Tips To Engage Children During Summer Holiday: ಬೇಸಿಗೆ ರಜೆ ಶುರುವಾಗಿದ್ದು, ದಿನಾಲೂ ಬೆಳಿಗ್ಗೆ ಎದ್ದು ಸ್ಕೂಲ್‌ಗೆ ಹೋಗುತ್ತಿದ್ದ ಮಕ್ಕಳೆಲ್ಲ ಸದ್ಯ ಪರೀಕ್ಷೆ ಎಂಬ ಗುಮ್ಮದಿಂದ ಪಾಸ್ ಆಗಿ ಹಾಯಾಗಿ ರಜೆ-ಮಜೆ ಕಳೆಯಬೇಕೆಂಬ ಪ್ಲಾನ್ ಮಾಡಿದ್ರೆ, ಅಯ್ಯೋ... ಬೆಳಿಗ್ಗೆಯಿಂದ ಸಂಜೆವರೆಗೆ ಮನೆ ತುಂಬೆಲ್ಲಾ ಓಡಾಡುತ್ತಾ ನಿಮಿಷಕ್ಕೊಂದು ಕಿತಾಪತಿ ಮಾಡುವ ಮಕ್ಕಳನ್ನು ಸುಮ್ಮನಿರುಸುವುದು ಪೋಷಕರಿಗೆ ದೊಡ್ಡ ತಲೆನೋವಾಗಿರುತ್ತದೆ. ಅಷ್ಟೇ ಅಲ್ಲದೆ ಮಕ್ಕಳು ಈ ರಜೆ ಸಮಯದಲ್ಲಿ ಹೆಚ್ಚು ಪೋನ್ ಮತ್ತು ವೀಡಿಯೋ ಗೇಮ್ಸ್‌ಗಳಿಗೆ ಅಡಿಕ್ಟ್ ಆಗುತ್ತಾರೆ ಎಂಬ ಕಾರಣಕ್ಕಾಗಿ ಮಕ್ಕಳನ್ನು "ಬೇಸಿಗೆ ಶಿಬಿರ"ಕ್ಕೆ ಕಳುಹಿಸುವುದೇ ಉತ್ತಮ ಪರಿಹಾರ ಎಂದು ಪೋಷಕರು ಭಾವಿಸುತ್ತಾರೆ. ಆದರೆ, ಮಕ್ಕಳ ಛೇಷ್ಟೇ ಕಡಿಮೆ ಮಾಡಲು ಇದೊಂದೆ ಪರಿಹಾರವಲ್ಲ.
ಬೇಸಿಗೆ ರಜೆಯಲ್ಲಿ ಮಕ್ಕಳು ಪೋನ್ ಹೆಚ್ಚಾಗಿ ಬಳಸುತ್ತಿದ್ದಾರೆ ಎಂಬ ಪೋಷಕರ ಕಂಪ್ಲೇಟ್ ಗೆ ಇಲ್ಲಿದೆ ಪರಿಹಾರ:-
ರಜೆಯ ದಿನಗಳಲ್ಲಿ ಪೋಷಕರು ಮಕ್ಕಳಲ್ಲಿ ಆದಷ್ಟು ಉತ್ತಮ ಹವ್ಯಾಸಗಳನ್ನು ಬೆಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಮುಖ್ಯ. ಮಕ್ಕಳನ್ನು ಈ ರೀತಿಯ ವ್ಯಸನಗಳಿಂದ ದೂರವಿರಿಸಿ ಅವರ ಜ್ಞಾನ ಅಭಿವೃದ್ದಿಗೆ ಸಹಾಯವಾಗುವ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಮಾಡಲು ಪೋಷಕರ ಪ್ರಯತ್ನ, ಪರಿಶ್ರಮ ಎರಡೂ ಅಗತ್ಯವಿದೆ. ಅಂತಹ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ...
