)
home remedies for gray hair : ಕೂದಲು ಉದುರುವಿಕೆ ಮತ್ತು ಬಿಳಿ ಕೂದಲು ಸಮಸ್ಯೆಯಿಂದ ಜನರು ಚಿಕ್ಕವಯಸ್ಸಿನಲ್ಲೇ ತೊಂದರೆಗೊಳಗಾಗುತ್ತಾರೆ. ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಕೂದಲಿನ ಸಮಸ್ಯೆಗಳು ನಿರಂತರವಾಗಿ ಹೆಚ್ಚುತ್ತಿವೆ.
ಈರುಳ್ಳಿಯ ಸಿಪ್ಪೆಯಿಂದ ತಯಾರಿಸಿದ ಈ ಎಣ್ಣೆ ನಿಮ್ಮ ಬಿಳಿ ಕೂದಲಿಎ ಸಮಸ್ಯೆಗೆ ಪರಿಹಾರ ನೀಡುತ್ತದೆ. ಈ ಎಣ್ಣೆಯನ್ನು ತಯಾರಿಸಲು ಒಂದು ಬಟ್ಟಲು ಈರುಳ್ಳಿ ಸಿಪ್ಪೆ, ಕತ್ತರಿಸಿದ ಈರುಳ್ಳಿ, ಮಂತ್ಯೆ ಕಾಳು ಮತ್ತು ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.
ಬಾಣಲೆಯನ್ನು ಗ್ಯಾಸ್ ಮೇಲಿಟ್ಟು, 4 ಚಮಚ ಮೆಂತ್ಯ, ಈರುಳ್ಳಿ ಸಿಪ್ಪೆ ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಇದೆಲ್ಲವೂ ಕಪ್ಪಾಗಲು ಪ್ರಾರಂಭಿಸಿದಾಗ ಇದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿಸಿ.
ಬಿಳಿ ಕೂದಲಿನ ಸಮಸ್ಯೆಗೆ ಪ್ರಯೋಜನಕಾರಿ. ಈ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ಬಳಸುವುದರಿಂದ ನೆತ್ತಿಯ ರಂಧ್ರಗಳನ್ನು ತೆರೆಯುತ್ತದೆ. ಈರುಳ್ಳಿ ಸಿಪ್ಪೆ ಕಾಲಜನ್ ಅನ್ನು ಹೆಚ್ಚಿಸುತ್ತವೆ ಮತ್ತು ರಕ್ತ ಪರಿಚಲನೆಯನ್ನು ವೇಗಗೊಳಿಸುತ್ತದೆ. ಇದರಿಂದಾಗಿ ಬಿಳಿ ಕೂದಲು ಕ್ರಮೇಣ ಕಪ್ಪು ಬಣ್ಣಕ್ಕೆ ತಿರಗುತ್ತದೆ.
ಮೆಂತ್ಯ ಕಾಳು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಕೂದಲಿನ ಬೇರುಗಳಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ಸಿಪ್ಪೆಯ ಎಣ್ಣೆಯು ತಲೆಹೊಟ್ಟು ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ನೆತ್ತಿಯನ್ನು ಶುದ್ಧೀಕರಿಸುತ್ತದೆ. ತಲೆಹೊಟ್ಟು ತೆಗೆದುಹಾಕಲು ಸಹಾಯ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.