)
Sake Bite First Aid Plants: ಮಳೆಗಾಲದ ತಂಪಿನ ವಾತಾವರಣದಲ್ಲಿ ಕಾಣಿಸಿಕೊಳ್ಳುವ ಹಾವುಗಳು, ಈ ಸಮಯದಲ್ಲಿ ಮನುಷ್ಯನ ಮೇಲೆ ದಾಳಿ ಮಾಡುವುದು ಸಹಜ. ಆದ್ದರಿಂದ ಈ ಸರ್ಪಗಳ ಕಡಿತದಿಂದಾಗುವ ತಕ್ಷಣದ ಅಪಾಯವನ್ನು ಕಡಿಮೆ ಮಾಡಲು ಗುಡ್ಡಗಾಡು ಮತ್ತು ಹಳ್ಳಿ ಪ್ರದೇಶಗಳಲ್ಲಿ ಈ ಸಸ್ಯಗಳನ್ನು ಬಳಸುತ್ತಾರೆ.
ಮಳೆಗಾಲದಲ್ಲಿ ಹವಾಮಾನ ಆರ್ದ್ರತೆಯಿಂದ ಕೂಡಿರುತ್ತದೆ. ಆದ್ದರಿಂದ ಹಾವುಗಳು ಒಣ ಹಾಗೂ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಹುತ್ತದಿಂದ ಹೊರಬರುತ್ತವೆ. ಇದರಿಂದಾಗಿ ಅವು ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಹಾವು ಕಡಿತದ ಅಪಾಯವೂ ಹೆಚ್ಚಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಜನರು ಕೆಲವು ಸಸ್ಯಗಳನ್ನು ಹಾವು ಕಡಿತದ ಪರಿಣಾಮಗಳನ್ನು ತಾತ್ಕಾಲಿಕವಾಗಿ ತಗ್ಗಿಸಲು ಬಳಸುತ್ತಾರೆ. ಆದರೆ ಇವು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವೈದ್ಯರ ಸಹಾಯ ದೊರೆಯುವವರೆಗೆ ಮಾತ್ರ ಇವು ಉಪಯುಕ್ತ.
ಕ್ಯಾಲೋಟ್ರೋಪಿಸ್ ಗಿಗಾಂಟಿಯಾ
ಈ ಗಿಡವು ದಪ್ಪ ಎಲೆಗಳು ಮತ್ತು ಬಿಳಿ ಹೂವುಗಳನ್ನು ಹೊಂದಿರುತ್ತದೆ ಅಷ್ಟೇ ಅಲ್ಲ ಇದು ಬಿಳಿಎಕ್ಕದ ಹೂವಿನ ಜಾತಿಗೆ ಸೇರಿದ ಸಸ್ಯವಾಗಿದೆ. ಇದರ ಕಾಂಡವನ್ನು ಮುರಿದರೆ ಬಿಳಿ ಹಾಲಿನಂತಹ ದ್ರವ ಹೊರಬರುತ್ತದೆ. ಹಳೆಯ ನಂಬಿಕೆಯ ಪ್ರಕಾರ, ಈ ಹಾಲನ್ನು ಹಾವು ಕಚ್ಚಿದ ಸ್ಥಳಕ್ಕೆ ಹಚ್ಚುವುದರಿಂದ ವಿಷ ಹರಡುವಿಕೆ ನಿಧಾನವಾಗುತ್ತದೆ
ಸರ್ಪಗಂಧ:
ಆಯುರ್ವೇದದಲ್ಲಿ ಪ್ರಸಿದ್ಧವಾದ ಈ ಸಸ್ಯದ ಬೇರು ವಿಶೇಷ ರಾಸಾಯನಿಕ ಸಂಯುಕ್ತಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅವು ದೇಹದಲ್ಲಿ ಹಾವಿನ ವಿಷದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ. ಇದರ ಹೆಸರೇ ‘ಸರ್ಪಗಂಧ’ ಆಗಿರುವುದರಿಂದ ಹಾವುಗಳೊಂದಿಗೆ ಅದರ ನಿಕಟ ಸಂಬಂಧವಿದೆ ಎಂದು ಗ್ರಾಮೀಣ ವೈದ್ಯರು ಹೇಳುತ್ತಾರೆ.
ಹಾಗಲಕಾಯಿ
ಹಾಗಲಕಾಯಿ ಗಿಡವು ಬಿಸಿ ಮತ್ತು ಆದ್ರ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದರ ಹಣ್ಣುಗಳನ್ನು ನಾವು ತರಕಾರಿಗಳಾಗಿ ಸೇವಿಸುತ್ತೇವೆ. ಅಷ್ಟೇ ಅಲ್ಲ ಆಯುರ್ವೇದದಲ್ಲಿ ಈ ಗಿಡದ ಬೇರನ್ನು ಪುಡಿಮಾಡಿ ಹಾಲಿನೊಂದಿಗೆ ಸೇವಿಸಿದರೆ ಹಾವು ಕಡಿತದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಹಸಿರು ಚಿರೆಟ್ಟಾ
ಈ ಸಸ್ಯದ ಎಲೆಗಳನ್ನು ಹಾವು ಕಡಿತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸ್ಥಳೀಯ ವೈದ್ಯರ ಪ್ರಕಾರ, ಎಲೆಗಳನ್ನು ರುಬ್ಬಿ ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ವಿಷದ ಪರಿಣಾಮ ಕಡಿಮೆಯಾಗುತ್ತದೆ.
ಈ ಸಸ್ಯಗಳು ಗ್ರಾಮೀಣ ಜನಪ್ರಿಯ ಚಿಕಿತ್ಸೆಗಳಲ್ಲಿ ಬಳಕೆಯಾಗುತ್ತವೆ. ಆದರೆ ಹಾವು ಕಡಿದ ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ. ಈ ಸಸ್ಯಗಳನ್ನು ತಾತ್ಕಾಲಿಕವಾಗಿ ಮಾತ್ರ ಬಳಸಬೇಕು, ಶಾಶ್ವತ ಪರಿಹಾರವಾಗಿ ಅಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ. ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ. ಇವುಗಳನ್ನು ಪಾಲಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