ಆಟೋಟಗಳಲ್ಲಿ ಮಕ್ಕಳನ್ನು ತೊಡಗಿಸುವುದು:
ಮಕ್ಕಳಿಗೆ ಹೊಸದನ್ನು ಕಲಿಯಲು ಮತ್ತು ಹೊಸ ಹವ್ಯಾಸ ಅಥವಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಬೇಸಿಗೆ ರಜೆ ಉತ್ತಮ ಸಮಯವಾಗಿರುತ್ತದೆ. ಆದ್ದರಿಂದ ನಿಮ್ಮ ಮಕ್ಕಳೇನಾದರು ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರೆ ಇಂತಹ ಹವ್ಯಾಸದತ್ತ ಗಮನ ಹರಿಸಲು ಇದು ಸೂಕ್ತ ಸಮಯವಾಗಿದೆ. ಇದರ ಜೊತೆಗೆ ಆಟೋಟ ಅಭ್ಯಾಸಗಳಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಮತ್ತು ಅವರಲ್ಲಿ ನಾಯಕತ್ವ ಗುಣ ಸಹ ಬೆಳೆಯುತ್ತದೆ. ಉದಾಹರಣೆಗೆ: ಈಜು, ಸಾಕರ್, ಬ್ಯಾಸ್ಕೆಟ್‌ಬಾಲ್, ಬೇಸ್‌ಬಾಲ್ ಮತ್ತು ಫುಟ್‌ಬಾಲ್ ನಂತಹ ಕ್ರೀಡಾ ಚಟುವಟಿಕೆಗಳಿಗೆ ಅವರನ್ನು ಸೇರಿಸಬಹುದು.
ಇದನ್ನೂ ಓದಿ- ಬೇಸಿಗೆಯಲ್ಲಿ ನಿಮ್ಮ ಮನೆ ಸುತ್ತ ಈ 5 ಸಸ್ಯಗಳಿದ್ದರೆ ವಿಷಕಾರಿ ಪ್ರಾಣಿಗಳಿಗೆ ಅದು ಸೂಕ್ತ ವಾಸಸ್ಥಾನ..! ಎಚ್ಚರದಿಂದ ತಿರುಗಾಡಿ..
ಚಿತ್ರಕಲೆ ಮತ್ತು ಕರಕುಶಲ ಹವ್ಯಾಸ :
ನಿಮ್ಮ ಮಕ್ಕಳಿಗೆ ಚಿತ್ರಬಿಡಿಸುವ ಮತ್ತು ವಿವಿಧ ಸಣ್ಣಪುಟ್ಟ ಮನೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದನ್ನ ಹೇಳಿಕೊಡಿ. ಇದರಿಂದ ಅವರ ಯೋಜನಾಶಕ್ತಿ ಬೆಳೆಯುತ್ತದೆ. ಅವರ ಬಿಡುವಿನ ವೇಳೆಯಲ್ಲಿ ಇಂತಹ ಚಿತ್ರಕಲೆ ಮತ್ತು ಕರಕುಶಲ ನಿರ್ಮಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಅವರು ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅವರಲ್ಲಿ ಸೃಜನಶೀಲತೆ ಹೆಚ್ಚಿಸಲು ಈ ಮಾರ್ಗ ಸೂಕ್ತವಾಗಿದೆ. ಇದರಿಂದ ಮಕ್ಕಳು ಸುಂದರವಾದ ಕಲಾಕೃತಿಗಳನ್ನು ರಚಿಸುವುದರಲ್ಲಿ ಸಮಯವನ್ನು ಕಳೆಯುವುದರಿಂದ ಅವರಿಗೆ ಮನರಂಜನೆಯೊಂದಿಗೆ ತಮ್ಮ ನೆಚ್ಚಿನ ಹವ್ಯಾಸದ ಬಗ್ಗೆ ಹೆಚ್ಚು ಕಲಿತುಕೊಳ್ಳಲು ಸಹಕಾರಿಯಾಗುತ್ತದೆ.
