Ram Navami 2025: ಶ್ರೀರಾಮನವಮಿಯಂದು ಇದೊಂದು ಕೆಲಸ ಮಾಡಿದರೆ ಹನುಮಂತನಂತೆ ನೀವು ಶ್ರೀರಾಮನಿಗೆ ಹತ್ತಿರವಾಗುತ್ತೀರಿ!

Ram Navami 2025: ಶ್ರೀರಾಮನವಮಿಯಂದು ರಾಮನ ಕೃಪೆಗೆ ಪಾತ್ರರಾಗಲು ನೀವು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು, ವಿವಿಧ ರಾಶಿಯ ಜನರು ಕೆಲವು ಕೆಲಸಗಳನ್ನು ಮಾಡುವ ಮೂಲಕ ಶ್ರೀರಾಮನನ್ನು ಒಲಿಸಿಕೊಳ್ಳಬಹುದು  

Written by - Zee Kannada News Desk | Last Updated : Apr 5, 2025, 12:16 PM IST
  • ಚೈತ್ರ ಮಾಸದಲ್ಲಿ ಶುಕ್ಲ ಪಕ್ಷದ ಒಂಬತ್ತನೆ ದಿನವನ್ನು ಶ್ರೀರಾಮನವಮಿಯನ್ನು ಆಚರಿಸಲಾಗುತ್ತಿದೆ.
  • ಶ್ರೀರಾಮನನ್ನು ಒಲಿಸಿಕೊಳ್ಳಬೇಕಾದರೆ, ಹನುಮಂತನನ್ನು ಪೂಜಿಸಬೇಕು ಎಂಬ ನಂಬಿಕೆ ಇದೆ.
  • ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ, ಶ್ರೀರಾಮನು ನಿಮ್ಮ ಭಕ್ತಿಗೆ ಒಲಿಯುತ್ತಾನಂತೆ.
Ram Navami 2025: ಶ್ರೀರಾಮನವಮಿಯಂದು ಇದೊಂದು ಕೆಲಸ ಮಾಡಿದರೆ ಹನುಮಂತನಂತೆ ನೀವು ಶ್ರೀರಾಮನಿಗೆ ಹತ್ತಿರವಾಗುತ್ತೀರಿ!

Ram Navami 2025: ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಚೈತ್ರ ಮಾಸದಲ್ಲಿ ಶುಕ್ಲ ಪಕ್ಷದ ಒಂಬತ್ತನೆ ದಿನವನ್ನು ಶ್ರೀರಾಮನವಮಿಯನ್ನು ಆಚರಿಸಲಾಗುತ್ತಿದೆ, ಈ ದಿನದಂದು ಶ್ರೀರಾಮ ಹುಟ್ಟಿದ ದಿನ ಎಂದು ನಂಬಲಾಗಿದ್ದ ದೇಶಾದ್ಯಂತ ಜನರು ಈ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಶ್ರೀರಾಮನನ್ನು ಒಲಿಸಿಕೊಳ್ಳಬೇಕಾದರೆ, ಹನುಮಂತನನ್ನು ಪೂಜಿಸಬೇಕು ಎಂಬ ನಂಬಿಕೆ ಇದೆ. 

Add Zee News as a Preferred Source

ಹಿಂದೂ ಧರ್ಮದಲ್ಲಿ ಶ್ರೀ ರಾಮನಗಿ ವಿಶೇಷವಾದ ಮಹತ್ವ ಇದೆ. ಎಲ್ಲಾ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ಭಾರತದಲ್ಲಿ ಶ್ರೀರಾಮನಿಗಂತೂ ಹೆಚ್ಚಿನ ಮಹತ್ವವಾದ ಸ್ಥಾನವಿದೆ. 2025 ರಲ್ಲಿ ಶ್ರೀರಾಮ ನವಮಿಯನ್ನು ಏಪ್ರಿಲ್‌ 6 ರಂದು ಭಾನುವಾರ ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ, ಶ್ರೀರಾಮನು ನಿಮ್ಮ ಭಕ್ತಿಗೆ ಒಲಿಯುತ್ತಾನಂತೆ. 

ಇದನ್ನೂ ಓದಿ: ವರ್ಷಗಳ ನಂತರ ಈ ರಾಶಿಯವರಿಗೆ ಶುಕ್ರದೆಸೆ ! ಕೈ ಹಿಡಿಯುವುದು ಅದೃಷ್ಟ, ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು, ಸಂಪತ್ತು ವೃದ್ದಿಯಾಗುವ ಕಾಲ !

