Relationship Tips: ತಂತ್ರಜ್ಞಾನ ಮುಂದುವರೆದಂತೆ ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿವೆ. ಇಂದಿನ ಒತ್ತಡಮಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಸಮಸ್ಯೆಗಳು ಬೆಂಬಿಡದ ಭೂತದಂತೆ ಕಾಡುತ್ತಿರುತ್ತವೆ. ದುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮಹಿಳೆಯರು ಸಹ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದು ಮದುವೆಯಾಗುವ ಎಷ್ಟೋ ದಂಪತಿ ಹೊಂದಾಣಿಕೆಯ ಸಮಸ್ಯೆಯಿಂದ ಸಂಬಂಧಕ್ಕೆ ತೀಲಾಂಜಲಿ ಇಡುತ್ತಿದ್ದಾರೆ. ವಿಚ್ಛೇದನ ಅಥವಾ ಡಿವೋರ್ಸ್ ಅನ್ನೋದು ಇಂದು ಕಾಮನ್ ಆಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್ ಆದ ದಂಪತಿ ಇದ್ದಾರೆ. ಮೊದಲು ಡಿವೋರ್ಸ್ ಅನ್ನೋದು ಕೇವಲ ಶ್ರೀಮಂತರು ಮತ್ತು ಸೆಲೆಬ್ರೆಟಿಗಳಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಇಂದು ಬಡವ-ಶ್ರೀಮಂತ ಎಲ್ಲರಲ್ಲಿಯೂ ಇದು ಕಾಮನ್ ಆಗಿದೆ.
ಹೊಂದಾಣಿಕೆಯ ಕೊರತೆಯಿಂದ ಇಂದು ಅನೇಕ ಜೋಡಿಗಳು ಪ್ರತಿದಿನವೂ ಜಗಳವಾಡುತ್ತಾ ಜೀವನ ನಡೆಸುತ್ತಿರುತ್ತಾರೆ. ಇಂದಿಗೂ ಹೆಚ್ಚಾಗಿ ಹೆಣ್ಣುಮಕ್ಕಳ ಮೇಲೆಯೇ Domestic violence ನಡೆಯುತ್ತದೆ ಎಂದು ನಂಬಲಾಗಿದೆ. ಆದರೆ ಇದೀಗ ಕಾಲ ಬದಲಾಗಿದೆ. ಗಂಡುಮಕ್ಕಳ ಮೇಲೂ ಇದು ನಡೆಯುತ್ತದೆ ಅನ್ನೋ ಆರೋಪಗಳಿವೆ. ಎಷ್ಟೋ ಗಂಡುಮಕ್ಕಳು ತಮ್ಮ ಹೆಂಡತಿ ನೀಡುವ ಚಿತ್ರಹಿಂಸೆಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದೆಷ್ಟೋ ಜನ ತಮ್ಮ ಹೆಂಡತಿಯರು ನೀಡುವ ಹಿಂಸೆಯನ್ನ ಸಹಿಸಿಕೊಂಡು ಬಾಳುತ್ತಿದ್ದಾರೆ ಅನ್ನೋ ಆರೋಪಗಳಿವೆ. ಇಂದು ಗಂಡುಮಕ್ಕಳ ಬಾಳು, ʼಮನೆಯಲ್ಲಿ ಇಲಿ, ಹೊರಗಡೆ ಹುಲಿʼ ಅನ್ನೋ ಗಾದೆ ಮಾತಿನಂತಾಗಿದೆ. ಇಂದು ಹೆಣ್ಣು ಮಕ್ಕಳ ಕಣ್ಣೀರಿಗೆ ಇರುವ ಬೆಲೆ, ಗಂಡು ಮಕ್ಕಳ ನೋವು, ಸಂತಾಪಕ್ಕೆ ಇಲ್ಲದಂತಾಗಿದೆ. ಗಂಡು ಮಕ್ಕಳ್ಳು ಅತ್ತರೆ ಅಥವಾ ಮಾನಸಿಕ ನೋವನ್ನು ಹೇಳಿಕೊಂಡರೆ ಅವರನ್ನು ಅಣಕಿಸುವವರು ಹೆಚ್ಚಾಗಿ ನಮ್ಮ ಸಮಾಜದಲ್ಲಿದ್ದಾರೆ.
ಇದನ್ನೂ ಓದಿ: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಸಾಕ್ಷಾತ್ ದೇವಿಯ ಸ್ವರೂಪ! ಹುಟ್ಟಿದಲ್ಲದೇ, ಮೆಟ್ಟಿದ ಮನೆಗೂ ಇವರೇ ಅದೃಷ್ಟ..