ಸಂಗೀತ ಅಭ್ಯಾಸ ಅಥವಾ ಹೊಸ ಭಾಷೆ ಕಲಿಯುವಿಕೆ:
ಈ ರಜೆಯ ದಿನಗಳಲ್ಲಿ ಮಕ್ಕಳನ್ನು ಆದಷ್ಟು ಉತ್ತಮ ಹವ್ಯಾಸಗಳನ್ನು ಬೆಳಸಿಕೊಳ್ಳುವಂತೆ ಮಾಡಲು ಸಂಗೀತ ತರಬೇತಿ ಉತ್ತಮ ಮಾರ್ಗವಾಗಿದೆ. ಇದರಿಂದ ಮಕ್ಕಳು ಬರೀ ಹಾಡುವುದಷ್ಟೇ ಅಲ್ಲದೇ ಒಳ್ಳೆಯ ಸಂಸ್ಕಾರ, ಉತ್ತಮ ನಡುವಳಿಕೆಯನ್ನು ಕಲಿತುಕೊಳ್ಳುತ್ತಾರೆ. ಇದರೊಂದಿಗೆ ಮಕ್ಕಳಿಗೆ ಬೇರೆ ಭಾಷೆಗಳನ್ನು ಕಲಿಯುವಲ್ಲಿ ಅವರನ್ನು ತೊಡಗಿಸಿದಾಗ ಅವರು ಹೆಚ್ಚೆಚ್ಚು ಹೊಸ ವಿಷಯಗಳತ್ತ ಆಸಕ್ತಿ ವಹಿಸುತ್ತಾರೆ.
ಗಾರ್ಡನಿಂಗ್ :
ಮನೆಯ ಮುಂದಿರುವ ಸಣ್ಣ ಕೈತೋಟದ ನಿರ್ವಹಣೆಯ ಸಮಯದಲ್ಲಿ ಅದರಲ್ಲಿ ಬೆಳೆಯಬಹುದಾದ ಗಿಡಬಳ್ಳಿಗಳು ಮತ್ತು ತರಕಾರಿ-ಹಣ್ಣುಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದರಿಂದ ಅವರು ಆಹಾರದ ಮಹತ್ವ ಮತ್ತು ದಿನನಿತ್ಯ ನಡೆಯುವ ನಿಸರ್ಗದ ಅಚ್ಚರಿಗಳ ಬಗ್ಗೆ ತಿಳಿದು ಖುಷಿಪಡುತ್ತಾರೆ. ಕೊನೆಗೆ ತಾವೇ ಗಿಡಗಳನ್ನು ನೆಟ್ಟು ಅವುಗಳ ಬೆಳವೆಣಿಗೆಯನ್ನು ನೋಡಿ ಸಂತಸ ಪಡುತ್ತಾರೆ, ಇದರಿಂದ ಮಕ್ಕಳ ಬೇಸಿಗೆ ರಜೆಯನ್ನು ಇನಷ್ಟು ಸ್ಮರಣೀಯವಾಗಿಸಬಹುದು.
ಇದನ್ನೂ ಓದಿ- ಬೇಸಿಗೆಯಲ್ಲಿ ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದಿರಾ? ಇಲ್ಲಿದೆ ಸಂಪೂರ್ಣ ಟೂರ್ ಡಿಟೇಲ್ಸ್...!
ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಮಕ್ಕಳನ್ನು ವಸ್ತುಸಂಗ್ರಹಾಲಯ ಮತ್ತು ಪ್ರಾಣಿಸಂಗ್ರಹಾಲಯ ಮತ್ತು ಉದ್ಯಾನವನಗಳಿಗೆ ಕರೆದುಕೊಂಡು ಹೋಗುವುದು ಹಾಗೂ ಅವರಿಗೆ ಒಳ್ಳೆಯ ಪುಸ್ತಕಗಳನ್ನು ಓದಿಸುವುದು ಇವೆಲ್ಲವುಗಳಿಂದ ಮಕ್ಕಳು ಜ್ಞಾನವನ್ನು ಪಡೆಯುವುದರೊಂದಿಗೆ ಅವರ ಬೇಸಿಗೆ ರಜೆ ಮನರಂಜನೆಯಿಂದ ಕೂಡಿರುತ್ತದೆ. ಜೊತೆಗೆ ಈ ಒತ್ತಡಭರಿತ ಜೀವನಶೈಲಿಯ ನಡುವೆ ನಿಮ್ಮ ಮಕ್ಕಳೊಂದಿಗೆ ನೀವೂ ಸಹ ಒಂದಿಷ್ಟು ಸ್ಮರಣೀಯ ಕ್ಷಣಗಳನ್ನು ಆನಂದಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