ಮೇಷ ರಾಶಿ:
ಈ ದಿನದಂದು ಮೇಷ ರಾಶಿಯವರು ಶ್ರೀರಾಮನಿಗೆ ದಾಳಿಂಬೆಯನ್ನು ಅರ್ಪಿಸಿ, ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ, ನಿಮ್ಮ ಜೀವನದಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗುತ್ತದೆ.

ವೃಷಭ ರಾಶಿ:
ರಾಮನವಮಿಯಂದು ವೃಷಭ ರಾಶಿಯವರು ರಾಮ ಸ್ತುತಿಯನ್ನು ಪಠಿಸಬೇಕು, ಅಷ್ಟೇ ಅಲ್ಲದೆ ಸೀತಾ ಮಾತೆಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ.

ಮಿಥುನ ರಾಶಿ:
ಶ್ರೀರಾಮನವಮಿಯಂದು ಮಿಥುನ ರಾಶಿಯವರು, "ಓಂ ರಾಮಾಯ ನಮಃ" ಎಂಬ ಅತೀತ್ರವನ್ನು 108 ಬಾರಿ ಪಠಿಸುವುದರಿಂದ ನಿಮ್ಮ ಕ್ಷಟಗಳಿಗೆ ಪರಿಹಾರ ಸಿಗುತ್ತದೆ. ಶ್ರೀರಾಮನಿಗೆ ಈ ದಿನದಂದು ಸಿಹಿ ತಿಂಢಿ ಅರ್ಪಿಸಿ ಪೂಜೆ ಮಾಡಿದರೆ, ನಿಮಗೆ ಕಷ್ಟಗಳಿಂದ ಪರಿಹಾರ ದೊರೆಯುತ್ತದೆ.

ಇದನ್ನೂ ಓದಿ: ಹೋಳಿ ಹಬ್ಬಕ್ಕೂ ಮನ್ನವೇ ಬದಲಾಗುವುದು ಈ ರಾಶಿಯ ಬದುಕು.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ, ರಾಜ ವೈಭೋಗ.. ಅದೃಷ್ಟದ ಪರ್ವಕಾಲ ಶುರು!

ಕರ್ಕಾಟಕ ರಾಶಿ: 
ಈ ದಿನದಂದು ಕರ್ಕಾಟಕ ರಾಶಿಯ ಜನರು ಹಳದಿ ಬಟ್ಟೆಯನ್ನು ಧರಿಸಿ, ಶ್ರೀರಾಮನ ಅಷ್ಟಕವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಈ ದಿನದಂದು ಶ್ರೀರಾಮನಿಗೆ ತೆಂಗಿನ ಕಾಯಿ ಅರ್ಪಿಸುವುದರಿಂದ ನೀವು ರಾಮನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.

ಸಿಂಹ ರಾಶಿ:
ಈ ದಿನದಂದು ಸಿಂಹ ರಾಶಿಯವರು ಸುಂದರಕಾಂಡವನ್ನು ಪಠಿಸಿ, ಸೇಬಿನಿಂದ ಪ್ರಸಾದ ಮಾಡಿ ಭಕ್ರಿಗೆ ಹಂಚುವುದರಿಂದ ತೊಡುಕುಗಳಿಂದ ಪರಿಹಾರ ಲಭಿಸಿ, ನಿಮ್ಮ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಕನ್ಯಾ ರಾಶಿ:
ರಾಮನವಮಿಯಂದು ಕನ್ಯಾ ರಾಶಿಯ ಜನರು, ರಾಮ ಮಂಗಳಶಾಸನವನ್ನು ಪಠಿಸಿ, ಶ್ರೀರಾಮನಿಗೆ ತುಳಸಿಯನ್ನು ಅರ್ಪಿಸುವುದರಿಂದ ನಿಮ್ಮ ಜೀವನದ ಎಲ್ಲಾ ಹಾದಿಗಲು ಸುಗಮವಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Shash Rajyog: ಇಂದಿನಿಂದ ಈ ರಾಶಿಯವರಿಗೆ ಶನಿ ಬಲ, ಕಷ್ಟ ಕೊಡುವಾತನಿಂದಲೇ ಒಲಿಯಲಿದೆ ಅದೃಷ್ಟ, ಶ್ರೀಮಂತಿಕೆ ಯೋಗ

