White Hair Treatment At Home: ಬದಲಾದ ಓಟದ ಜೀವನಶೈಲಿಯಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿ ನೆರೆಕೂದಲು ಎಂದರೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಯುವಕ-ಯುವತಿಯರಲ್ಲಿ ಕಾಣಿಸಿಕೊಳ್ಳುವ ಈ ಬಿಳಿ ಕೂದಲುಗಳು ಒಂದು ರೀತಿಯಲ್ಲಿ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ ಎಂಬುದೂ ಕೂಡ ಸುಳ್ಳಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಾಗಂತ, ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ರಾಸಾಯನಿಕಗಳ ಮೊರೆ ಹೋಗುವ ಅಗತ್ಯವೂ ಇಲ್ಲ. ಬದಲಿಗೆ ನಿಮ್ಮ ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ಎರಡೇ ಎರಡು ಪದಾರ್ಥಗಳ ಸಹಾಯದಿಂದ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲುಗಳನ್ನು ಕಪ್ಪಾಗಿ ಬದಲಾಯಿಸಬಹುದು. 


COMMERCIAL BREAK
SCROLL TO CONTINUE READING

ಹೌದು, ಪ್ರತಿ ಅಡುಗೆ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಫೆನ್ನೆಲ್ ಅಥವಾ ಸೋಂಪು ಮತ್ತು ಕೊಬ್ಬರಿ ಎಣ್ಣೆಯ ಸಹಾಯದಿಂದ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ದೊರೆಯಲಿದೆ. 


ಇದನ್ನೂ ಓದಿ- ಡಾರ್ಕ್ ಸರ್ಕಲ್ ನಿವಾರಣೆಗೆ ಸುಲಭ ಪರಿಹಾರ ನೀಡುವ ಮನೆಮದ್ದುಗಳು


ಫೆನ್ನೆಲ್ ಎಣ್ಣೆಯ ಬಳಕೆಯಿಂದ ನೀವು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಮಾತ್ರವಲ್ಲ, ಇದರಿಂದ ಕೂದಲು ಉದುರುವ ಸಮಸ್ಯೆಗಳಿಗೂ ಕೂಡ ಸುಲಭ ಪರಿಹಾರ ದೊರೆಯಲಿದೆ. ಹಾಗಂತ ನೀವು ಈ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ಹುಡುಕುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿಯೇ ಈ ಎಣ್ಣೆಯನ್ನು ಸುಲಭವಾಗಿ ತಯಾರಿಸಬಹುದು. 


ಫೆನ್ನೆಲ್‌ ಕೂದಲಿಗೆ ಹೇಗೆ ಪ್ರಯೋಜನಕಾರಿ? 
ವಾಸ್ತವವಾಗಿ, ಫೆನ್ನೆಲ್ ಅನ್ನು ಸಾಮಾನ್ಯವಾಗಿ ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದನ್ನು ಆಹಾರದ ರುಚಿ ಹೆಚ್ಚಿಸಲು ಕೂಡ ಬಳಸಲಾಗುತ್ತದೆ. ಆದರೆ, ಫೆನ್ನೆಲ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿವೆ. ಇವು ಕೂದಲು ಉದುರುವಿಕೆ, ತಲೆ ಹೊಟ್ಟು, ಬಿಳಿ ಕೂದಲು ಹೀಗೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಮರ್ಥ್ಯವನ್ನು ಹೊಂದಿದೆ.  


ಇದನ್ನೂ ಓದಿ- Long Hair Tips: ಹೊಳೆಯುವ, ಉದ್ದ ಕೂದಲಿಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ


ಫೆನ್ನೆಲ್ ಎಣ್ಣೆಯನ್ನು ಮನೆಯಲ್ಲಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: 
* ½ ಕಪ್ ಫೆನ್ನೆಲ್
* ಕೊಬ್ಬರಿ ಎಣ್ಣೆ 


ಫೆನ್ನೆಲ್ ಎಣ್ಣೆಯನ್ನು ಮನೆಯಲ್ಲಿ ತಯಾರಿಸುವ ವಿಧಾನ:
>> ಫೆನ್ನೆಲ್ ಎಣ್ಣೆಯನ್ನು ಮನೆಯಲ್ಲಿ ತಯಾರಿಸಲು ಮೊದಲಿಗೆ ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ, ಅದು ಸ್ವಲ್ಪ ಬಿಸಿಯಾದ ನಂತರ ಅದರಲ್ಲಿ ಫೆನ್ನೆಲ್ ಎಂದರೆ ಸೋಂಪು ಬೀಜಗಳನ್ನು ಮಿಶ್ರಣ ಮಾಡಿ. 
>> ಈ ಎರಡನ್ನೂ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಕುದಿಸಿ. 
>> ಅದು ಚೆನ್ನಾಗಿ ಕುದಿಯಲು ಪ್ರಾರಂಭಿಸಿದಾಗ ಉರಿಯನ್ನು ಮಧ್ಯಮವಾಗಿಸಿ ಮತ್ತೆ ಸ್ವಲ್ಪ ಸಮಯದವೆರೆಗೆ ಹಾಗೆ ಕಾಯಲು ಬಿಡಿ ನಂತರ ಸ್ಟೌವ್ ಆಫ್ ಮಾಡಿ. 
>> ನಂತರ ಈ ಮಿಶ್ರಣ ತಣ್ಣಗಾದ ಬಳಿಕ ಅದನ್ನು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿ. ನಿಯಮಿತವಾಗಿ ಕೂದಲಿಗೆ ಹಚ್ಚಿ. 


ನೆನಪಿಡಿ: ಈ ಎಣ್ಣೆಯನ್ನು ಬುಡದಿಂದ ಚೆನ್ನಾಗಿ ಅನ್ವಯಿಸಿ ಮಸಾಜ್ ಮಾಡುವುದರಿಂದ ನಿಮ್ಮ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಮಾತ್ರವಲ್ಲದೆ ಕೂದಲಿನ ಬಹುತೇಕ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯುತ್ತದೆ. 


ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.