ಗಂಡು ಮಕ್ಕಳು ಅಳುವುದೇ ತಪ್ಪು ಎಂದು ಹೇಳುವ ಸಮಾಜ ನಮ್ಮದು. ಗಂಡು ಮಕ್ಕಳಿಗೂ ಮನಸ್ಸಿದೆ, ಭಾವನೆಗಳಿವೆ ಮತ್ತು ಅವರಿಗೂ ನೋವು ಆಗುತ್ತೆ ಅನ್ನೋದನ್ನ ನಮ್ಮ ಸಮಾಜ ಮರೆತುಬಿಟ್ಟಿದೆ. ಗಂಡು-ಹೆಣ್ಣಿನ ನಡುವೆ ಸಮಾನತೆಗೆ ಹೋರಾಡುತ್ತಾ, ಎಲ್ಲೋ ಇದರ ಅರ್ಥವನ್ನೇ ಬದಲಿಸಲಾಗಿದೆ ಅನಿಸುತ್ತದೆ. ಮಾನಸಿಕ ಅಥವಾ ಶಾರೀರಿಕ ನೋವು ಹೆಣ್ಣಿಗಾದರೂ, ಗಂಡಿಗಾದರೂ ಅದು ಒಂದೇ ಪರಿಣಾಮ ಬೀರುತ್ತದೆ ಎನ್ನುವುದು ಎಷ್ಟು ಸತ್ಯವೋ, ಒಂದು ಹೆಣ್ಣಿನ ಮೈ ಮೇಲೆ ಕೈ ಮಾಡಿದ ಗಂಡಿಗೆ ತಕ್ಕ ಶಿಕ್ಷೆ ಆಗಬೇಕೆಂದು ಹೇಗೆ ಹೋರಾಡುತ್ತೇವೆಯೋ; ಅದೇ ರೀತಿ ಗಂಡಿನ ಶೋಷಣೆಗೂ ಸಮಾನ ಪ್ರಾಮುಖ್ಯತೆ ಕೊಡಬೇಕು ಅಲ್ಲವೇ?
ಹೀಗಾಗಿ ಹೆಂಡತಿ ಗಂಡನನ್ನು ಹೊಡೆದರೆ ಅಥವಾ ಯಾವುದೇ ರೀತಿಯ ಶೋಷಣೆಗೆ ಗುರಿಪಡಿಸಿದೆ, ಅವರು ಅದನ್ನು ಹಂಚಿಕೊಂಡರೆ ಅವಮಾನವಾಗುತ್ತೆ ಅಂತಾ ಸುಮ್ಮನಿದ್ದು ಸಹಿಸಿಕೊಳ್ಳದೆ; ಹತ್ತಿರದವರೊಡನೆ ಈ ವಿಷಯವನ್ನು ಪ್ರಸ್ತಾಪಿಸಿ ಸಹಾಯ ಪಡೆದುಕೊಳ್ಳಬೇಕು. ಈ ವಿಷಯವನ್ನ ಬೇರೆಯವರ ಬಳಿ ಹಂಚಿಕೊಳ್ಳಲು ಅಂಜುವವರು, ಯಾವುದೇ ಕಾರಣಕ್ಕೂ ಹೆದರದೆ ಈ ವಿಚಾರವಾಗಿ ಮನ ಬಿಚ್ಚಿ ಮಾತಾಡಬೇಕು. ಬೇರೆಯವರ ಬಳಿ ನೀವು ಸಹಾಯ ಕೇಳುವುದು ಯಾವುದೇ ಕಾರಣಕ್ಕೂ ತಪ್ಪಲ್ಲ.
ತಾಳ್ಮೆ ಹೆಣ್ಣಿನ ಗುಣ. ಆದರೆ ಗಂಡನನ್ನೇ ಹೊಡೆಯುವಷ್ಟು ಮಿತಿ ಮೀರಿದರೆ ಆಕೆ ಗಂಡನಿಂದ ಎಷ್ಟು ಯಾತನೆಗೆ ಒಳಗಾಗಿದ್ದಾಳೆ ಅನ್ನೋದು ಊಹೆಗೂ ನಿಲುಕದ್ದು. ಇಲ್ಲಿ ತಪ್ಪು ಗಂಡನದ್ದೇ ಇರಬಹುದು. ಗೌಪ್ಯವಾಗಿ ಕ್ಷಮೆ ಕೇಳಿ ವಾತಾವರಣ ತಿಳಿಗೊಳಿಸಬಹುದು. ಯಾಕೆಂದರೆ ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕʼ ಅನ್ನೋ ಗಾದೆ ಮಾತೇ ಇದೆಯಲ್ಲ. ಗಂಡ-ಹೆಂಡತಿ ಪರಸ್ಪರ ತಿಳಿದುಕೊಂಡು ಜೀವನ ನಡೆಸಬೇಕು. ಪರಸ್ಪರ ಗೌರವಪೂರ್ವಕವಾಗಿ ನಡೆದುಕೊಂಡಾಗಲೇ ನಿಮ್ಮ ದಾಂಪತ್ಯ ಜೀವನ ಮತ್ತಷ್ಟು ಸುಂದರವಾಗಿರುತ್ತದೆ. ಸುಖಾಸುಮ್ಮನೇ ಪ್ರತಿದಿನ ಜಗಳವಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