ತುಲಾ ರಾಶಿ:
ರಾಮನವಮಿಯಂದು ತುಲಾ ರಾಶಿಯವರು ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ರಾಮನ ಪೂಜೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ವೃಶ್ಚಿಕ ರಾಶಿ:
ಶ್ರೀರಾಮನವಮಿಯಂದು ವೃಶ್ಚಿಕ ರಾಶಿಯವರು, ಹನುಮಾನ್‌ ಚಾಲಿಸಾವನ್ನು ಪಠಿಸುವುದರಿಂದ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಈ ದಿನ ನೀವು ದೇವಸ್ಥಾನಕ್ಕೆ ಬೇಟಿ ನೀಡಿ ದೇವರಿಗೆ ಅವಲಕ್ಕಿಯಿಂದ ಮಾಡಿದ ಪ್ರಸಾದವನ್ನು ಅರ್ಪಿಸಿದರೆ ಜೀವನದಲ್ಲಿನ ಕಷ್ಟಗಳು ದೂರವಾಗುತ್ತದೆ ಎಂದು ನಂಬಲಾಗಿದೆ.

ಧನು ರಾಶಿ: 
ಈ ದಿನದಂದು ಧನು ರಾಶಿಯವರು ಹಿಟ್ಟಿನಲ್ಲಿ ಮಾಡಲಾದ ಲಾಡುಗಳನ್ನು ಶ್ರೀರಾಮನಿಗೆ ಅರ್ಪಿಸಿ, ಸುಂದರಕಾಂಡವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ದಿನಭವಿಷ್ಯ 15-02-2025: ಶನಿವಾರದಂದು ಸುಕರ್ಮ ಯೋಗ, ಈ ರಾಶಿಯವರಿಗೆ ಭರಪೂರ ಲಾಭ, ಸಂಪತ್ತಿನ ಸುಯೋಗ

ಮಕರ ರಾಶಿ:
ಶರೀರಾಮನವಮಿಯಂದು ಮಕರ ರಾಶಿಯ ಜನರು ಶ್ರೀರಾಮನಿಗೆ ದ್ರಾಕ್ಷಿಯನ್ನು ಅರ್ಪಿಸಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಶ್ರೀರಾಮನ ಕೃಪೆಗೆ ಪಾತ್ರರಾಗಬಹುದು.

ಕುಂಭ ರಾಶಿ:
ಕುಂಭ ರಾಶಿಯವರು ಶ್ರೀರಾಮನವಮಿಯಂದು ತಲೆ ಸ್ನಾನ ಮಾಡಿ, ಶ್ರೀರಾಮನ ಮಂದಿರದಲ್ಲಿ ದೇವರ ದರ್ಶನ ಪಡೆಯುವುದರಿಂದ ಸಕಲ ಕಷ್ಟಗಳು ತಾನಗೇ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಮೀನಾ ರಾಶಿ: 
ಶ್ರೀರಾಮನವಮಿಯಂದು ಮೀನಾ ರಾಶಿಯವರು, ಶ್ರೀರಾಮನ ಸ್ತೀತ್ರವನ್ನು ಪಠಿಸಿ, ದೇವಸ್ಥಾನಕ್ಕೆ ಬಂದ ಭಕ್ತರಿಗೆ ಜಿಲೇಬಿಯನ್ನು ಅರ್ಪಿಸುವುದರಿಂದ ಶುಭ ಫಲ ಲಭಿಸುತ್ತದೆ, ಜೀವನದಲ್ಲಿ ಸಂತೋಷ, ಸುಖ ಸಮೃದ್ದಿಯಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಶನಿದೇವನಿಂದಲೇ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ!ಮನೆ, ಆಸ್ತಿ, ವಾಹನ ಖರೀದಿ ಭಾಗ್ಯ!ಉಕ್ಕಿ ಹರಿಯುವುದು ಧನಸಂಪತ್ತು!ಐಶಾರಾಮಿ ಜೀವನ ಕರುಣಿಸುವನು ಶನಿಮಹಾತ್ಮ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿಯನ್ನು ಹಾಗೂ ಧಾರ್ಮಿಕ ಜ್ಞಾನವನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ

Trending News