Pimples Remedy: ಮುಖದ ಅಂದ ಕೆಡಿಸುವ ಮೊಡವೆಯಿಂದ ಪರಿಹಾರ ಪಡೆಯಲು ದುಬಾರಿ ಕ್ರೀಮ್, ಸೋಪ್, ಫೇಸ್ ವಾಶ್ ಗಳ ಮೊರೆ ಹೋದರೂ ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಅಷ್ಟು ಸುಲಭವಾಗಿ ಮುಕ್ತಿ ಪಡೆಯಲು ಸಾಧ್ಯವೇ ಇಲ್ಲ. ಮೊಡವೆಯಿಂದ ಪರಿಹಾರಕ್ಕಾಗಿ ನೂರಾರು ಮಂದಿ ನೀಡುವ ಸಲಹೆ ಅನುಸರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೊಣಗುವವರೇ ಹೆಚ್ಚು. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಸರಳ ಸಲಹೆಯನ್ನು ಒಮ್ಮೆ ಟ್ರೈ ಮಾಡಿ ನೋಡಿ...
ಮೊಡವೆಗಳ ಸಮಸ್ಯೆಗೆ ಧೂಳು, ಮಾಲಿನ್ಯವಲ್ಲದೆ ಅವರ ದೇಹದ ಪ್ರಕೃತಿಯೂ ಪ್ರಮುಖ ಕಾರಣವಾಗಿರುತ್ತದೆ. ಎಣ್ಣೆಯುಕ್ತ ಚರ್ಮದ ಸಮಸ್ಯೆ ಇದ್ದವರನ್ನು ಹೆಚ್ಚು ಬಾಧಿಸುವ ಮೊಡವೆಗಳನ್ನು ನಿವಾರಿಸಲು ಚರ್ಮದ ಆರೈಕೆಯ ಜೊತೆಗೆ ದೇಹದ ಆರೈಕೆಯೂ ಮುಖ್ಯವಾಗಿದೆ.
ಚರ್ಮ ತಜ್ಞರ ಪ್ರಕಾರ, ಮೊಡವೆಗಳು ಉಂಟಾಗಲು ಕೆಲವು ಆಹಾರಗಳ ಸೇವನೆಯು ಕಾರಣವಾಗಿರಬಹುದು. ಮೊದಲೇ ಎಣ್ಣೆಯುಕ್ತ ಚರ್ಮ ಹೊಂದಿರುವವರಲ್ಲಿ ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದರಿಂದಾಗಿ ಮೊಡವೆಗಳು ನಿವಾರಣೆಯಾಗುವುದೇ ಇಲ್ಲ. ಹಾಗಾಗಿ ನೀವು ತಿನ್ನುವ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ, ಕೆಲ ಆಹಾರಗಳಿಂದ ದೂರ ಉಳಿಯುವುದರಿಂದ ಮೊಡವೆಗಳನ್ನು ಸುಲಭವಾಗಿ ನಿವಾರಿಸಬಹುದು ಎನ್ನಲಾಗುತ್ತದೆ.
ಇದನ್ನೂ ಓದಿ- ಹಾಲಿನೊಂದಿಗೆ ಮಖಾನಾ ಬೆರೆಸಿ ತಿಂದ್ರೆ ಸುಲಭವಾಗಿ ಕರಗುತ್ತೆ ಹೊಟ್ಟೆ ಬೊಜ್ಜು, ಜಿಮ್, ವ್ಯಾಯಾಮ ಇಲ್ಲದೆಯೂ ಇಳಿಯುತ್ತೆ ತೂಕ
ಮೊಡವೆಗಳಿಂದ ಮುಕ್ತಿ ಪಡೆಯಲು ಈ ಆಹಾರಗಳಿಂದ ದೂರವಿದ್ದರೆ ಸಾಕು...
ಹಾಲು:
ಹಸುವಿನ ಹಾಲು ಆರೋಗ್ಯಕ್ಕೆ ವರದಾನ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಹಾಲಿನಲ್ಲಿ ಐಜಿಎಫ್-1 ಹಾಗೂ ಬೊವಿನ್ ಎಂಬ ಬೆಳವಣಿಗೆಯ ಹಾರ್ಮೋನ್ ಇದ್ದು ಇದು ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಇದು ಬೇಡದ ಕೂದಲು ಎಂದರೆ ಅನ್ ವಾಂಟೆಡ್ ಕೂದಲ ಬೆಳವಣಿಗೆಗೆ ಕಾರಣವಾದರೆ, ಇನ್ನೂ ಕೆಲವರಲ್ಲಿ ಮೊಡವೆಗಳ ಸಮಸ್ಯೆಯನ್ನು ಉಲ್ಬಣಿಸಬಹುದು.
ಉಪ್ಪು:
ಉಪ್ಪು ಅಥವಾ ಉಪ್ಪಿನಲ್ಲಿರುವ ಅಯೋಡಿನ್‌ಗೂ ಮೊಡವೆಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂತಲೇ ಹೇಳಬಹುದು. ಅಧಿಕ ಪ್ರಮಾಣದಲ್ಲಿ ಉಪ್ಪು ಸೇವನೆ, ಇಲ್ಲವೇ ಉಪ್ಪು ಹೆಚ್ಚಿರುವ ತಿನಿಸುಗಳನ್ನು ತಿನ್ನುವುದನ್ನು ತಪ್ಪಿಸಿದರೆ ಮೊಡವೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ- ದಿನಕ್ಕೆ ಒಂದು ಮೊಟ್ಟೆ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಅದ್ಭುತ ಲಾಭ
ಎಣ್ಣೆಯುಕ್ತ ಆಹಾರ:
ಎಣ್ಣೆಯುಕ್ತ ಆಹಾರಗಳ ಅತಿಯಾದ ಸೇವನೆಯು ಮೊಡವೆ ಸಮಸ್ಯೆಗೆ ಕಾರಣವಾಗಿದೆ. ಕರಿದ ಆಹಾರಗಳ ಸೇವನೆಯನ್ನು ತಪ್ಪಿಸಿದರೆ ಮೊಡವೆ ಸಮಸ್ಯೆಯಿಂದಲೂ ಸುಲಭ ಪರಿಹಾರ ಪಡೆಯಬಹುದಾಗಿದೆ.
ಅಧಿಕ ಗ್ಲಿಸೆಮಿಕ್ ಇಂಡೆಕ್ಸ್ ಇರುವ ಆಹಾರಗಳು:
ಅಧಿಕ ಗ್ಲಿಸೆಮಿಕ್ ಇಂಡೆಕ್ಸ್ ಇರುವ ಆಹಾರಗಳಾದ ಮೈದಾ, ಸಕ್ಕರೆ, ಕೆಚಪ್‌ಗಳು, ಸಾಸ್, ಸಂಸ್ಕರಿಸಿದ ಆಹಾರಗಳು, ಕೆಂಪು ಮಾಸ, ಕೋಲ್ಡ್ ಡ್ರಿಂಕ್ಸ್ ಗಳನ್ನು ಸೇವಿಸುವುದರಿಂದಲೂ ಮೊಡವೆಗಳು ಹೆಚ್ಚಾಗುತ್ತದೆ. ಹಾಗಾಗಿ, ಹೆಚ್ಚು ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿರುವ ಈ ಆಹಾರಗಳಿಂದ ದೂರವಿದ್ದರೆ ಮೊಡವೆಗಳಿಂದ ಮುಕ್ತಿ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









