗ್ಯ!

ತುಲಾ ರಾಶಿ
ಹೊಸ ವರ್ಷವು ತುಲಾ ರಾಶಿಯ ಜನರಿಗೆ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಮೇಲೆ ಶನಿಯ ಸಾಡೆಸಾತಿ ಪ್ರಭಾವವು ಕೊನೆಗೊಂಡಿದೆ. ಇದೇ ವೇಳೆ ಗುರುವಿನ ಶುಭ ದೃಷ್ಟಿ ನಿಮ್ಮ ರಾಶಿಯ ಮೇಲೂ ಇರಲಿದೆ. ಇಂತಹ ಪರಿಸ್ಥಿತಿಯಲ್ಲಿ ದಾಂಪತ್ಯದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದ ಜನರ ಅಡೆತಡೆಗಳು ನಿವಾರಣೆಯಾಗಿ ದಾಂಪತ್ಯ  ಜೀವನ ಸುಖಕರವಾಲಿದೆ. ಇದರೊಂದಿಗೆ, ನೀವು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು. ಇದೆ ವೇಳೆ, ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ, ವ್ಯವಹಾರದಲ್ಲಿ ನೀವು ದೊಡ್ಡ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಬಹುದು.


ಇದನ್ನೂ ಓದಿ-ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಮೂರು ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯ!


ಧನು ರಾಶಿ
ಈ ಹೊಸ ವರ್ಷವು ನಿಮಗೆ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ಜನವರಿಯಿಂದ ನಿಮಗೆ ಶನಿ ಸಾಡೇ ಸತಿಯಿಂದ ಮುಕ್ತಿ ಸಿಕ್ಕಿದೆ. ಇದರೊಂದಿಗೆ, ಈ ಸಂವತ್ಸರದಲ್ಲಿ, ಏಪ್ರಿಲ್ 22 ರಿಂದ, ಗುರುವು ನಿಮ್ಮ ರಾಶಿಯ ಪಂಚಮ ಭಾವದಲ್ಲಿ  ಗೋಚರಿಸಲಿದ್ದಾನೆ. ಹೀಗಾಗಿ ಸಂತಾನ ಹೊಂದಲು ಬಯಸುವ ಜನರಿಗೆ ಈ ಅವಧಿಯಲ್ಲಿ ಸಂತಾನ ಸುಖ ಪ್ರಾಪ್ತಿಯಾಗಲಿದೆ.  ಅಲ್ಲದೆ, ವಿದ್ಯಾರ್ಥಿಗಳಾಗಿರುವವರು ಈ ಅವಧಿಯಲ್ಲಿ ಯಾವುದೇ ಉನ್ನತ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಈ ಅವಧಿಯಲ್ಲಿ, ನಿಮ್ಮ ಪ್ರೀತಿಯ ಸಂಬಂಧವು ಮದುವೆಗೆ ಬದಲಾಗಬಹುದು. ಕಾಲಕಾಲಕ್ಕೆ, ಧನು ರಾಶಿಯ ಜಾತಕದವರಿಗೆ ಈ ಸಂವತ್ಸರ ಉದ್ದಕ್ಕೂ ಹಣ ಗಳಿಸುವ ಅವಕಾಶ ಪಡೆಯಲಿದ್ದಾರೆ. ಆಸ್ತಿ ಖರೀದಿಗೆ ಅವಕಾಶ ಕೂಡ ಪ್ರಾಪ್ತಿಯಾಗಲಿದೆ.


ಇದನ್ನೂ ಓದಿ-Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.