Numerology: ಈ ದಿನಾಂಕದಂದು ಜನಿಸಿದ ಹುಡುಗಿಯರು ತಮ್ಮ ತಂದೆಗೆ ಅದೃಷ್ಟವಂತರು..!
ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಆತನ ಸ್ವಭಾವ ಮತ್ತು ಭವಿಷ್ಯವನ್ನು ತಿಳಿಯಬಹುದು. ತಮ್ಮ ತಂದೆಗೆ ತುಂಬಾ ಅದೃಷ್ಟ ಎಂದು ಪರಿಗಣಿಸುವ ಹುಡುಗಿಯರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.
ನವದೆಹಲಿ: ಜ್ಯೋತಿಷ್ಯದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಅವನ ಅದೃಷ್ಟ ಮತ್ತು ದುರದೃಷ್ಟದಿಂದ ಹುಟ್ಟುತ್ತಾನೆ. ಎಲ್ಲವೂ ಪೂರ್ವನಿರ್ಧರಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಕೆಲವು ಜನರು ಕಡಿಮೆ ಶ್ರಮದ ನಡುವೆಯೂ ಎಲ್ಲವನ್ನೂ ಪಡೆಯುತ್ತಾರೆ. ಅದೇ ರೀತಿ ಕೆಲವು ಜನರು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಸಂತೋಷದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಇಂತಹ ಕೆಲವು ಜನ್ಮ ದಿನಾಂಕಗಳನ್ನು ಸಂಖ್ಯಾಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ದಿನಾಂಕದಂದು ಜನಿಸಿದ ಹುಡುಗಿಯರು ಅದೃಷ್ಟವಂತರು ಎಂದು ಹೇಳಲಾಗಿದೆ. ಈ ಹುಡುಗಿಯರು ಹುಟ್ಟಿನಿಂದಲೇ ತಂದೆಗೆ ಅದೃಷ್ಟವನ್ನು ತರುತ್ತಾರಂತೆ.
ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು
ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್ 3ರ ಹುಡುಗಿಯರು ಅದೃಷ್ಟದಲ್ಲಿ ಶ್ರೀಮಂತರು. ಇವರು ಹೆಚ್ಚಿನ ಅದೃಷ್ಟದೊಂದಿಗೆ ಜನಿಸುತ್ತಾರೆ. ಯಾವುದೇ ತಿಂಗಳ 3, 12, 21 ಮತ್ತು 30ರಂದು ಜನಿಸಿದ ಹುಡುಗಿಯರು ರಾಡಿಕ್ಸ್ ಸಂಖ್ಯೆ 3ನ್ನು ಹೊಂದಿರುತ್ತಾರೆ. ಈ ರಾಡಿಕ್ಸ್‌ನ ಹುಡುಗಿಯರು ತುಂಬಾ ಶ್ರಮಶೀಲರು, ಬುದ್ಧಿವಂತರು ಮತ್ತು ಸ್ವಭಾವತಃ ಕರುಣಾಳುಗಳಾಗಿರುತ್ತಾರೆ. ಇವರು ತಮ್ಮ ಗುರಿ ತಲುಪಲು ಹಗಲಿರುಳು ಶ್ರಮಿಸುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಲು ಯೋಚಿಸಿ ನಿರ್ಧರಿಸುತ್ತಾರೆ. ಇವರು ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಈ ಹುಡುಗಿಯರು ತಮ್ಮ ವೃತ್ತಿಜೀವನದಲ್ಲಿ ಬಹಳ ಉನ್ನತಮಟ್ಟಕ್ಕೆ ಹೋಗುತ್ತಾರೆ.
ಇದನ್ನೂ ಓದಿ: ಈ ಬಣ್ಣದ ಪಾದರಕ್ಷೆಗಳನ್ನು ತಪ್ಪಿಯೂ ಧರಿಸಬೇಡಿ: ಇದರಿಂದ ಅದೃಷ್ಟ ಕೆಡಬಹುದು!
ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ
ಈ ಹುಡುಗಿಯರು ಕುಟುಂಬ ಮತ್ತು ವೃತ್ತಿಪರ ಜೀವನ ಎರಡರಲ್ಲಿಯೂ ಉತ್ತಮ ಸ್ಥಿತಿಯಲ್ಲಿರುತ್ತಾರೆ. ಇವರು ಉತ್ತಮ ನಾಯಕತ್ವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ರಾಡಿಕ್ಸ್ 3ರ ಹುಡುಗಿಯರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದಿರುತ್ತಾರೆ. ಇವರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಈ ಹುಡುಗಿಯರು ಯಾರಿಗೂ ತಲೆಬಾಗಲು ಇಷ್ಟಪಡುವುದಿಲ್ಲ.
ಸಂಪತ್ತಿನ ವಿಷಯದಲ್ಲಿ ಅದೃಷ್ಟವಂತರು
ಈ ಹುಡುಗಿಯರು ಹುಟ್ಟಿನಿಂದಲೇ ಅದೃಷ್ಟವಂತರು. ಇವರಿಗೆ ಜೀವನದಲ್ಲಿ ಯಾವುದೇ ರೀತಿಯ ಕೊರತೆಯಿರುವುದಿಲ್ಲ. ಇವರು ಜನಿಸಿದ ಬಳಿಕ ತಂದೆಯ ಅದೃಷ್ಟವೇ ಬದಲಾಗುತ್ತದೆ. ಸಮಾಜದ ಒಳಿತಿಗಾಗಿಯೂ ಇವರು ಸಾಕಷ್ಟು ಕೆಲಸ ಮಾಡುತ್ತಾರೆ. ತಾಯಿ ಲಕ್ಷ್ಮಿದೇವಿ ಈ ಹೆಣ್ಣುಮಕ್ಕಳಿಗೆ ಯಾವಾಗಲೂ ದಯೆ ತೋರುತ್ತಾಳೆ. ಈ ಹುಡುಗಿಯರ ಜೀವನವು ಸಂತೋಷದಿಂದ ತುಂಬಿರುತ್ತದೆ.
ಇದನ್ನೂ ಓದಿ: ನಂಬಿಕೆ ದ್ರೋಹ ಮಾಡುವ ನಾಲ್ಕು ರಾಶಿಗಳಿವು! ಗುಟ್ಟು ಹೇಳುವ ಮುನ್ನ ಎಚ್ಚರ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