Benefits of Parijat Leaves : ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.ಪಾರಿಜಾತ ಹೂವುಗಳು ಅದ್ಭುತವಾದ ಪರಿಮಳವನ್ನು ಹೊಂದಿವೆ.ಇದನ್ನು ದೇವರ ಪೂಜೆಗೆ ಬಳಸುತ್ತಾರೆ. ಇದು ರಾತ್ರಿ ಹೊತ್ತಿನಲ್ಲಿ ಅರಳುವ ಹೂವು. ಇದೇ ಕಾರಣಕ್ಕೆ ಈ ಹೂವನ್ನು 'ರಾತ್ರಿಯ ರಾಣಿ'ಎಂದು ಕರೆಯಲಾಗುತ್ತದೆ.ಈ ಹೂವು ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. 


COMMERCIAL BREAK
SCROLL TO CONTINUE READING

ಪಾರಿಜಾ ಎಲೆಯ ಪ್ರಯೋಜನಗಳು : 
1.ಇಮ್ಯುನಿಟಿ ಬೂಸ್ಟರ್ :

ಹವಾಮಾನದಲ್ಲಿನ ಬದಲಾವಣೆಯಿಂದಾಗಿ,ವೈರಲ್ ಸೋಂಕಿನ ಅಪಾಯ  ಹೆಚ್ಚಾಗುತ್ತದೆ. ಇದರಿಂದಾಗಿ ಶೀತ,ಕೆಮ್ಮು ಸಾಮಾನ್ಯವಾಗಿ ಬಾಧಿಸುತ್ತದೆ.  ಇದನ್ನು ತಪ್ಪಿಸಲು,ಪಾರಿಜಾತದ ಸುಮಾರು 10 ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿಡಿ.ಒಂದು ಗಂಟೆಯ ನಂತರ ಈ ನೀರನ್ನು ಕುಡಿಯಬೇಕು. 


ಇದನ್ನೂ ಓದಿ : ಈರುಳ್ಳಿಯನ್ನು ಹೀಗೆ ಸೇವಿಸಿದರೆ ಕಲ್ಲು ಕಟ್ಟಿರುವ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರ ಹೋಗುವುದು!ಊತ, ಕೀಲುನೋವಿಗೂ ಇದು ಪರಿಹಾರ


2.ಸಂಧಿವಾತ : 
ವಯಸ್ಸಾದಂತೆ ಸಂಧಿವಾತದ ಸಮಸ್ಯೆ ಸಾಮಾನ್ಯವಾಗಿ ಕಾಣಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರು ಕೂಡಾ ಈ ಸಮಸ್ಯೆಯನ್ನು ಎದುರಿಸುವಂತಾಗುತ್ತದೆ.ಪಾರಿಜಾತ ಎಲೆಗಳಿಂದ ಸಾರಭೂತ ತೈಲವನ್ನು ತೆಗೆದು  ಅದಕ್ಕೆ ಕೆಲವು ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ.ನಂತರ ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ.


3.ಮಧುಮೇಹ :
ಮಧುಮೇಹ ರೋಗಿಗಳಿಗೆ ಪ್ರತಿ ಕ್ಷಣವೂ ತಮ್ಮ ಆರೋಗ್ಯದ ಚಿಂತೆ ಕಾಡುತ್ತಾ ಇರುತ್ತದೆ.ಪಾರಿಜಾತ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು  ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ದೇಹದ ಈ ಮೂರು ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ


4.ಕೂದಲ ಆರೋಗ್ಯ : 
ಅನಾರೋಗ್ಯಕರ ಆಹಾರ,ಮಾಲಿನ್ಯ ಮತ್ತು ರಾಸಾಯನಿಕ ಆಧಾರಿತ ಕೂದಲು ಉತ್ಪನ್ನಗಳ ಬಳಕೆಯಿಂದಾಗಿ,ಹೆಚ್ಚಿನ ಜನರು ಕೂದಲಿನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ದುರ್ಬಲ ಕೂದಲು,ಬಿಳಿ ಕೂದಲು ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಪಾರಿಜಾತದ ಎಲೆಯಿಂದ ಮಾಡಿದ ಕಷಾಯವನ್ನು ಕುಡಿದರೆ ಕೂದಲು ಕಪ್ಪಾಗಿ, ದಟ್ಟವಾಗಿ,ಹೊಳೆಯುವಂತೆ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.